Children

ಕೋವಿಡ್ ನಿಂದ ಅನಾಥರಾದ ಮಕ್ಕಳ ಆರೋಗ್ಯ ಮತ್ತು ಶಿಕ್ಷಣ ಸರ್ಕಾರದ ಜವಾಬ್ದಾರಿ: ಸಿಎಂ ಬೊಮ್ಮಾಯಿ
ಕೋವಿಡ್ ನಿಂದ ತಂದೆತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

15-18 ವರ್ಷದವರಿಗೆ ಸದ್ಯ ಕೋವಾಕ್ಸಿನ್ ಮಾತ್ರ, 2ನೇ ಡೋಸ್ ಆಗಿ 39 ವಾರದ ನಂತರ ಬೂಸ್ಟರ್ ಡೋಸ್
ಎರಡನೇ ಡೋಸ್ ತೆಗೆದುಕೊಂಡು 39 ವಾರ ಆಗಿರುವ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಇತರೆ ಅನಾರೋಗ್ಯ ಸಮಸ್ಯೆಗೊಳಗಾದವರು ಮಾತ್ರ ಜನವರಿ 10 ರಿಂದ ಆರಂಭವಾಗಲಿರುವ ಮೂರನೇ ಡೋಸ್ ಲಸಿಕೆ ತೆಗೆದುಕೊಳ್ಳಲು ಅರ್ಹರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

ಕೋವಿಡ್ ಲಸಿಕೆ: 15-18 ವರ್ಷ ವಯಸ್ಸಿನ ಮಕ್ಕಳ ನೋಂದಣಿ ಜ.1ರಿಂದ ಆರಂಭ, ಸ್ಟೂಡೆಂಟ್ ಐಡಿ ಕಾರ್ಡ್ ಬಳಕೆಗೆ ಅವಕಾಶ
15 ರಿಂದ 18 ವರ್ಷದೊಳಗಿನ ಹದಿಹರೆಯದವರು ತಮ್ಮ ವಿದ್ಯಾರ್ಥಿ ಗುರುತಿನ ಚೀಟಿಗಳನ್ನು ಬಳಸಿಕೊಂಡು ಜನವರಿ 1 ರಿಂದ ಕೋವಿನ್ ಅಪ್ಲಿಕೇಶನ್‌ನಲ್ಲಿ ಕೋವಿಡ್-19 ಲಸಿಕೆಗಳಿಗಾಗಿ ನೋಂದಾಯಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

ಮೊಟ್ಟೆ, ಹಾಲು, ಬಾಳೆಹಣ್ಣು ವಿತರಣೆಯಿಂದ ಮಕ್ಕಳ ಪೌಷ್ಟಿಕಾಂಶ ಹೆಚ್ಚಳ: ಸಮೀಕ್ಷೆ
ಶಾಲೆಗೆ ಹೋಗುವ ಮಕ್ಕಳಿಗೆ ಬಿಸಿ ಊಟದ ವೇಳೆ ಮೊಟ್ಟೆ ನೀಡುವ ಕುರಿತು ರಾಜ್ಯದಲ್ಲಿ ಚರ್ಚೆಗಳು ನಡೆಯುತ್ತಿರುವ ನಡುವಲ್ಲೇ ಮೊಟ್ಟೆ, ಹಾಲು ಮತ್ತು ಬಾಳೆಹಣ್ಣು ಸೇವನೆಯಿಂದ ಐದು ಜಿಲ್ಲೆಗಳ ಅಂಗನವಾಡಿಗಳಲ್ಲಿ ದಾಖಲಾದ ಆರು ತಿಂಗಳಿಂದ ಆರು ವರ್ಷದವರೆಗಿನ ಅಪೌಷ್ಟಿಕ ಮಕ್ಕಳ ಪೌಷ್ಟಿಕತೆಯ ಮಟ್ಟ ಸುಧಾರಿಸಿದೆ ಎಂದು ಸರ್ಕಾರ ನಡೆಸಿದ ಸಮೀಕ್ಷಾ ವರದಿಯಿಂದ ತಿಳಿದುಬಂದಿದೆ.

