celebrities

ಧ್ರುವ ನಕ್ಷತ್ರ ಪುನೀತ್ ನಿಧನಕ್ಕೆ ಸಂತಾಪ ಸೂಚಿಸಿದ ಸೆಲಬ್ರಿಟಿಗಳು: ಅಪ್ಪು ಬಗ್ಗೆ ಅವರ ಒಪ್ಪತಕ್ಕ ಮಾತುಗಳು
ಶುಕ್ರವಾರ ತೀವ್ರ ಹೃದಯಾಘಾತದಿಂದ ಮೃತಪಟ್ಟ ಕನ್ನಡಿಗರ ಪ್ರೀತಿಯ ಅಪ್ಪು, ಪುನೀತ್ ರಾಜ್ ಕುಮಾರ್ ನಿಧನಕ್ಕೆ ಭಾರತೀಯ ಚಿತ್ರರಂಗದ ಗಣ್ಯರು ಹಾಗೂ ಕೇಂದ್ರ ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ. ಅವರಲ್ಲಿ ಕೆಲ ಪ್ರಮುಖರು ನಮ್ಮ ಪುನೀತ್ ಬಗ್ಗೆ ಹೇಳಿರುವ ಮಾತುಗಳು ಇಲ್ಲಿವೆ.
ಎರಡು ಬಾರಿ ಡೈವರ್ಸ್ ಪಡೆದ ಸೆಲಬ್ರಿಟಿಗಳಿವರು!
ಮದುವೆ ಎಂಬ ಮೂರಕ್ಷರಕ್ಕಿರುವ ಮಹತ್ವ ವಿಚ್ಛೇದನ ಎನ್ನುವ ನಾಲ್ಕಕ್ಷರದ ಪದಕ್ಕೂ ಇದೆ. ಡೈವೊರ್ಸ್ ಎನ್ನುವುದು ಬೆಲ್ಲವೂ ಹೌದು ಬೇವೂ ಹೌದು. ಎಲ್ಲವೂ ಅವರವರ ಭಾವಕ್ಕೆ ಹಾಗೂ ಭಕುತಿಗೆ ತಕ್ಕಂತೆ. ಜೀವನ ಅವೆಲ್ಲಕ್ಕಿಂತ ದೊಡ್ಡದು.

ಬಾಲಿವುಡ್ ಸೆಲಿಬ್ರಿಟಿಗಳ ಮನೆಯಲ್ಲಿ ಸಂಭ್ರಮದ ಗಣೇಶ ಚತುರ್ಥಿ
ಬಾಲಿವುಡ್ ಸೆಲಿಬ್ರಿಟಿಗಳು ತಮ್ಮ ಮನೆಯಲ್ಲೇ ಅದ್ಧೂರಿ ಗಣೇಶ ಚತುರ್ಥಿಯನ್ನು ಆಚರಿಸಿದ್ದು ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಸೆಲೆಬ್ರಿಟಿಗಳು, ಉದ್ಯಮಿಗಳ 'ನಶೆ ನಂಟು': ಮತ್ತೊಬ್ಬ ಸ್ಯಾಂಡಲ್ ವುಡ್ ನಟಿ ಮನೆ ಮೇಲೆ ಪೊಲೀಸರ ದಾಳಿ
ಕೋವಿಡ್-19 ಮಧ್ಯೆ ಕಳೆದ ವರ್ಷ ತಲ್ಲಣ ಮೂಡಿಸಿದ್ದ ಚಿತ್ರರಂಗದಲ್ಲಿನ ಮಾದಕ ವಸ್ತು ಮಾರಾಟ, ಪೂರೈಕೆ ಮತ್ತು ಬಳಕೆ ದಂಧೆ ಮತ್ತಷ್ಟು ವ್ಯಾಪಕವಾಗಿ ಹಬ್ಬಿದೆ ಎಂದು ತಿಳಿದುಬರುತ್ತಿದೆ.

