Channapatna bypoll

ಡಿಕೆ ಶಿವಕುಮಾರ್ ಮನೆಯಲ್ಲಿ ಯೋಗೇಶ್ವರ್ ಪ್ರತ್ಯಕ್ಷ: JDS-BJP ದೋಸ್ತಿಗೆ ಚೆಕ್ ಮೇಟ್; ಕೆಲ ಹೊತ್ತಿನಲ್ಲಿ ಕಾಂಗ್ರೆಸ್ ಸೇರ್ಪಡೆ?
ಯೋಗೇಶ್ವರ್ ಬುಧವಾರ ಬೆಳಿಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಕಾಣಿಸಿಕೊಂಡಿಸಿರುವುದು ಎಲ್ಲಾ ಊಹಾ ಪೋಹಗಳಿಗೆ ತೆರೆ ಎಳೆದಂತಾಗಿದೆ. ಆ ಮೂಲಕ, ಯೋಗೇಶ್ವರ್ ಅವರು ಬಿಜೆಪಿ ಬಿಟ್ಟು 'ಕೈ' ಹಿಡಿಯುವುದು ಖಚಿತವಾಗಿದೆ.

ಚನ್ನಪಟ್ಟಣ ಉಪಚುನಾವಣೆ: ಜೆಡಿಎಸ್ ನಿಂದ ಸಿಪಿ ಯೋಗೇಶ್ವರಗೆ ಟಿಕೆಟ್ ನೀಡಲು HDK ಗೆ ಜೆಪಿ ನಡ್ಡಾ ಸಂದೇಶ
ಮೈತ್ರಿ ಮುಖ್ಯವೇ ಹೊರತು ಸೀಟು ಅಲ್ಲ, "ನನಗೆ ಎನ್‌ಡಿಎ ಗೆಲ್ಲುವುದು ಬೇಕು, ನಾವು ಬಾಗಲು ಸಿದ್ಧ ಎಂದು ನಡ್ಡಾಗೆ ತಾವು ಹೇಳಿದ್ದಾಗಿ ಕುಮಾರಸ್ವಾಮಿ ಇದೇ ವೇಳೆ ತಿಳಿಸಿದ್ದಾರೆ.

ಚನ್ನಪಟ್ಟಣ ಉಪಚುನಾವಣೆ: ಅಭ್ಯರ್ಥಿ ಯಾರೇ ಆಗಲೀ, NDA ಗೆಲುವಿಗಾಗಿ ಶ್ರಮ- ನಿಖಿಲ್ ಕುಮಾರಸ್ವಾಮಿ
ಪಕ್ಷ ಸಂಘಟನೆ ದೃಷ್ಟಿಯಿಂದ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದೇವೆ. ಉಪಚುನಾವಣೆ ಹಿನ್ನೆಲೆ ಎರಡೂ ಪಕ್ಷಗಳ ಕಾರ್ಯಕರ್ತರು ಹೊಂದಾಣಿಕೆ ಮೂಲಕ ಕೈಜೋಡಿಸಬೇಕು ಎನ್ನುವುದು ಉದ್ದೇಶ.

'ಸೈನಿಕ'ನ ಮನವೊಲಿಕೆಗೆ HDK ಟಾಸ್ಕ್: ಪಟ್ಟು ಬಿಡದ ಯೋಗೇಶ್ವರ್; ಜೆಡಿಎಸ್ ಶಾಸಕರ ಕಸರತ್ತು ವಿಫಲ!
ಕುಮಾರಸ್ವಾಮಿಗೆ ಸಿಪಿ ಯೋಗೇಶ್ವರ್ ಅವರ ಮನವೊಲಿಕೆ ಮಾಡುವುದೇ ದೊಡ್ಡ ಸವಾಲಾಗಿದೆ. ಈ ಸಂಬಂಧ ಕುಮಾರಸ್ವಾಮಿ ಅವರು ಹೇಗಾದರೂ ಮಾಡಿ ಯೋಗೇಶ್ವರ್ ಅವರನ್ನು ಮನವೊಲಿಸಿ ಎಂದು ಸಾರಾ ಮಹೇಶ್, ಸಿಎಸ್ ಪುಟ್ಟರಾಜು ಸೇರಿದಂತೆ ಪ್ರಮುಖ ನಾಯಕರಿಗೆ ಟಾಸ್ಕ್ ಕೊಟ್ಟಿದ್ದಾರೆ.