ಮೀಜೊರಾಂನಲ್ಲಿ 44 ಮಕ್ಕಳಿಗೆ ಕೋವಿಡ್ ಪಾಸಿಟಿವ್ ದೃಢ
ಮಿಜೋರಾಂನಲ್ಲಿ 44 ಮಕ್ಕಳಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. 44 ಮಕ್ಕಳು ಸೇರಿದಂತೆ 214 ಜನರಿಗೆ ಕೋವಿಡ್ -19 ಸೋಂಕು ಪತ್ತೆಯಾಗುವುದರೊಂದಿಗೆ ಗುರುವಾರ ಒಟ್ಟು ಪ್ರಕರಣಗಳ ಸಂಖ್ಯೆ 1,40,143ಕ್ಕೆ ಏರಿಕೆಯಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮಕ್ಕಳಿಗೆ ಸದ್ಯಕ್ಕೆ ಕೋವಿಡ್-19 ಲಸಿಕೆ ಅಗತ್ಯವಿಲ್ಲ: ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಮಾಹಿತಿ
ಈಗ ಮಕ್ಕಳಿಗೆ ಕೋವಿಡ್-19 ಲಸಿಕೆ ನೀಡುವ ಅಗತ್ಯವಿಲ್ಲ ಎಂದು ದೇಶದಲ್ಲಿ ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಸದಸ್ಯ ಡಾ. ಜಯ ಪ್ರಕಾಶ್ ಮುಳಿಯಿಲ್ ಹೇಳಿದ್ದಾರೆ. ಮಕ್ಕಳು ಚೆನ್ನಾಗಿದ್ದು, ಅವರಿಗೆ ಈಗ ಲಸಿಕೆಯ ಅಗತ್ಯವಿಲ್ಲ ಎಂದು ಸಮಿತಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ.

ಚಳಿಗಾಲದಲ್ಲಿ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ: ಸತ್ಯ ಸಂಗತಿ ವರ್ಸಸ್ ಮಿಥ್ಯ ತಿಳಿವಳಿಕೆ
ಚಳಿಗಾಲ ಶುರುವಾದರೆ ಸಾಕು ಎಲ್ಲರಿಗೂ ಒಂದಲ್ಲಾ ಒಂದು ರೀತಿಯಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಚಳಿಗಾವು ರೋಗಕಾರಕಗಳು ಸುಲಭವಾಗಿ ಹರಡಲು ಸೂಕ್ತವಾದ ವಾತಾವರಣವನ್ನು ಒದಗಿಸುತ್ತದೆ. ಶೀತ, ಕೆಮ್ಮು, ಉಸಿರಾಟ ಸಮಸ್ಯೆಗಳು ಸೇರಿದಂತೆ ಮೊದಲಾದ ಆರೋಗ್ಯ ಸಮಸ್ಯೆಗಳಂತೂ ಸಾಮಾನ್ಯವಾಗಿ ಬಿಡುತ್ತವೆ.

ನಕಲಿ ಆಧಾರ್ ಕಾರ್ಡ್ ನೊಂದಿಗೆ 224 ಮಕ್ಕಳು ಬೆಂಗಳೂರಿಗೆ ಕಳ್ಳ ಸಾಗಣೆ
ನಕಲಿ ಆಧಾರ್ ಕಾರ್ಡ್ ಗಳೊಂದಿಗೆ ಕೆಲಸಕ್ಕಾಗಿ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಮಾನವ ಕಳ್ಳ ಸಾಗಣೆದಾರರು ಬೆಂಗಳೂರಿಗೆ ಕರೆತರುತ್ತಿದ್ದಾರೆ. ಈ ವರ್ಷ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ವೊಂದರಲ್ಲಿಯೇ ಇಂತಹ 224 ಪ್ರಕರಣಗಳನ್ನು ರೈಲ್ವೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಅನಿವಾರ್ಯ ಪರಿಸ್ಥಿತಿ ಉಂಟಾದರೆ ಶಾಲೆ ಬಂದ್, ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುವುದಿಲ್ಲ: ಶಿಕ್ಷಣ ಸಚಿವ ಬಿ ಸಿ ನಾಗೇಶ್
ರಾಜ್ಯದ ಕೆಲವು ಶಾಲಾ-ಕಾಲೇಜುಗಳಲ್ಲಿ ಅದರಲ್ಲೂ ವಸತಿ ಶಾಲೆಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂದರ್ಭದಲ್ಲಿ ಮಕ್ಕಳ ಪೋಷಕರು ಆತಂಕಗೊಳ್ಳುವುದು ಸಹಜ. ಆದರೆ ಮಕ್ಕಳ ಜೀವದ ಜೊತೆ ನಾವು ಚೆಲ್ಲಾಟವಾಡುವುದಿಲ್ಲ, ಕಾಳಜಿ ವಹಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅಭಯ ನೀಡಿದ್ದಾರೆ.

