Canada

ಪಂಜಾಬ್: ಐಎಸ್ಐ ಭಯೋತ್ಪಾದಕರ ಜಾಲ ಭೇದಿಸಿದ ಪೊಲೀಸರು
ಪಂಜಾಬ್ ಪೊಲೀಸರು ಸೆ.23 ರಂದು ಐಎಸ್ಐ ಬೆಂಬಲಿತ, ಕೆನಡಾ-ಪಾಕಿಸ್ತಾನ ಗ್ಯಾಂಗ್ ಸ್ಟರ್ ಗಳು ನಿರ್ವಹಿಸುತ್ತಿದ್ದ ಭಯೋತ್ಪಾದಕರ ಜಾಲವನ್ನು ಭೇದಿಸಿದ್ದಾರೆ.

ಕೆನಡಾದ ಸ್ವಾಮಿ ನಾರಾಯಣ್ ದೇವಾಲಯದಲ್ಲಿ ಭಾರತ ವಿರೋಧಿ ಬರಹ, ದೇವಾಲಯಕ್ಕೆ ಹಾನಿ
ಕೆನಡಾದಲ್ಲಿ ಖಾಲಿಸ್ಥಾನಿ ತೀವ್ರಗಾಮಿಗಳು ಸ್ವಾಮಿ ನಾರಾಯಣ್ ದೇವಾಲಯದ ಮೇಲೆ ದಾಳಿ ನಡೆಸಿ ಹಾನಿ ಉಂಟುಮಾಡಿದ್ದಾರೆ.

ಕೆನಡಾ: ಸರಣಿ ಚೂರಿ ಇರಿತಕ್ಕೆ 10 ಮಂದಿ ಬಲಿ; 15 ಮಂದಿಗೆ ಗಾಯ
ಕೆನಡಾದ ಸಾಸ್ಕಾಚೆವಾನ್ ಪ್ರಾಂತ್ಯದಲ್ಲಿ ಭಾನುವಾರ ನಡೆದ ಸರಣಿ ಚೂರಿ ಇರಿತದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು 15 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ,

ನ್ಯೂಸ್ ಲೈವ್ ನಲ್ಲಿ ಬಾಯಿಗೆ ನೊಣ ಬಿದ್ದರೆ ಪರಿಸ್ಥಿತಿ ಏನಾಗಬಹುದು: ಈ ವಿಡಿಯೋ ನೋಡಿ!
ಪಾಕಿಸ್ತಾನದ ಪ್ರವಾಹದ ಕುರಿತು ಸುದ್ದಿ ನಿರೂಪಕಿ ಫರ್ರಾ ನಾಸರ್ ಟಿವಿಯಲ್ಲಿ ಲೈವ್ ಕೊಡುತ್ತಿದ್ದಾಗಲೇ ನೊಣವನ್ನು ನುಂಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆನಡಾ: 1985ರ ಏರ್ ಇಂಡಿಯಾ ಬಾಂಬ್ ದಾಳಿಯ ಶಂಕಿತ ಗುಂಡೇಟಿನಿಂದ ಸಾವು
331 ಜನರ ಸಾವಿಗೆ ಕಾರಣವಾದ 1985ರ ಏರ್ ಇಂಡಿಯಾ ಬಾಂಬ್ ಸ್ಫೋಟದಲ್ಲಿ ಖುಲಾಸೆಗೊಂಡ ಶಂಕಿತನನ್ನು ಪಶ್ಚಿಮ ಕೆನಡಾದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಕೆನಡಾ: ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ; ಘಟನೆಗೆ ಭಾರತ ಖಂಡನೆ!
ಕೆನಡಾದ ರಿಚ್‌ಮಂಡ್ ಹಿಲ್‌ನಲ್ಲಿರುವ ಹಿಂದೂ ದೇವಾಲಯದಲ್ಲಿನ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಕ್ಕಾಗಿ ಆಕ್ರೋಶಗೊಂಡಿರುವ ಭಾರತೀಯ ರಾಯಭಾರ ಕಚೇರಿ ಗುರುವಾರ ಈ ಬಗ್ಗೆ ತಕ್ಷಣದ ತನಿಖೆಗೆ ಒತ್ತಾಯಿಸಿದೆ.

ಕೆನಡಾದಲ್ಲಿ ಬೋಟ್ ದುರಂತ: ಕೇರಳದ ಇಬ್ಬರು ಸಾವು; ಓರ್ವ ನಾಪತ್ತೆ
ಕೆನಡಾದ ಕ್ಯಾನ್ಮೋರ್, ಕ್ಯಾಲ್ಗರಿದಲ್ಲಿ ನಡೆದ ದೋಣಿ ದುರಂತದಲ್ಲಿ ಭಾರತದ ಇಬ್ಬರು ಸಾವನ್ನಪ್ಪಿದ್ದು ಓರ್ವ ನಾಪತ್ತೆಯಾಗಿದ್ದಾರೆ.

ಚೀನಾದ ವಿರುದ್ಧ ಪಶ್ಚಿಮದ ರಾಷ್ಟ್ರಗಳು ಒಟ್ಟಾಗಿ ನಿಲ್ಲಬೇಕಾದ ಅಗತ್ಯವಿದೆ: ಕೆನಡಾ ಪ್ರಧಾನಿ ಟ್ರುಡೊ
ಆಗಾಗ್ಗೆ ಪಶ್ಚಿಮದ ರಾಷ್ಟ್ರಗಳನ್ನು ಪರಸ್ಪರ ಎತ್ತಿಕಟ್ಟುವ ನಾಟಕವಾಡುತ್ತಿರುವ ಚೀನಾದ ವಿರುದ್ಧ ಪಶ್ಚಿಮ ರಾಷ್ಟ್ರಗಳು ಒಟ್ಟಾಗಿ ನಿಲ್ಲಬೇಕಾದ ಅಗತ್ಯವಿದೆ ಎಂದು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಬಾಲಿವುಡ್ ಹಿರಿಯ ನಟಿ ಮಿನೂ ಮುಮ್ತಾಜ್ ನಿಧನ
ಬಾಲಿವುಡ್ ಹಿರಿಯ ನಟಿ, ದಿವಂಗತ ಹಾಸ್ಯನಟ ಮೆಹಮೂದ್ ಅವರ ಸಹೋದರಿ ಮಿನೂ ಮುಮ್ತಾಜ್ ಶನಿವಾರ ಮುಂಜಾನೆ ಕೆನಡಾದಲ್ಲಿ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

