ಸ್ಟಿಂಗ್ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್
ವಸಂತನಗರದ ಶಾಂಗ್ರೀಲಾ ಖಾಸಗಿ ಹೋಟೆಲ್‌ನಲ್ಲಿ ಸಿಎಂ ಡಿಕೆ ಶಿವಕುಮಾರ್ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿದ್ದರು. ಅವನೇ ಸ್ಟಿಂಗ್ ಆಪರೇಷನ್ ವ್ಯಕ್ತಿ. ಆ ವ್ಯಕ್ತಿ ಯಾರು ಎಂಬುದನ್ನ ಸಿಎಂ ಶಿವಕುಮಾರ್ ಹೇಳಬೇಕು. ಆ ವ್ಯಕ್ತಿಯೇ ಸ್ಟಿಂಗ್ ಆಪರೇಷನ್ ವರದಿ ಕೊಟ್ಟರಾ? ಎಂದು ಸ್ಪಷ್ಟಪಡಿಸಬೇಕು...

ಬೆಂಗಳೂರು: ವಸಂತನಗರದ ಶಾಂಗ್ರೀಲಾ ಖಾಸಗಿ ಹೋಟೆಲ್‌ನಲ್ಲಿ ಸಿಎಂ ಡಿಕೆ ಶಿವಕುಮಾರ್ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿದ್ದರು. ಅವನೇ ಸ್ಟಿಂಗ್ ಆಪರೇಷನ್ ವ್ಯಕ್ತಿ. ಆ ವ್ಯಕ್ತಿ ಯಾರು ಎಂಬುದನ್ನ ಸಿಎಂ ಶಿವಕುಮಾರ್ ಹೇಳಬೇಕು. ಆ ವ್ಯಕ್ತಿಯೇ ಸ್ಟಿಂಗ್ ಆಪರೇಷನ್ ವರದಿ ಕೊಟ್ಟರಾ? ಎಂದು ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವರು, ಶಿವಕುಮಾರ್ ಮಾಡಿದ್ದ ಸ್ಟಿಂಗ್ ಆಪರೇಷನ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಶಿವಕುಮಾರ್ ಅವರು ಆ ವ್ಯಕ್ತಿಯನ್ನ ಭೇಟಿ ಮಾಡಿದ ಬಳಿಕ ಕ್ಯಾಬಿನೆಟ್‌ಗೆ ಸ್ಟಿಂಗ್ ಆಪರೇಷನ್ ಪಟ್ಟಿ ತೆಗೆದುಕೊಂಡು ಹೋಗಿದ್ದರು. ಉತ್ತರ ಭಾರತದಿಂದ ನಿರ್ದೇಶನಗಳು ಬರುತ್ತಿವೆ, ಕುಮಾರಸ್ವಾಮಿ ಅವರೇ ಸ್ಟಿಂಗ್ ಆಪರೇಷನ್ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಆದರೆ ಸ್ಟಿಂಗ್ ಆಪರೇಷನ್ ಮಹಾನಾಯಕ, ಸಾಮ್ರಾಟ್ ಎಂದು ಯಾರು ಕರೆಸಿಕೊಳ್ಳುವವರು ಯಾರು ಎಂಬುದು ಜನತೆಗೆ ಗೊತ್ತಿದೆ ಎಂದು ಕುಟುಕಿದರು.
ರಾಜ್ಯದಲ್ಲಿ ಏನು ನಡೆಯುತ್ತಿದೆ ಎನ್ನುವುದು ಸಿಎಂ ಶಿವಕುಮಾರ್ ಜನತೆಯ ಮುಂದೆ ಇಡಬೇಕು. ಅಲ್ಲದೆ ಕಾಂಗ್ರೆಸ್ ನಾಯಕರೊಬ್ಬರ ವಿರುದ್ಧ ನಡೆದಿರುವ ಸ್ಟಿಂಗ್ ಆಪರೇಷನ್ ಆಗಿದೆ ಎನ್ನುವ ವಿಚಾರ ಹಾಗೆಯೇ ಸೈಲೆಂಟ್ ಆಯಿತು? ಆ ಸ್ಟಿಂಗ್‍ನಲ್ಲಿ ಸಿಎಂ ಕೂರಿಸಿಕೊಂಡು ಮಾತನಾಡಿರುವ ವ್ಯಕ್ತಿಯ ಪಾತ್ರವೇನು? ಎಂಬುದು ಹೊರಗೆ ಬರಬೇಕಲ್ಲವೇ? ಎಂದು ಕುಮಾರಸ್ವಾಮಿ ಕೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



