Channapatna bypoll

ಡಿ.ಕೆ ಬ್ರದರ್ಸ್ ಸಂಧಾನ ಸಕ್ಸಸ್: ತಣ್ಣಗಾದ ರಘುನಂದನ್; ಯೋಗೇಶ್ವರ್ ಪರ ಪ್ರಚಾರ
ಶಿವಕುಮಾರ್ ಅವರು ಈ ಇಬ್ಬರು ನಾಯಕರನ್ನೂ ಸದಾಶಿವನಗರದ ತಮ್ಮ ನಿವಾಸಕ್ಕೆ ಮಂಗಳವಾರ ಬೆಳಗ್ಗೆ ಕರೆಸಿ ಡಿ ಕೆ ಸುರೇಶ್ ಅವರ ಸಮ್ಮುಖದಲ್ಲಿ ಮಾತುಕತೆ ನಡೆಸಿದರು. ನಂತರ ಇಬ್ಬರು ನಾಯಕರೂ ಪರಸ್ಪರ ಹಸ್ತಲಾಘವ ಮಾಡಿದರು.

ನಿಖಿಲ್ 2 ಬಾರಿ ಸೋತಿದ್ದಾಗ ಅಭಿಮನ್ಯು ಆಗಿರಲಿಲ್ಲವಾ: HDKಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಎರಡು ಬಾರಿ ಚುನಾವಣೆಯಲ್ಲಿ ಸೋತಾಗ ನಿಖಿಲ್ ಅಭಿಮನ್ಯು ಆಗಿರಲಿಲ್ವಾ?. ಮಂಡ್ಯ, ರಾಮನಗರದಲ್ಲಿ ಸೋತಿದ್ದಾರೆ. ಈಗ ಇದ್ದಕ್ಕಿದ್ದಂತೆ ಅರ್ಜುನ ಆಗುತ್ತಾರಾ?.
NDA ಸರ್ಕಾರ ಅಸ್ಥಿರಗೊಳಿಸಲು ಕಾಂಗ್ರೆಸ್ ಯತ್ನ, ಮೋದಿ ಬಲಪಡಿಸಲು ನಿಖಿಲ್ ಕಣಕ್ಕೆ: HD ಕುಮಾರಸ್ವಾಮಿ
ನಿಖಿಲ್ ಅಭ್ಯರ್ಥಿಯಾಗಿರುವುದು ಪೂರ್ವ ಯೋಜಿತ ನಡೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಆದರೆ ಅಭ್ಯರ್ಥಿಯನ್ನು ಅಂತಿಮಗೊಳಿಸಲು ನಾವು ಸರಣಿ ಸಭೆಗಳನ್ನು ನಡೆಸಿದ್ದೇವೆ. ಕೇಂದ್ರದ ಎನ್‌ಡಿಎ ಸರ್ಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಸಂಚು ರೂಪಿಸಿವೆ.

ನಿಖಿಲ್ ಕುಮಾರಸ್ವಾಮಿ ಆಸ್ತಿ ವಿವರ ಬಹಿರಂಗ: NDA ಅಭ್ಯರ್ಥಿ ಶತಕೋಟಿ ಒಡೆಯ!
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಒಟ್ಟು 113 ಕೋಟಿ ಆಸ್ತಿ ಒಡೆಯರಾಗಿದ್ದಾರೆ. ನಿಖಿಲ್ ಬಳಿ ಒಟ್ಟು 78.15 ಕೋಟಿ ಮೌಲ್ಯದ ಚರಾಸ್ತಿ ಇದ್ದು, 29.34 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ.

ಯೋಗೇಶ್ವರ್ ಮುಂದಿಟ್ಟು ಡಿ.ಕೆ ಬ್ರದರ್ಸ್ ಸೇಫ್ ಆಟ; ರಾಮನಗರದಿಂದ HDK ಹೊರಹಾಕಲು ಹಠ; ಚನ್ನಪಟ್ಟಣ ಗೆದ್ದರೆ ಡಿಕೆಶಿಗೆ ಸಿಎಂ ಪಟ್ಟ?
ಡಿ.ಕೆ ಸುರೇಶ್ ಸೋಲಲು ಹಾಗೂ ಡಾ. ಮಂಜುನಾಥ್ ಅವರ ಗೆಲುವಿಗೆ ಶ್ರಮಿಸಿದ ತಮ್ಮ ಒಕ್ಕಲಿಗ ಮುಖಂಡ ಯೋಗೇಶ್ವರ್ ಜೊತೆ ಶಾಂತಿ ಸಂಧಾನ ನಡೆಸಿ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ ಕರೆತಂದಿದ್ದಾರೆ.

ಚನ್ನಪಟ್ಟಣ ಉಪ ಚುನಾವಣೆ: ನಿಖಿಲ್ ಕುಮಾರಸ್ವಾಮಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆ, ಇಂದು ನಾಮಪತ್ರ ಸಲ್ಲಿಕೆ!
ಬಿಜೆಪಿ ತೊರೆದು ಕಾಂಗ್ರೆಸ್ನಿಂದ ಕಣಕ್ಕಿಳಿದಿರುವ ಸೈನಿಕನ ವಿರುದ್ಧ ಬಿಜೆಪಿ ಜೆಡಿಎಸ್ ದೋಸ್ತಿ ಪಡೆ ನಿಖಿಲ್ ಕುಮಾರಸ್ವಾಮಿಯನ್ನು ಕಣಕ್ಕೆ ಇಳಿಸಿದೆ.

ಚನ್ನಪಟ್ಟಣ ಉಪಚುನಾವಣೆ: ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ ರದ್ದು?
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ತಾಯಿ ಚನ್ನಮ್ಮ ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ, ಹೆಚ್ ಡಿ ಕುಮಾರಸ್ವಾಮಿ ತಾಯಿಯ ಆರೋಗ್ಯ ವಿಚಾರಿಸಲು ತೆರಳಿದ ಹಿನ್ನೆಲೆಯಲ್ಲಿ ಸಭೆ ರದ್ದುಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೆಲವೊಮ್ಮೆ ನಾವು ಕಟ್ಟಿದ ಮನೆಯಲ್ಲಿ ನಾವು ವಾಸ ಮಾಡಲು ಆಗುವುದಿಲ್ಲ...: ಸಿ.ಪಿ ಯೋಗೇಶ್ವರ್

ವಾಟ್ಸಾಪ್ ಮೂಲಕ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ: ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಪಿ ಯೋಗೇಶ್ವರ್ ಅವರಿಗೆ ಡಿ.ಕೆ ಶಿವಕುಮಾರ್ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

