ಚಿಕ್ಕಬಳ್ಳಾಪುರ: ಕುಡಿಯೋಕೆ ಹಣ ನೀಡದ್ದಕ್ಕೆ ಒನಕೆಯಿಂದ ಪತ್ನಿಯನ್ನೇ ಕೊಂದ ಪಾಪಿ!
ಕುಡಿಯಲು ಹಣ ಕೇಳಿದರೆ ಕೊಡಲಿಲ್ಲ ಎಂಬ ಕಾರಣಕ್ಕೆ ಗಂಡನೊಬ್ಬ ಒನಕೆಯಿಂದ ಪತ್ನಿಗೆ ಮನ ಬಂದಂತೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ: ಕುಡಿಯಲು ಹಣ ಕೇಳಿದರೆ ಕೊಡಲಿಲ್ಲ ಎಂಬ ಕಾರಣಕ್ಕೆ ಗಂಡನೊಬ್ಬ ಒನಕೆಯಿಂದ ಪತ್ನಿಗೆ ಮನ ಬಂದಂತೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯಲ್ಲಿ ನಡೆದಿದೆ.
ಬಾಗೇಪಲ್ಲಿಯ ಭದ್ರೇಪಲ್ಲಿ ಗ್ರಾಮದ ನಿವಾಸಿ ರತ್ನಮ್ಮ (36) ಗಂಡನಿಂದ ಸಾವಿಗೀಡಾದ ದುರ್ದೈವಿ.
ರತ್ನಮ್ಮನ ಪತಿ ಆದಿನಾರಾಯಣ ಈ ಕೃತ್ಯ ಎಸಗಿದ್ದಾನೆ. ಮದ್ಯ ಸೇವನೆಗೆ ರತ್ನಮ್ಮ ಹಣ ನೀಡಿಲ್ಲ ಎನ್ನುವ ಕೋಪಕ್ಕೆ ಒನಕೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ಘಟನೆ ನಂತರ ಆರೋಪಿ ಪತಿ ಆದಿನಾರಾಯಣ ಪರಾರಿಯಾಗಿದ್ದು ಬಾಗೇಪಲ್ಲಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


