bypoll

ಹೊಸಕೋಟೆ, ಶಿವಾಜಿನಗರ, ಹುಣಸೂರು ಬಿಜೆಪಿಗೆ ದೊಡ್ಡ ಸವಾಲು: ಜೆಡಿಎಸ್ ಗೆ ರೋಷನ್ ಬೇಗ್!
ಡಿಸೆಂಬರ್ 5 ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು ಬಿಜೆಪಿಗೆ ಹುಣಸೂರು, ಶಿವಾಜಿನಗರ ಹಾಗೂ ಹೊಸಕೋಟೆ ಬಹು ದೊಡ್ಡ ಸವಾಲಾಗಿದೆ.

ಉಪಚುನಾವಣೆ ಸಮರ: 7 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಸಾಧ್ಯತೆ
ಉಪಚುನಾವಣೆ ನಾಮಪತ್ರ ಸಲ್ಲಿಕೆಗೆ ಇನ್ನು ಕೇವಲ ಎರಡು ದಿನಗಳಷ್ಟೇ ಬಾಕಿಯಿದ್ದು, ಈ ನಡುವಲ್ಲೇ 15 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಶನಿವಾರ ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಇದು ನನ್ನ ಕೊನೆಯ ಚುನಾವಣೆ,ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ :ಕೆ.ಬಿ.ಕೋಳಿವಾಡ
ಈ ಉಪಚುನಾವಣೆ ನನ್ನ ಕೊನೆಯ ಚುನಾವಣೆಯಾಗಿದ್ದು, ಇನ್ನು ಮುಂದೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹೀಗಾಗಿ ಗೆಲುವಿನ ಮೂಲಕ ನನಗೆ ಬಿಳ್ಕೋಡಿ ಎಂದು ಕ್ಷೇತ್ರದ ಮತದಾರರಲ್ಲಿ ಮನವಿ ರಾಣೆ ಬೆನ್ನೂರು..

ಉಪಚುನಾವಣೆ ಸಮರ: ಅನರ್ಹರಿಗೆ ಟಿಕೆಟ್, ಬಿಜೆಪಿಯಲ್ಲಿ ಒಳಜಗಳ ಆರಂಭ
ಕಾಂಗ್ರೆಸ್-ಜೆಡಿಎಸ್ ಪಕ್ಷಗಳ 13 ಅನರ್ಹ ಶಾಸಕರಿಗೆ ಉಪಚುನಾವಣೆಗೆ ಬಿಜೆಪಿ ಟಿಕೆಟ್ ನೀಡಿದ್ದು, ಇದೀಗ ಬಿಜೆಪಿ ಪಾಳಯದಲ್ಲಿ ಹಗ್ಗಜಗ್ಗಾಟ ಆರಂಭಗೊಂಡಿದೆ.

ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಬಳಿ ಇದೆ ಬರೋಬ್ಬರಿ 1 ಸಾವಿರದ 215 ಕೋಟಿ!
ಬಿಜೆಪಿ ಅಭ್ಯರ್ಥಿ ಯಾಗಿ ಹೊಸಕೋಟೆಯಿಂದ ಕಣಕ್ಕಿಳಿದಿರುವ ಎಂಟಿಬಿ ನಾಗರಾಜ್ ನಾಮಪತ್ರ ಸಲ್ಲಿಸಿದ್ದಾರೆ.ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿರುವ ನಾಮಪತ್ರದಲ್ಲಿ ಎಂಟಿಬಿ ನಾಗರಾಜ್ ಆಸ್ತಿಯ ಒಟ್ಟು ಮೌಲ್ಯ 1 ಸಾವಿರಕ್ಕೂ ಹೆಚ್ಚು ಕೋಟಿ ರೂ ಎಂದು ಘೋಷಣೆ ಮಾಡಿದ್ದಾರೆ.

ನಾನು ಪಕ್ಷದ ಶಿಸ್ತಿನ ಸಿಪಾಯಿ, ಹೈಕಮಾಂಡ್ ನನ್ನ ಕೈಬಿಡುವುದಿಲ್ಲ: ಸವದಿ
ಪಕ್ಷ ಹೇಗೆ ಹೇಳುತ್ತದೆಯೋ ಹಾಗೆ ಅದನ್ನು ನಾನು ಮಾಡುತ್ತೇನೆ. ಪಕ್ಷದ ಪರವಾಗಿ ಉಪಚುನಾವಣೆಯಲ್ಲಿ ಕೆಲಸ ಮಾಡುತ್ತೇನೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಹುಣಸೂರು ಕ್ಷೇತ್ರಕ್ಕೆ ವಿಶ್ವನಾಥ್ ಬಿಜೆಪಿ ಅಭ್ಯರ್ಥಿ: 'ಸೈನಿಕ'ನ ಆಸೆಗೆ ತಣ್ಣೀರು!
ನಿರೀಕ್ಷೆಯಂತೆ ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಅವರು ಕಣಕ್ಕಿಳಿಯಲಿದ್ದಾರೆ. ಹುಣಸೂರು ಕ್ಷೇತ್ರಕ್ಕಾಗಿ ಮಾಜಿ ಸಚಿವರುಗಳಾದ ಜಿಟಿ ದೇವೇಗೌಡ ಮತ್ತು ಸಿಪಿ ಯೋಗೇಶ್ವರ್ ತೆರೆಮರೆಯಲ್ಲಿ ನಡೆಸಿದ ಕಸರತ್ತುಗಳು ವಿಫಲವಾಗಿವೆ.

ಉಪಚುನಾವಣೆಯಿಂದ ಜೆಡಿಎಸ್ ಗಿಲ್ಲ ಅಧಿಕ ಲಾಭ: ಆಯ್ದ ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳು!
ರಾಜ್ಯದಲ್ಲಿ ಡಿಸೆಂಬರ್ 5 ರಂದು ನಡೆಯುವ 15 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಬಿಜೆಪಿಗೆ ಮಹತ್ವಾದ್ದಾಗಿದೆ, ಏಕೆಂದರೇ ಬಿಜೆಪಿ ಸರ್ಕಾರವನ್ನು ಸ್ಥಿರವಾಗಿಟ್ಟುಕೊಳ್ಳಲು ಈ ಚುನಾವಣೆ ಮಹತ್ವದ್ದಾಗಿದೆ.

ಅನರ್ಹ ಕಾಂಗ್ರೆಸ್ ಶಾಸಕರಿಗೆ ಉಪ ಚುನಾವಣೆ ಹಗ್ಗದ ಮೇಲಿನ ನಡಿಗೆ!
ಉಪ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಿರುವ ಕಾಂಗ್ರೆಸ್ ಅನರ್ಹ ಶಾಸಕರಿಗೆ ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿ ಎದುರಾಗಿದೆ. ಈ ಹಿಂದೆ ಕಾಂಗ್ರೆಸ್ ಟಿಕೆಟ್ ನಿಂದ ಸ್ಪರ್ಧಿಸಿದ್ದಾಗ ಇವರಿಗೆ ಅಪಾರ ಬೆಂಬಲ ದೊರಕಿತ್ತು.

