bypoll

ಉಪಚುನಾವಣೆ ಫಲಿತಾಂಶ: ಆರ್.ಆರ್.ನಗರ, ಶಿರಾ ಎರಡೂ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ; ಕಾಂಗ್ರೆಸ್, ಜೆಡಿಎಸ್ ಹಿನ್ನಡೆ
ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿದ್ದು, ಮೊದಲ ಹಂತದ ಮತಎಣಿಕೆಯಲ್ಲಿ ಎರಡೂ ಕ್ಷೇತ್ರದಲ್ಲಿಯೂ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ.

ಕರ್ನಾಟಕ ಉಪಚುನಾವಣೆ: ಮತಎಣಿಕೆ ಪ್ರಕ್ರಿಯೆ ಆರಂಭ, ಮಧ್ಯಾಹ್ನ 12ರ ವೇಳೆಗೆ ಶಿರಾ, ರಾಜರಾಜೇಶ್ವರಿ ನಗರ ಭವಿಷ್ಯ ನಿರ್ಧಾರ
ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್ ನಡುವಿನ ಜಿದ್ದಾಜಿದ್ದಿ ಕಣವಾಗಿರುವ ತುಮಕೂರು ಜಿಲ್ಲೆಯ ಶಿರಾ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ.

'ಶಿರಾ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಡಿಕೆಶಿ ಮಗ್ನ, ಆರ್ ಆರ್ ನಗರ ಕೈ ಅಭ್ಯರ್ಥಿ ಸೋಲಿಸಲು ಸಿದ್ದರಾಮಯ್ಯ ಪಣ'
ಕಾಂಗ್ರೆಸ್ ಪಕ್ಷದ ಆಂತರಿಕ ಜಗಳದಿಂದ ಬಿಜೆಪಿಗೆ ಪ್ರಯೋಜನವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದ್ದಾರೆ.

ಉಪಚುನಾವಣೆ: ಕೋವಿಡ್-19 ಸೋಂಕಿತರಿಂದ ಮತ ಚಲಾವಣೆ
ರಾಜ್ಯ ವಿಧಾನಸಭಾ ಚುನಾವಣೆಗೆ ನಡೆದ ಮತದಾನದಲ್ಲಿ ಇದೇ ಮೊದಲ ಬಾರಿಗೆ ಕೋವಿಡ್ ಸೋಂಕಿತರಿಗೆ ಮತದಾನ ಮಾಡಲು ಅವಕಾಶ ನೀಡಲಾಗಿದ್ದು, ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 42 ಮಂದಿ ಸೋಂಕಿತರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ.

ಮಸ್ಕಿ, ಬಸವ ಕಲ್ಯಾಣ ಕ್ಷೇತ್ರ ಉಪಚುನಾವಣೆಯತ್ತ ರಾಜಕೀಯ ಪಕ್ಷಗಳ ಮುಂದಿನ ಗಮನ!
ಶಿರಾ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರ ಉಪಚುನಾವಣೆ ಬಳಿಕ ಇದೀಗ ರಾಜಕೀಯ ಪಕ್ಷಗಳ ಗಮನ ಮಸ್ಕಿ ಹಾಗೂ ಬಸವಕಲ್ಯಾಣ ಕ್ಷೇತ್ರದತ್ತ ಹೊರಳಿದೆ.

ನಾನು ಗೆಲ್ತೀನಾ ನೋಡಿ? ಜ್ಯೋತಿಷಿಗಳಿಗೆ ಮುಗಿಬಿದ್ದ ಉಪಚುನಾವಣಾ ಅಭ್ಯರ್ಥಿಗಳು!
ಜ್ಯೋತಿಷಿ ಮತ್ತು ಮಂತ್ರವಾದಿಗಳ ಬಳಿ ಬಂದ ಅಭ್ಯರ್ಥಿಗಳು ಕೇಳುತ್ತಿದ್ದ ಪ್ರಶ್ನೆ ಒಂದೇ ನಾನು ಗೆಲ್ತಿನಾ? ಎಂದು. ತಮ್ಮ ತಮ್ಮ ಜಾತಕಗಳನ್ನು ಹಿಡಿದು ಚಾಮರಾಜನಗರ ಜಿಲ್ಲೆಯ ಜ್ಯೋತಿಷಿಗಳಿಗೆ ಮುಗಿಬಿದ್ದಿದ್ದರು.

ಉಪಚುನಾವಣೆ: ಶಿರಾದಲ್ಲಿ ಭರ್ಜರಿ ಮತದಾನ, ರಾಜರಾಜೇಶ್ವರಿ ನಗರದಲ್ಲಿ ನೀರಸ ಪ್ರತಿಕ್ರಿಯೆ
ಮಹಾಮಾರಿ ಕೊರೋನಾ ಸೋಂಕಿನಿ ಭೀತಿಯ ನಡುವೆಯೂ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಮತದಾನವಾಗಿದ್ದು, ರಾಜಧಾನಿ ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ನೀರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಉಪಚುನಾವಣೆ ಸಮರ: ಮಧ್ಯಾಹ್ನ 1 ಗಂಟೆಯವರೆಗೆ ಶಿರಾದಲ್ಲಿ ಶೇ.44.13, ಆರ್.ಆರ್.ನಗರದಲ್ಲಿ ಶೇ.26.58 ಮತದಾನ
ಶಿರಾ ಹಾಗೂ ರಾಜರಾಜೇಶ್ವರಿ ನಗರದ ಉಪಚುನಾವಣಾ ಮತದಾನ ಪ್ರಕ್ರಿಯೆ ಬಿರುಸಿನಿಂದ ಸಾಗಿದ್ದು, ಮಧ್ಯಾಹ್ನ 1 ಗಂಟೆಯವರೆಗೂ ರಾಜರಾಜೇಶ್ವರಿ ನಗರದಲ್ಲಿ ಶೇ.26.58 ಹಾಗೂ ಶಿರಾದಲ್ಲಿ ಶೇ.44.13ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ.

ಆಯೋಗ ಅನುಮತಿ ನೀಡಿದರೆ ಆರೋಪಗಳಿಗೆ ಉತ್ತರಿಸುತ್ತೇನೆ, ಎಲ್ಲಿ ಬೇಕಾದರೂ ಬರಲು ಸಿದ್ದ: ಮುನಿರತ್ನ
ನನ್ನ ವಿರುದ್ಧದ ಎಲ್ಲ ಆರೋಪಗಳಿಗೂ ಚುನಾವಣಾ ಆಯೋಗ ಅನುಮತಿ ನೀಡುತ್ತಿದ್ದಂತೆ ಸ್ಪಷ್ಟೀಕರಣ ನೀಡುತ್ತೇನೆ. ತಿರುಪತಿಯಲ್ಲ ದೇವಲೋಕದ ಯಾವ ದೇವಾಲ ಯಕ್ಕೆ ಬೇಕಾದರೂ ಬರಲು ಸಿದ್ದನಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಕಾಂಗ್ರೆಸ್ ನಾಯಕರಿಗೆ ಪ್ರತಿಸವಾಲು ಹಾಕಿದ್ದಾರೆ.

