BWSSB

BWSSBಯಿಂದ ಶೀಘ್ರದಲ್ಲೇ ಇನ್ಫೋಸಿಸ್ ಗೆ 4 ಲಕ್ಷ ಲೀಟರ್ ಸಂಸ್ಕರಿಸಿದ ತ್ಯಾಜ್ಯ ನೀರು ಪೂರೈಕೆ
ವಿಪ್ರೋ ನಂತರ ಇದೀಗ ಇನ್ಫೋಸಿಸ್ ಕೂಡಾ ಸಂಸ್ಕರಿಸಿದ ತ್ಯಾಜ್ಯ ನೀರು ಬಳಕೆಗೆ ಮುಂದಾಗಿದೆ. ಟೆಕ್ ದೈತ್ಯಕ್ಕೆ ಶೀಘ್ರದಲ್ಲೇ ನಾಲ್ಕು ಲಕ್ಷ ಲೀಟರ್ ಸಂಸ್ಕರಿಸಿದ ನೀರು ಸರಬರಾಜು ಮಾಡಲಾಗುವುದು ಎಂದು ಬಿಡ್ಬ್ಲೂಎಸ್ ಎಸ್ ಬಿ ಮೂಲಗಳು ತಿಳಿಸಿವೆ.

110 ಗ್ರಾಮಗಳಲ್ಲಿ ಕಾವೇರಿ ನೀರಿನ ಸಂಪರ್ಕ ನೀಡಲು ಗ್ರಾಹಕರ ಮನೆಬಾಗಿಲಿಗೆ ಜಲಮಂಡಳಿ
ಕಾವೇರಿ 5 ನೇ ಹಂತದ ಕಾಮಗಾರಿ ಪೂರ್ಣಗೊಳ್ಳುವ ಅಂತಿಮ ಹಂತದಲ್ಲಿದ್ದು, ಜಲಮಂಡಳಿ ನೀರು ಸರಬರಾಜು ಮಾಡುವ ಸಿದ್ದತೆ ನಡೆಸಿದೆ. ಈ 110 ಗ್ರಾಮಗಳಲ್ಲಿ ಕಾವೇರಿ ಸಂಪರ್ಕ ನೀಡಲು ಜನರ ಮನೆಬಾಗಿಲಿಗೆ ಜಲಮಂಡಳಿ ತೆರಳಲಿದೆ ಎಂದು ಬಿಡಬ್ಲ್ಯೂಎಸ್ ಎಸ್ ಬಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು: 7 ದಿನಗಳಲ್ಲಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ BWSSB ಸೂಚನೆ
ಸಾರ್ವಜನಿಕರಲ್ಲಿ ನೀರಿನ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಶಾಲೆಗಳು, ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ (ಆರ್‌ಡಬ್ಲ್ಯೂಎಚ್) ಮತ್ತು ಇಂಗುಗುಂಡಿಗಳ ನಿರ್ಮಾಣಕ್ಕೆ ಮುಂದಾಗಿರುವ...

ಒಳಚರಂಡಿ, ರಾಜಕಾಲುವೆಗೆ ತ್ಯಾಜ್ಯ ನೀರು: ಅನಧಿಕೃತ 2137 ಸಂಪರ್ಕ ಪತ್ತೆ
ಬೆಂಗಳೂರು ಜಲಮಂಡಳಿಯಿಂದ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಅನಧಿಕೃತವಾಗಿ ತ್ಯಾಜ್ಯ ನೀರನ್ನು ಒಳಚರಂಡಿಗೆ ಹಾಗೂ ರಾಜಕಾಲುವಗೆ ಹರಿಸುತ್ತಿರುವವರ ಸಂಪರ್ಕ ಪತ್ತೆ ಕಾರ್ಯ ನಡೆದಿದೆ.

ನಗರದಲ್ಲಿ ಅಕ್ರಮ ಬೋರ್ವೆಲ್ ಕೊರೆತ ಹೆಚ್ಚಳ: BWSSB ದೂರು ದಾಖಲು!
ನಗರದಲ್ಲಿ ನೀರಿನ ಅಭಾವ ತಲೆದೋರಿದ್ದು, ಇದರ ನಡುವಲ್ಲೇ ಅಕ್ರಮ ಕೊಳವೆ ಬಾವಿಗಳ ಕೊರೆತ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ: 30 ದಿನಗಳಲ್ಲಿ 986 ಮಳೆನೀರು ಇಂಗುಗುಂಡಿ ನಿರ್ಮಿಸಿದ BWSSB!
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿಗೆ ಭಾರೀ ಹಾಹಾಕಾರ ಉಂಟಾಗಿದ್ದು, ಅಂತರ್ಜಲ ಹೆಚ್ಚಿಸಿ, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಾಕಷ್ಟ ಕಡೆಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ ಮಾಡಿ, ಮೈಲಿಗಲ್ಲು ಸಾಧಿಸಿದೆ.

ಕಾವೇರಿ ಮೇಲಿನ ಒತ್ತಡ ಇಳಿಸಲು ಕ್ರಮ: ಪ್ರತಿದಿನ ಕೋಟಿ ಲೀಟರ್ ಸಂಸ್ಕರಿತ ನೀರು ಉತ್ಪಾದನೆಗೆ BWSSB ಮುಂದು!
ಕಾವೇರಿ ನದಿ ನೀರು ಹಾಗೂ ಬೋರ್‌ವೆಲ್‌ಗಳ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡುವ ಸಲುವಾಗಿ ನಗರದಲ್ಲಿ ಸಂಸ್ಕರಿಸಿದ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಲು ಬೆಂಗಲೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ಯೋಜನೆ ರೂಪಿಸುತ್ತಿದೆ.

BWSSBಯಿಂದ ವಿಪ್ರೋಗೆ ಪ್ರತಿದಿನ 3 ಲಕ್ಷ ಲೀಟರ್ ಸಂಸ್ಕರಿಸಿದ ನೀರು ಪೂರೈಕೆ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB) ಟೆಕ್ ದೈತ್ಯ ವಿಪ್ರೋಗೆ ಗುರುವಾರದಿಂದ ಪ್ರತಿದಿನ ಮೂರು ಲಕ್ಷ ಲೀಟರ್ ಸಂಸ್ಕರಿಸಿದ ನೀರು ಪೂರೈಸಲು ಆರಂಭಿಸಿದೆ.

ತೆರೆದ ಚರಂಡಿಗೆ ಹರಿದು ಬರುತ್ತಿರುವ ಕೊಳಚೆ ನೀರು: ಅಪಾಯದಲ್ಲಿ ನಿವಾಸಿಗಳು
ಹರಳೂರು ರಸ್ತೆಯಲ್ಲಿನ ಅಪಾರ್ಟ್ ಮೆಂಟ್ ವೊಂದರ ಮುಂದೆ ಇರುವ ತೆರೆದ ಚರಂಡಿ ಅಪಾಯದ ಗಂಟೆ ಭಾರಿಸುವಂತಿದ್ದು, ಆತಂಕಕ್ಕೆ ಕಾರಣವೆನಿಸಿದೆ.

