ರಾಜಕೀಯ

ಇದು ನನ್ನ ಕೊನೆಯ ಚುನಾವಣೆ,ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ :ಕೆ.ಬಿ.ಕೋಳಿವಾಡ

ಈ ಉಪಚುನಾವಣೆ ನನ್ನ ಕೊನೆಯ ಚುನಾವಣೆಯಾಗಿದ್ದು, ಇನ್ನು ಮುಂದೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹೀಗಾಗಿ ಗೆಲುವಿನ ಮೂಲಕ ನನಗೆ ಬಿಳ್ಕೋಡಿ ಎಂದು ಕ್ಷೇತ್ರದ ಮತದಾರರಲ್ಲಿ ಮನವಿ ರಾಣೆ ಬೆನ್ನೂರು..

ಇದು ನನ್ನ ಕೊನೆಯ ಚುನಾವಣೆ,ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ :ಕೆ.ಬಿ.ಕೋಳಿವಾಡ
ಕೆಬಿ ಕೋಳಿವಾಡ
Published On :

ರಾಣೆಬೆನ್ನೂರು: ಈ ಉಪಚುನಾವಣೆ ನನ್ನ ಕೊನೆಯ ಚುನಾವಣೆಯಾಗಿ ದ್ದು,ಇನ್ನು ಮುಂದೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹೀಗಾಗಿ ಗೆಲುವಿನ ಮೂಲಕ ನನಗೆ ಬಿಳ್ಕೋಡಿ ಎಂದು ಕ್ಷೇತ್ರದ ಮತದಾರರಲ್ಲಿ ಮನವಿ ರಾಣೆ ಬೆನ್ನೂರು ಕ್ಷೇತ್ರದ ಕಾಂಗ್ರೆ ಸ್ ಅಭ್ಯರ್ಥಿ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಮತದಾರರಲ್ಲಿ ಮಾಡಿಕೊಂಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಳೆದ ಐವತ್ತು ವರ್ಷಗಳಿಂದ ರಾಜಕೀಯ ಜೀವನದಲ್ಲಿದ್ದು,ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ.ಅದು ಕ್ಷೇತ್ರದ ಜನರಿಗೂ ತಿಳಿದಿದೆ.ಸದ್ಯ ರಾಜಕೀಯ ನಿವೃತ್ತಿ ಅಂಚಿನಲ್ಲಿದ್ದೇನೆ.ಇದೊಂದು ಬಾರಿ ನನ್ನ ಗೆಲ್ಲಿಸಿ,ಮತದಾರರು ನನ್ನ ಕೈ ಹಿಡಿಯಬೇಕು ಎಂದು ಅವರು ಮನವಿ ಮಾಡಿದರು.

ಕಳೆದ ಐವತ್ತು ವರ್ಷಗಳಿಂದ ರಾಜಕೀಯ ಜೀವನದಲ್ಲಿದ್ದು, ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಅದು ಕ್ಷೇತ್ರದ ಜನರಿಗೂ ತಿಳಿದಿದೆ. ಸದ್ಯ ರಾಜಕೀಯ ನಿವೃತ್ತಿ ಅಂಚಿನಲ್ಲಿದ್ದೇನೆ. ಇದೊಂದು ಬಾರಿ ನನ್ನ ಗೆಲ್ಲಿಸಿ, ಮತದಾರರು ನನ್ನ ಕೈ ಹಿಡಿಯಬೇಕು ಎಂದು ಮಾಜಿ ಸ್ಪೀಕರ್​ ಮನವಿ ಮಾಡಿದರು.

ನಾನು ಹೇಳಿದಂತೆ ನಡೆದುಕೊಂಡು ಬಂದಿದ್ದೇನೆ. ಇದು ನನ್ನ ಕೊನೆ ಚುನಾವಣೆ. ಮುಂದೆ ಮಗನಿಗೆ ಟಿಕೆಟ್ ಬೇಕೆಂದು ಬಯಸುತ್ತೇನೆ. ಮುಂದೆ ಪುತ್ರ ಪ್ರಕಾಶ್​​ ಕೋಳಿವಾಡ ಬರುತ್ತಾರೆ. ಈಗಲೂ ಸಾರ್ವತ್ರಿಕ ಚುನಾವಣೆ ಅಲ್ಲಗಳೆಯಲು ಆಗಲ್ಲ. ಉಪ ಚುನಾವಣೆ ಫಲಿತಾಂಶದ ನಂತರ ನೋಡೋಣ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.