Chamarajnagar

ಕಣ್ಣು ಹೋದರೂ ಕನಸು ಬಿಡದ ಛಲದಂಕ: ಬ್ರೈಲ್ ಲಿಪಿ ಬಳಸದೆ ಪಿಎಚ್ಡಿ ಪಡೆದ ವಿಶೇಷಚೇತನ
ಗುಂಡ್ಲುಪೇಟೆ ತಾಲೂಕಿನ ಹಂಗಳದ ಎಆರ್ಎಸ್ಐ ನಾಗಪ್ಪ ಅವರ ಪುತ್ರ ಮನುಕುಮಾರ್ ಈ ಸಾಧನೆ ಮಾಡಿದ ಜಿಲ್ಲೆಯ ವಿಶೇಷಚೇತನ ಯುವಕ. ಹುಟ್ಟಿನಿಂದಲೇ ಅಂಧತ್ವ ಪಡೆದ ಮನುಕುಮಾರ್ ಓದುವ ಆಸೆ ಬಿಡದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ.

ವಿದ್ಯುತ್ ಸ್ಪರ್ಶದಿಂದ ಹಸು ಮೇಯಿಸುತ್ತಿದ್ದ ವೃದ್ಧ ಸಾವು
ವಿದ್ಯುತ್ ಪ್ರವಹಿಸಿ ಹಸು ಮೇಯಿಸುತ್ತಿದ್ದ ವೃದ್ಧನೋರ್ವ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಗುಂಡೇಗಾಲ ಗ್ರಾಮದಲ್ಲಿ ನಡೆದಿದೆ.

ಗಾಯಗೊಂಡಿದ್ದ ಮರಿಯಾನೆ ಮೇಲೆ ದಾಳಿ ಮಾಡಿ ಕೊಂದ ಹುಲಿ; ಬಂಡೀಪುರ ಅರಣ್ಯದಲ್ಲಿ ಘಟನೆ
ಗಾಯಗೊಂಡಿದ್ದ ಮರಿಯಾನೆಯನ್ನು ಹುಲಿಯೊಂದು ಬೇಟೆಯಾಡಿ ತಿಂದಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.

ಚಾಮರಾಜನಗರ: ಬೈಕ್ ಗೆ ಜಿಂಕೆ ಢಿಕ್ಕಿ, ಜಿಂಕೆ ಸಾವು, ಸವಾರನಿಗೆ ಗಂಭೀರ ಗಾಯ
ಜಿಂಕೆಗೆ ಬೈಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಜಿಂಕೆ ಮೃತಪಟ್ಟಿದ್ದು, ಸವಾರನ ಸ್ಥಿತಿ ಗಂಭೀರವಾಗಿರುವ ಘಟನೆ ಚಾಮರಾಜನಗರದ ಉಡಿಗಾಲ ಗ್ರಾಮದ ಸಮೀಪ ನಡೆದಿದೆ.

ಕೊರೊನಾ ಸೋಂಕು ಗೆದ್ದು ಪ್ಲಾಸ್ಮಾ ದಾನಕ್ಕೆ ಮುಂದಾದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್
ಕೊರೊನಾ ಮಹಾಮಾರಿಯಿಂದ ಚಾಮರಾಜನಗರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ಸಂಪೂರ್ಣ ಗುಣಮುಖರಾಗಿ ಈಗ ಪ್ಲಾಸ್ಮಾ ದಾನಕ್ಕೆ ಮುಂದಾಗಿದ್ದಾರೆ.

ನಕ್ಷತ್ರ ಆಮೆ ಮಾರಾಟ ಯತ್ನ: ಐವರ ಬಂಧನ, ಓರ್ವ ಪರಾರಿ
ನಕ್ಷತ್ರ ಆಮೆ ಮಾರಾಟಕ್ಕೆ ಯತ್ನಿಸಿದ ಜಾಲವೊಂದನ್ನು ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಕಾಡಿನ ಮಕ್ಕಳ ಭಾಷೆಗೆ ಇಂಗ್ಲಿಷ್ ನಿಘಂಟು ತಯಾರು: ವಿದೇಶಿಗನ ದಶಕದ ಶ್ರಮಕ್ಕೊಂದು ಸಲಾಂ!
ಕಾಡಿನ ಬದುಕು ಅಧ್ಯಯನ ಮಾಡಲು ಬಂದು ಕಾಡಿನ ಮಕ್ಕಳ ಭಾಷೆಗೆ ಸೋತ ವಿದೇಶಿ ಸಂಶೋಧಕರೊಬ್ಬರು ಸೋಲಿಗ -ಇಂಗ್ಲಿಷ್ ನಿಘಂಟನ್ನೇ ತಯಾರಿಸಿದ್ದಾರೆ.

ಚಾಮರಾಜನಗರ: 23 ಸಾವಿರ ಮಂದಿಗೆ ಕೊರೋನಾ ಪರೀಕ್ಷೆ!
70 ದಿನಗಳ ಗ್ರೀನ್ ಜೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ, ಹೀಗಾಗಿ ಜಿಲ್ಲಾಡಳಿತ ಸೋಂಕು ಹರಡುವುದನ್ನು ತಪ್ಪಿಸಲು ಅಗತ್ಯಕ್ರಮ ಕೈಗೊಳ್ಳುತ್ತಿದೆ.

ಲಾಕ್ ಡೌನ್ ಸಡಿಲಿಕೆ: ಕುಂತೂರಿನ ಬಣ್ಣಾರಿ ಅಮ್ಮನ್ ಶುಗರ್ಸ್ ಪುನಾರಂಭ; ರೈತರ ಮೊಗದಲ್ಲಿ ಮಂದಹಾಸ
ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ಮುಚ್ಚಲಾಗಿದ್ದ ಕುಂತೂರಿನ ಬಣ್ಣಾರಿ ಅಮ್ಮನ್ ಶುಗರ್ಸ್ ಕಾರ್ಖಾನೆ ಲಾಕ್ ಡೌನ್ ಸಡಿಲಿಕೆ ಹಿನ್ನಲೆಯಲ್ಲಿ ಪುನಾರಂಭಗೊಂಡಿದ್ದು, ಇಲ್ಲಿನ ರೈತರ ಮೊಗದಲ್ಲಿ ಮಂದಹಾಸ ತರಿಸಿದೆ.