ಚನ್ನಪಟ್ಟಣ ಉಪಚುನಾವಣೆ: ಸ್ವತಂತ್ರ ಅಭ್ಯರ್ಥಿಯಾಗಿ ಸಿ.ಪಿ ಯೋಗೇಶ್ವರ್ ಸ್ಪರ್ಧೆ?
ಉಪಚುನಾವಣೆಯಲ್ಲಿ ಸ್ಪರ್ಧೆಗಿಳಿಯಲೇಬೇಕೆಂದು ನಿರ್ಧರಿಸಿರುವ ಯೋಗೇಶ್ವರ್ ಅವರು, ಚುನಾವಣೆಗೆ ಸಿದ್ಥತೆಗಳನ್ನು ಆರಂಭಿಸಿದ್ದಾರೆ. ಇದರಂತೆ ಬುಧವಾರ ರಾಮನಗರದ ಖಾಸಗಿ ರೆಸಾರ್ಟ್‍ನಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದಾರೆ.

ಚನ್ನಪಟ್ಟಣ ಉಪಚುನಾವಣೆ: ಬಕ ಪಕ್ಷಿಗಳಂತೆ ಕಾಯುತ್ತಿರುವ ನಾಯಕರು; ಟಿಕೆಟ್ ನೀಡುವಂತೆ ವೇಣಗೋಪಾಲ್ ಗೆ ತೇಜಸ್ವಿನಿ ಪತ್ರ
ಕನಕಪುರದ ಮಾಜಿ ಸಂಸದೆ ತೇಜಸ್ವಿನಿ ಗೌಡ, ಒಕ್ಕಲಿಗ ನಾಯಕಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರಿಗೆ ಪತ್ರ ಬರೆದು ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ಟಿಕೆಟ್‌ಗೆ ತಮ್ಮನ್ನು ಪರಿಗಣಿಸುವಂತೆ ಒತ್ತಾಯಿಸಿದ್ದಾರೆ.

ದೆಹಲಿಯಲ್ಲಿ BJP-JDS ಸಭೆ ಬಳಿಕ ಚನ್ನಪಟ್ಟಣ ಅಭ್ಯರ್ಥಿ ನಿರ್ಧಾರ: HD. ಕುಮಾರಸ್ವಾಮಿ
ಚುನಾವಣಾ ಆಯೋಗ ಯಾವಾಗ ಬೇಕಾದರೂ ಚುನಾವಣಾ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದ್ದು, ಉಪಚುನಾವಣೆ ಎದುರಿಸಲು ಮೈತ್ರಿ ಕೂಟದ ಮುಖಂಡರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಚನ್ನಪಟ್ಟಣ ಉಪಚುನಾವಣೆ: ಕಗ್ಗಂಟಾಗಿ ಪರಿಣಮಿಸಿದ ಯೋಗೇಶ್ವರ್; ಇಕ್ಕಟ್ಟಿನ ಪರಿಸ್ಥಿತಿಯಲ್ಲಿ NDA
ಸಿಪಿ ಯೋಗೇಶ್ವರ್‌ಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ. ಅತ್ತ ಟಿಕೆಟ್ ತನ್ನಲ್ಲೇ ಉಳಿಸಿಕೊಳ್ಳಲು ಜೆಡಿಎಸ್ ಕಸರತ್ತು ನಡೆಸುತ್ತಿದೆ. ಈಗಾಗಲೇ ರಾಮನಗರ ಜಿಲ್ಲಾ ಬಿಜೆಪಿ ಘಟಕವೂ ಯೋಗೇಶ್ವರ್ ಅವರಿಗೆ ಬೆಂಬಲ ನೀಡಿದೆ. ಹೀಗಾಗಿ, ಎನ್'ಡಿಎಗೆ ಯೋಗೇಶ್ವರ್ ಅವರು ಕಗ್ಗಂಟಾಗಿ ಪರಿಣಮಿಸಿದ್ದಾರೆ.

ಚನ್ನಪಟ್ಟಣ ಉಪಚುನಾವಣೆ: ದಿನಾಂಕ ಘೋಷಣೆಗೂ ಮುನ್ನವೇ ಗರಿಗೆದರಿದ ರಾಜಕೀಯ ಚಟುವಟಿಕೆ
ಕೇಂದ್ರ ಸಚಿವ ಮತ್ತು ಜಾತ್ಯತೀತ ಜನತಾದಳ ಪಕ್ಷದ ಅಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಅವರು ಗುರುವಾರ ನವದೆಹಲಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಡಾ ರಾಧಾ ಮೋಹನ್ ದಾಸ್ ಅಗರವಾಲ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡಸಿದ್ದಾರೆ.

