15-18 ವರ್ಷದವರಿಗೆ ಸದ್ಯ ಕೋವಾಕ್ಸಿನ್ ಮಾತ್ರ, 2ನೇ ಡೋಸ್ ಆಗಿ 39 ವಾರದ ನಂತರ ಬೂಸ್ಟರ್ ಡೋಸ್
ಎರಡನೇ ಡೋಸ್ ತೆಗೆದುಕೊಂಡು 39 ವಾರ ಆಗಿರುವ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಇತರೆ ಅನಾರೋಗ್ಯ ಸಮಸ್ಯೆಗೊಳಗಾದವರು ಮಾತ್ರ ಜನವರಿ 10 ರಿಂದ ಆರಂಭವಾಗಲಿರುವ ಮೂರನೇ ಡೋಸ್ ಲಸಿಕೆ ತೆಗೆದುಕೊಳ್ಳಲು ಅರ್ಹರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.

ನವದೆಹಲಿ: ಎರಡನೇ ಡೋಸ್ ತೆಗೆದುಕೊಂಡು 39 ವಾರ ಆಗಿರುವ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಇತರೆ ಅನಾರೋಗ್ಯ ಸಮಸ್ಯೆಗೊಳಗಾದವರು ಮಾತ್ರ ಜನವರಿ 10 ರಿಂದ ಆರಂಭವಾಗಲಿರುವ ಮೂರನೇ ಡೋಸ್ ಲಸಿಕೆ ತೆಗೆದುಕೊಳ್ಳಲು ಅರ್ಹರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
ಇದನ್ನೂ ಓದಿ: ಕೋವಿಡ್ ಲಸಿಕೆ: 15-18 ವರ್ಷ ವಯಸ್ಸಿನ ಮಕ್ಕಳ ನೋಂದಣಿ ಜ.1ರಿಂದ ಆರಂಭ, ಸ್ಟೂಡೆಂಟ್ ಐಡಿ ಕಾರ್ಡ್ ಬಳಕೆಗೆ ಅವಕಾಶ
ಜನವರಿ 3 ರಿಂದ 15 -18 ವರ್ಷದ ಮಕ್ಕಳಿಗೆ ಲಸಿಕೆ ನೀಡಿಕೆ ಪ್ರಾರಂಭಿಸಲಾಗುತ್ತಿದ್ದು, ಈ ವಯಸ್ಸಿನ ಗುಂಪಿಗೆ ಕೇವಲ ಕೋವಾಕ್ಸಿನ್ ಮಾತ್ರ ಲಭ್ಯವಿರುವುದಾಗಿ ತಿಳಿಸಿದೆ.
15-18 ವರ್ಷದ ಮಕ್ಕಳಿಗೆ ಕೋವಿಡ್-19 ಲಸಿಕೆ ಹಾಗೂ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷಕ್ಕೂ ಮೇಲ್ಪಟ್ಟ ಅನಾರೋಗ್ಯದಿಂದ ಬಳಲುತ್ತಿರುವ ಬೂಸ್ಟರ್ ಡೋಸ್ ನೀಡುವ ಕುರಿತಂತೆ ಸೋಮವಾರ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, 2007 ಅಥವಾ ಅದಕ್ಕೂ ಮುಂಚೆ ಜನಿಸಿದ ಮಕ್ಕಳು ಕೋ- ವಿನ್ ನಲ್ಲಿ ಲಸಿಕೆಗಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.
ಸಂಪೂರ್ಣವಾಗಿ ಎರಡು ಡೋಸ್ ಲಸಿಕೆ ಪಡೆದಿರುವ ಆರೋಗ್ಯ, ಫ್ರಂಟ್ ಲೈನ್ ಕಾರ್ಯಕರ್ತರು ಮತ್ತು 60 ವರ್ಷಕ್ಕೂ ಮೇಲ್ಪಟ್ಟ ಇತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಜನವರಿ 10 ರಿಂದ ಬೂಸ್ಟರ್ ಡೋಸ್ ನೀಡಿಕೆಯನ್ನು ಪ್ರಾರಂಭಿಸಲಾಗುತ್ತಿದೆ. ಆದರೆ, ಎರಡನೇ ಡೋಸ್ ಪಡೆದ ದಿನಾಂಕದಿಂದ 9 ತಿಂಗಳು ಅಥವಾ 39 ವಾರ ಪೂರ್ಣಗೊಂಡವರಿಗೆ ಮಾತ್ರ ಮೂರನೇ ಡೋಸ್ ನೀಡಲಾಗುವುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
60 ವರ್ಷಕ್ಕೂ ಮೇಲ್ಪಟ್ಟವರು ಹಾಗೂ ಇತರೆ ಅನಾರೋಗ್ಯ ಸಮಸ್ಯೆಗೊಳಗಾದವರಿಗೆ ಎರಡನೇ ಡೋಸ್ ಪಡೆದ 39 ವಾರಗಳ ನಂತರ ವೈದ್ಯರ ಸಲಹೆ ಮೇರೆಗೆ ಬೂಸ್ಟರ್ ಡೋಸ್ ಲಸಿಕೆ ನೀಡಲಾಗುವುದು, ಕೋ- ವಿನ್ ಪೋರ್ಟಲ್ ನಲ್ಲಿ ನೋಂದಣಿ ಮತ್ತು ಸೇವೆ ಕಾಯ್ದಿರಿಸುವಿಕೆ ಲಭ್ಯವಿರಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿಯಲ್ಲಿ ಸ್ಪಷ್ಪಪಡಿಸಿದೆ.
15-18 ವರ್ಷದೊಳಗಿನ 8 ಕೋಟಿ ಫಲಾನುಭವಿಗಳು, 3 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷಕ್ಕೂ ಮೇಲ್ಪಟ್ಟ ಇತರೆ ಆರೋಗ್ಯ ಸಮಸ್ಯೆಗೊಳಗಾದ ಸುಮಾರು 10-15 ಕೋಟಿ ಫಲಾನುಭವಿಗಳಿಗೆ ಲಸಿಕೆ ನೀಡಲು ಸರ್ಕಾರ ಎದುರು ನೋಡುತ್ತಿದೆ. ಎಲ್ಲಾ ನಾಗರಿಕರು ಸರ್ಕಾರದ ಕೋವಿಡ್-19 ಲಸಿಕಾ ಕೇಂದ್ರಗಳಲ್ಲಿ ಉಚಿತ ಲಸಿಕೆ ಪಡೆಯಬಹುದಾಗಿದೆ ಎಂದು ಸರ್ಕಾರ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


