Chikkaballapur

ತೀವ್ರ ದರ ಕುಸಿತ: ಟ್ಯ್ರಾಕ್ಟರ್ ಗಳಲ್ಲಿ ತಂದು ರಸ್ತೆಗೆ ಹೂ ಸುರಿದ ಚಿಕ್ಕಬಳ್ಳಾಪುರ ರೈತರು!
ತೀವ್ರ ಬೆಲೆ ಕುಸಿತದ ಕಾರಣ ಗುಲಾಬಿ, ಸೇವಂತಿಗೆ, ಮಾರಿಗೋಲ್ಡ್ ಮತ್ತು ಸುಗಂಧರಾಜ ಸೇರಿದಂತೆ ಹೂವುಗಳನ್ನು ಬೆಳೆದ ರೈತರು ಭಾರೀ ನಷ್ಟ ಎದುರಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ: ತಪ್ಪಿಸಿಕೊಳ್ಳುವ ಭರದಲ್ಲಿ ಗ್ರಾಮಸ್ಥರ ಮೇಲೆ ಬೈಕ್ ಕಳ್ಳರಿಂದ ಗುಂಡಿನ ದಾಳಿ
ವಾಹನಗಳನ್ನು ಕದ್ದು ಪರಾರಿಯಾಗುವ ಭರದಲ್ಲಿ ಬೈಕ್ ಕಳ್ಳರಿಬ್ಬರು ಗ್ರಾಮಸ್ಥರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: 6 ಜನ ಸಾವು
ಲಾರಿ ಹಾಗೂ ಜೀಪ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಜನ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಅಲವಾಟ ಗೇಟ್ ಬಳಿ ಭಾನುವಾರ ನಡೆದಿದೆ.

ಚಿಕ್ಕಬಳ್ಳಾಪುರ: ನಂದಿಬೆಟ್ಟಕ್ಕೆ ಸಾಗುವ 10ನೇ ತಿರುವು ರಸ್ತೆಯಲ್ಲಿ ಭೂ ಕುಸಿತ, ಸಂಚಾರಕ್ಕೆ ಅಡ್ಡಿ
ತೀವ್ರ ಮಳೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಖ್ಯಾತ ನಂದಿಬೆಟ್ಟದ 10ನೇ ತಿರುವಿನಲ್ಲಿ ಭಾರೀ ಭೂಕುಸಿತ ಉಂಟಾಗಿ ರಸ್ತೆ ಸಂಚಾರಕ್ಕೆ ಬಂದ್ ಆಗಿದೆ.

ಚಿಕ್ಕಬಳ್ಳಾಪುರ: ಶಾಲೆಗೆ ಆಗಮಿಸಿದ ಸಚಿವ ಸುಧಾಕರ್‌ಗೆ ರಾಖಿ ಕಟ್ಟಿದ ವಿದ್ಯಾರ್ಥಿನಿಯರು
ರಾಜ್ಯದಲ್ಲಿ ಸೋಮವಾರದಿಂದ 9, 10 ಸೇರಿದಂತೆ ಪಿಯು ಕಾಲೇಜುಗಳ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಪ್ರೌಢ ಶಾಲೆ ಹಾಗೂ ವಾಪಸಂದ್ರ ಪ್ರೌಢ ಶಾಲೆಗಳಿಗೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಭೇಟಿ ನೀಡಿದರು.

ಚಿಕ್ಕಬಳ್ಳಾಪುರ: ನವಜಾತ ಹೆಣ್ಣುಮಗುವನ್ನು ಕೊಂದ ಪೋಷಕರ ಬಂಧನ
ಚಿಂತಾಮಣಿ ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ನವಜಾತ ಹೆಣ್ಣು ಮಗುವಿನ ಪೋಷಕರನ್ನು ಚಿಂತಾಮಣಿ ಪೊಲೀಸರು ಸೋಮವಾರ ಮುಂಜಾನೆ ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ: ಕಳ್ಳತನ ಕೇಸ್ ನಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಖೈದಿ ಸಾವು
ವಿಚಾರಾಣಾಧೀನ ಖೈದಿಯೊಬ್ಬ ಜೈಲಿನಲ್ಲೇ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಸಬ್ ಜೈಲಿನಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ನಾಲ್ವರ ದುರ್ಮರಣ
ಕಂಟೈನರ್ ಲಾರಿಯೊಂದು ಹೆದ್ದಾರಿ ಬದಿ ನಿಂತಿದ್ದ ಎರಡು ಕಾರು, ಒಂದು ಬೈಕ್‌ಗೆ ಡಿಕ್ಕಿ ಹೊಡೆದು ಟೀ ಹೊಟೇಲ್‌ಗೆ ನುಗ್ಗಿದೆ, ಇದರ ಪರಿಣಾಮ ನಾಲ್ಕು ಜನರು ಮೃತಪಟ್ಟಿರುವ ಘಟನೆ ನಗರ ಹೊರವಲಯದ ಚದುಲಪುರ ಕ್ರಾಸ್ ನಲ್ಲಿ ಗುರುವಾರ ಬೆಳಿಗ್ಗೆ ವರದಿಯಾಗಿದೆ.

ಚಿಕ್ಕಬಳ್ಳಾಪುರ: ಕುಡಿಯೋಕೆ ಹಣ ನೀಡದ್ದಕ್ಕೆ ಒನಕೆಯಿಂದ ಪತ್ನಿಯನ್ನೇ ಕೊಂದ ಪಾಪಿ!
ಕುಡಿಯಲು ಹಣ ಕೇಳಿದರೆ ಕೊಡಲಿಲ್ಲ ಎಂಬ ಕಾರಣಕ್ಕೆ ಗಂಡನೊಬ್ಬ ಒನಕೆಯಿಂದ ಪತ್ನಿಗೆ ಮನ ಬಂದಂತೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯಲ್ಲಿ ನಡೆದಿದೆ.

