Chennai Super Kings

ಅಪಮಾನ ಮೆಟ್ಟಿನಿಂತು ಚೆನ್ನೈ 'ಕಿಂಗ್' ಆದ ಕೂಲ್ ಕ್ಯಾಪ್ಟನ್!
ಅಪಮಾನಗಳೇ ಗೆಲುವಿನ ಮೆಟ್ಟಿಲಾಗಬಲ್ಲವು ಎಂಬುದನ್ನು ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಮತ್ತೆ ಸಾಬೀತು ಪಡಿಸಿದ್ದು, 2017ರಲ್ಲಿ ಆದ ಅವಮಾನವನ್ನು 2018ರಲ್ಲಿ ಪ್ರಶಸ್ತಿ ಎತ್ತಿ ಹಿಡಿಯುವ ಮೂಲಕ ಮೆಟ್ಟಿ ನಿಂತಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ಪ್ರಶಸ್ತಿ ಕನಸಿಗೆ ತಣ್ಣೀರೆರಚಿದ ಶೇನ್ ವಾಟ್ಸನ್!
ಟೂರ್ನಿಯುದ್ದಕ್ಕೂ ಪ್ರಬಲ ತಂಡವಾಗಿ ಗುರುತಿಸಿಕೊಂಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ ಫೈನಲ್ ಪಂದ್ಯದ ಗೆಲುವಿನ ಆಸೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಶೇನ್ ವಾಟ್ಸನ್ ಅಕ್ಷರಶಃ ನೀರೆರಚಿದರು.

ಐಪಿಎಲ್ 2018 ಫೈನಲ್ ಯಾರೇ ಗೆದ್ದರೂ ಟ್ರೋಫಿ ಮಾತ್ರ ಚೆನ್ನೈಗೆ, ಯಾಕೆ ಗೊತ್ತಾ?
ತೀವ್ರ ಕುತೂಹಲ ಕೆರಳಿಸಿರುವ ಐಪಿಎಲ್ 2018 ಸರಣಿ ನಿರ್ಣಾಯಕ ಹಂತ ತಲುುಪಿದ್ದು, ಫೈನಲ್ ಪಂದ್ಯದಲ್ಲಿ ಹೈದರಾಬಾದ್ ಮತ್ತು ಚೆನ್ನೈ ತಂಡಗಳು ಮದಗಜಗಳಂತೆ ಕಾದಾಡುತ್ತಿವೆ. ಆದರೆ ಈ ಎರಡೂ ತಂಡಗಳಲ್ಲಿ ಯಾವುದೇ ತಂಡ ಗೆದ್ದರೂ ಟ್ರೋಫಿ ಮಾತ್ರ ಚೆನ್ನೈ ಪಾಲಾಗಲಿದೆ.

3ನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡು ಮುಂಬೈ ದಾಖಲೆ ಸರಿಗಟ್ಟಿದ ಚೆನ್ನೈ
2018ನೇ ಸಾಲಿನ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೂರನೇ ಬಾರಿಗೆ ಪ್ರಶಸ್ತಿಗೆ ಮುತ್ತಿಟ್ಟಿದೆ.

ಐಪಿಎಲ್ 2018 ಫೈನಲ್: ಚೆನ್ನೈಗೆ ಗೆಲ್ಲಲು 179 ರನ್ ಗಳ ಸವಾಲಿನ ಗುರಿ ನೀಡಿದ ಹೈದರಾಬಾದ್
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2018ರ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು ಸನ್ ರೈಸರ್ಸ್ ಹೈದರಾಬಾದ್ ತಂಡ 179 ರನ್ ಗಳ ಸವಾಲಿನ ಗುರಿ ನೀಡಿದೆ.

ಐಪಿಎಲ್ ಫೈನಲ್: ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಫೀಲ್ಡಿಂಗ್ ಆಯ್ಕೆ
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 2018ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಫೈನಲ್ ಹಣಾಹಣಿ ಆರಂಭವಾಗಿದ್ದು,.....

ಐಪಿಎಲ್ ಫೈನಲ್ ಹಣಾಹಣಿ; ಚೆನ್ನೈ-ಹೈದರಾಬಾದ್ ಯಾರಾಗ್ತಾರೆ ಚಾಂಪಿಯನ್?
2018ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಫೈನಲ್ ಹಂತಕ್ಕೆ ಬಂದು ತಲುಪಿದ್ದು ಈ ಬಾರಿ ಫೈನಲ್ ನಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್...

ಐಪಿಎಲ್ 2018: ಹೈದರಾಬಾದ್ ವಿರುದ್ಧ ಗೆದ್ದ ಚೆನ್ನೈ ಫೈನಲ್‌ಗೆ ಲಗ್ಗೆ
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದೆ...

ಐಪಿಎಲ್ 2018: ಪಂಜಾಬ್ ವಿರುದ್ಧ ಸಿಎಸ್ಕೆಗೆ 5 ವಿಕೆಟ್ ಜಯ
ಇಂಡಿಯನ್ ಪ್ರೀಮಿಯರ್ ಲೀಗ್ 2018ನೇ ಟಿ 20 ಕ್ರಿಕೆಟ್ ನ ಇಂದಿನ ನಿರ್ಣಾಯಕ ಹೋರಾಟದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟುಗಳಿಂದ ಜಯ ಸಾಧಿಸಿದೆ.