ಬಿಗ್ ಬಿಯಿಂದ ಪುನೀತ್'ವರೆಗೆ: ಲಸಿಕೆ ಹಾಕಿಸಿಕೊಂಡು ಜನರಲ್ಲಿ ಆತ್ಮಸ್ಥೈರ್ಯ ತುಂಬಿದ ಸೆಲೆಬ್ರಿಟಿಗಳು!
ದೇಶದಲ್ಲಿ ಕೊರೋನಾ ಮಹಾಮಾರಿ ಎರಡನೇ ಅಲೆ ತೀವ್ರ ಆತಂಕ ಸೃಷ್ಟಿಸುತ್ತಿದೆ. ಜನರು ಆಸ್ಪತ್ರೆಗಳಲ್ಲಿ, ಬೆಡ್, ಆಕ್ಸಿಜನ್ ಸಿಗದೆ ನರಳಿ ಸಾಯುತ್ತಿದ್ದಾರೆ. ಮಹಾಮಾರಿಗೆ ಲಸಿಕೆಯಿಂದಲೇ ಉತ್ತರ ನೀಡಬೇಕು ಎಂದು ದೇಶದ ಹಲವಾರು ಸೆಲೆಬ್ರಿಟಿಗಳು ಲಸಿಕೆ ಹಾಕಿಸಿಕೊಂಡು ಜನರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.

'ಅಮ್ಮ' ಎಂಬ ಎರಡಕ್ಷರದಲ್ಲಿ ಪ್ರಪಂಚವೇ ಇದೆ: ಸೆಲೆಬ್ರಿಟಿ, ಗಣ್ಯರಿಂದ ಅಮ್ಮನ ಗುಣಗಾನ
ಜೀವನದಲ್ಲಿ ಈ ಮೂರು ವ್ಯಕ್ತಿಗಳಿಗೆ ವಿಶಿಷ್ಟ ಗೌರವ, ಸ್ಥಾನಮಾನ, ಬೇರೊಬ್ಬರಿಂದ ಅವರ ಸ್ಥಾನವನ್ನು ತುಂಬಿಸಲಾಗದ ಶಕ್ತಿಯಿದೆ, ಮಾತೃದೇವೋ ಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎನ್ನುತ್ತಾರೆ.

ವಿಶ್ವ ಕ್ಯಾನ್ಸರ್ ದಿನ: ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಸೆಲೆಬ್ರಿಟಿಗಳು ಇವರು!
ಕ್ಯಾನ್ಸರ್ ಮಾರಣಾಂತಿಕ ಕಾಯಿಲೆ ಆಗಿದ್ದರೂ ಅದರಲ್ಲೂ ಕೆಲ ಸೆಲೆಬ್ರಿಟಿಗಳು ಕಾಯಿಲೆ ವಿರುದ್ಧ ಹೋರಾಡಿ ಗೆದ್ದು ಹೊಸ ಜೀವನ ನಡೆಸುತ್ತಿದ್ದಾರೆ.

ಡ್ರಗ್ಸ್ ಕೇಸ್ ಬಳಿಕ ಸೆಲೆಬ್ರಿಟಿಗಳು ಅಗತ್ಯ ಪಾಠಗಳನ್ನು ಕಲಿಯುತ್ತಿದ್ದಾರೆ: ಇಂದ್ರಜಿತ್ ಲಂಕೇಶ್
ಸ್ಯಾಂಡಲ್'ವುಡ್ ನಟ-ನಟಿಯರಿಗೆ ಡ್ರಗ್ಸ್ ನಂಟಿರುವ ಬಗ್ಗೆ ತಿಳಿಯುತ್ತಿದ್ದಂತೆಯೇ ಸಾಕಷ್ಟು ನೋವಾಗಿತ್ತು. ಹೀಗಾಗಿ ಈ ಬಗ್ಗೆ ಮಾತನಾಡಲು ನಿರ್ಧರಿಸಿದ್ದೆ. ಚಿತ್ರೀಕರಣ ವೇಳೆ ಕೆಲ ನಟ-ನಟಿಯರು ಮತ್ತಿನಲ್ಲಿಯೇ ಬರುತ್ತಿದ್ದರು. ಆದರೆ, ಈ ಬಗ್ಗೆ ಚಿತ್ರಮಂಡಳಿಯ ಯಾವೊಬ್ಬರೂ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿರಲಿಲ್ಲ ಎಂದು ಇಂದ್ರಜಿತ್ ಲಂಕೇಶ್ ಅವರು ಹೇಳಿದ್ದಾರೆ.

ಸೆಲೆಬ್ರಿಟಿಗಳ ಮನೆಯಲ್ಲಿ ಗಣೇಶ!
ಕೊರೋನಾ ನಡುವೆಯೂ ದೇಶದಾದ್ಯಂತ ಗಣೇಶ ಹಬ್ಬ ಆಚರಣೆ ಸರಳವಾಗಿ ನಡೆಯುತ್ತಿದೆ. ಇನ್ನು ಕರ್ನಾಟಕದಲ್ಲೂ ಸೆಲೆಬ್ರಿಟಿಗಳು ತಮ್ಮ ಮನೆಯಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಶುಭಕೋರಿದ್ದಾರೆ.

