ನಾನು ಗೆಲ್ತೀನಾ ನೋಡಿ? ಜ್ಯೋತಿಷಿಗಳಿಗೆ ಮುಗಿಬಿದ್ದ ಉಪಚುನಾವಣಾ ಅಭ್ಯರ್ಥಿಗಳು!
ಜ್ಯೋತಿಷಿ ಮತ್ತು ಮಂತ್ರವಾದಿಗಳ ಬಳಿ ಬಂದ ಅಭ್ಯರ್ಥಿಗಳು ಕೇಳುತ್ತಿದ್ದ ಪ್ರಶ್ನೆ ಒಂದೇ ನಾನು ಗೆಲ್ತಿನಾ? ಎಂದು. ತಮ್ಮ ತಮ್ಮ ಜಾತಕಗಳನ್ನು ಹಿಡಿದು ಚಾಮರಾಜನಗರ ಜಿಲ್ಲೆಯ ಜ್ಯೋತಿಷಿಗಳಿಗೆ ಮುಗಿಬಿದ್ದಿದ್ದರು.

ಮೈಸೂರು: ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಜ್ಯೋತಿಷಿಗಳು ಮತ್ತು ಮಂತ್ರವಾದಿಗಳ ಮೊರೆ ಹೋಗಿದ್ದು ಕಂಡು ಬಂತು.
ಜ್ಯೋತಿಷಿ ಮತ್ತು ಮಂತ್ರವಾದಿಗಳ ಬಳಿ ಬಂದ ಅಭ್ಯರ್ಥಿಗಳು ಕೇಳುತ್ತಿದ್ದ ಪ್ರಶ್ನೆ ಒಂದೇ ನಾನು ಗೆಲ್ತಿನಾ? ಎಂದು. ತಮ್ಮ ತಮ್ಮ ಜಾತಕಗಳನ್ನು ಹಿಡಿದು ಚಾಮರಾಜನಗರ ಜಿಲ್ಲೆಯ ಜ್ಯೋತಿಷಿಗಳಿಗೆ ಮುಗಿಬಿದ್ದಿದ್ದರು.
ತಮ್ಮ ಜಾತಕದ ನಕ್ಷತ್ರದ ಪ್ರಕಾರ ನಾವು ಗೆಲ್ಲುತ್ತಿವಾ ಎಂದು ಕೇಳುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಜ್ಯೋತಿಷಿಗಳು ವಿಶೇಷ ಪೂಜೆ ಪುನಸ್ಕಾರ ಮಾಡಿ ಯಾವ ಪೂಜೆ ಮಾಡಿದರೇ ಗೆಲ್ಲಬಹುದು ಎಂಬ ಬಗ್ಗೆ ಸಲಹೆ ನೀಡಿದ್ದಾರೆ.
ಪ್ರಮುಖ ಪಕ್ಷವೊಂದು ಉಪ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪ್ರಖ್ಯಾತ ಜ್ಯೋತಿಷಿಗಳ ಸಲಹೆಯಂತೆ ಹುಣ್ಣಿಮೆ ದಿನ ವಿಶೇಷ ಹೋಮ ಹವನ ನಡೆಸಿದ್ದರು.
ಕೆಲವು ದಿನಗಳಿಂದ ನಡೆಯುತ್ತಿದ್ದ ಪೂಜೆ ಮುಕ್ತಾಯಗೊಂಡಿದೆ, ಸದ್ಯ ಮತದಾನ ಅಂತ್ಯಗೊಂಡಿದೆ, ಇದೇ ವೇಳೆ ಅಭ್ಯರ್ಥಿಗಳ ಕುಟುಂಬಸ್ಥರು ತಮ್ಮ ಜ್ಯೋತಿಷಿಗಳ ಸಲಹೆಯಂತೆ ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಈ ಹಿಂದೆ ಹಲವು ರಾಜಕಾರಣಿಗಳು ಚುನಾವಣಾ ಸಮಯದಲ್ಲಿ ಮತ್ತು ನಂತರದಲ್ಲಿ ಕೊಳ್ಳೆಗಾಲದ ಜ್ಯೋತಿಷಿಗಳ ಮೊರೆ ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


