ಕಣ್ಣು ಹೋದರೂ ಕನಸು ಬಿಡದ ಛಲದಂಕ: ಬ್ರೈಲ್ ಲಿಪಿ ಬಳಸದೆ ಪಿಎಚ್ಡಿ ಪಡೆದ ವಿಶೇಷಚೇತನ
ಗುಂಡ್ಲುಪೇಟೆ ತಾಲೂಕಿನ ಹಂಗಳದ ಎಆರ್ಎಸ್ಐ ನಾಗಪ್ಪ ಅವರ ಪುತ್ರ ಮನುಕುಮಾರ್ ಈ ಸಾಧನೆ ಮಾಡಿದ ಜಿಲ್ಲೆಯ ವಿಶೇಷಚೇತನ ಯುವಕ. ಹುಟ್ಟಿನಿಂದಲೇ ಅಂಧತ್ವ ಪಡೆದ ಮನುಕುಮಾರ್ ಓದುವ ಆಸೆ ಬಿಡದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ.

ಚಾಮರಾಜನಗರ: ಕಣ್ಣಿದ್ದವರೇ ಓದು ತಲೆಗೆ ಹತ್ತದೇ ಇಲ್ಲವೇ ನಿರಾಸಕ್ತಿಯಿಂದ ಅರ್ಧಕ್ಕೆ ವಿದ್ಯೆ ನಿಲ್ಲಿಸುವವರ ನಡುವೆ ಈ ಅಂಧ ವ್ಯಕ್ತಿ ಮೈಸೂರು ವಿವಿಯಲ್ಲಿ ಮಹಾಪ್ರಬಂಧ ಮಂಡಿಸಿ ಪಿಎಚ್ಡಿಗೆ ಭಾಜನರಾಗಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಹಂಗಳದ ಎಆರ್ಎಸ್ಐ ನಾಗಪ್ಪ ಅವರ ಪುತ್ರ ಮನುಕುಮಾರ್ ಈ ಸಾಧನೆ ಮಾಡಿದ ಜಿಲ್ಲೆಯ ವಿಶೇಷಚೇತನ ಯುವಕ. ಹುಟ್ಟಿನಿಂದಲೇ ಅಂಧತ್ವ ಪಡೆದ ಮನುಕುಮಾರ್ ಓದುವ ಆಸೆ ಬಿಡದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ.
ಬ್ರೈಲ್ ಲಿಪಿ ಬಳಸದೆ ಪಿಎಚ್ಡಿ ಪಡೆದ ವಿಶೇಷಚೇತನ
ಮೈವಿವಿಯ ಸಂಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಆರ್.ಎನ್.ದಿನೇಶ್ ಮಾರ್ಗದರ್ಶನದಲ್ಲಿ "ಚಾಮರಾಜನಗರ ಜಿಲ್ಲೆಯ ದಿವ್ಯಾಂಗ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಪಾತ್ರ-ಒಂದು ಅಧ್ಯಯನ" ಎಂಬ ವಿಷಯದಲ್ಲಿ ಮಹಾಪ್ರಬಂಧ ಮಂಡಿಸಿ ಪಿಎಚ್ ಅಡಿ ಪದವಿ ಪಡೆದಿದ್ದಾರೆ. ಮೂರುವರೆ ವರ್ಷ 105 ಶಾಲೆಯ 354 ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಿ ಸಂಶೋಧನಾ ಪ್ರಬಂಧ ಬರೆದಿದ್ದಾರೆ.
ಬ್ರೈಲ್ ಲಿಪಿ ಬಳಸಲ್ಲ, ವಿಶೇಷ ಶಾಲೆಗೆ ಹೋಗಿಲ್ಲ:
ಮನುಕುಮಾರ್ ಅವರ ಏಕಾಗ್ರತೆಗೆ ಸಾಕ್ಷಿ ಎಂಬಂತೆ ಇಲ್ಲಿಯವರೆಗೂ ಅಂಧರು ಬಳಸುವ ಯಾವುದೇ ಸಾಧನವನ್ನು ಬಳಸದೇ ಸಾಮಾನ್ಯರಂತೆ ಓಡಾಟ ನಡೆಸುತ್ತಾರೆ. ಜೊತೆಗೆ, ಟೇಪ್ ರೆಕಾರ್ಡರ್, ಮೊಬೈಲ್ ಸಹಾಯದ ಮೂಲಕ ಧ್ವನಿ ಮುದ್ರಿಸಿಕೊಂಡು, ಆಡಿಯೋ ಪುಸ್ತಕಗಳನ್ನು ಕೇಳಿ ಸಾಮಾನ್ಯ ಶಾಲೆಯಲ್ಲೇ ಕಲಿತು ಈ ಸಾಧನೆ ಮಾಡಿದ್ದಾರೆ
ವರದಿ: ಗುಳಿಪುರ ನಂದೀಶ. ಎಂ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


