ರಾಜ್ಯ

ನಗರದಲ್ಲಿ ಅಕ್ರಮ ಬೋರ್​ವೆಲ್ ಕೊರೆತ ಹೆಚ್ಚಳ: BWSSB ದೂರು ದಾಖಲು!

ನಗರದಲ್ಲಿ ನೀರಿನ ಅಭಾವ ತಲೆದೋರಿದ್ದು, ಇದರ ನಡುವಲ್ಲೇ ಅಕ್ರಮ ಕೊಳವೆ ಬಾವಿಗಳ ಕೊರೆತ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ನಗರದಲ್ಲಿ ಅಕ್ರಮ ಬೋರ್​ವೆಲ್ ಕೊರೆತ ಹೆಚ್ಚಳ: BWSSB ದೂರು ದಾಖಲು!
ಸಂಗ್ರಹ ಚಿತ್ರ
Published On :

ಬೆಂಗಳೂರು: ನಗರದಲ್ಲಿ ನೀರಿನ ಅಭಾವ ತಲೆದೋರಿದ್ದು, ಇದರ ನಡುವಲ್ಲೇ ಅಕ್ರಮ ಕೊಳವೆ ಬಾವಿಗಳ ಕೊರೆತ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಅನುಮತಿ ಇಲ್ಲದೆ ಬೋರ್​ವೆಲ್ ಕೊರೆಯುವಂತಿಲ್ಲ ಎಂದು ಈಗಾಗಲೇ ಬಿಡಬ್ಲ್ಯೂಎಸ್ಎಸ್'ಬಿ ಆದೇಶ ಹೊರಡಿಸಿದ್ದರೂ, ಹಲವೆಡೆ ಅಧಿಕಾರಿಗಳ ಕಣ್ತಪ್ಪಿಸಿ, ನಿಯಮ ಉಲ್ಲಂಘಿಸುತ್ತಿರುವುದು ಕಂಡು ಬರುತ್ತಿದೆ.

ಅನಧಿಕೃತ ಪೇಯಿಂಗ್‌ ಗೆಸ್ಟ್‌ (ಪಿಜಿ) ಕಟ್ಟಡದಲ್ಲಿ ಬೋರ್ ವೆಲ್ ಕೊರೆಯುತ್ತಿರುವುದಾಗಿ ವೈಟ್‌ಫೀಲ್ಡ್‌ನ ಅಂಬೇಡ್ಕರ್ ನಗರದ ನಿವಾಸಿಗಳು ನೀಡಿದ ಮಾಹಿತಿ ಮೇರೆಗೆ ಬಿಡಬ್ಲ್ಯೂಎಸ್ಎಸ್'ಬಿ ಅಧಿಕಾರಿಗಳು, ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.

ಪೌರಕಾರ್ಮಿಕ ಸಂದೀಪ್ ಅನಿರುಧನ್ ಮಾತನಾಡಿ, ಈ ವ್ಯವಹಾರದಲ್ಲಿ ತೊಡಗಿರುವ ಬಿಲ್ಡರ್‌ಗಳು ಬೋರ್‌ವೆಲ್‌ಗೆ ಅನುಮತಿ ಪಡೆಯಲು ಎಲ್ಲಾ ರೀತಿಯ ತಂತ್ರಗಳನ್ನು ನಡೆಸುತ್ತಿದ್ದಾರೆ, ಆದರೆ ಅಂತರ್ಜಲ ಕುಸಿತವನ್ನು ಉಲ್ಲೇಖಿಸಿ ಏಪ್ರಿಲ್‌ನಲ್ಲಿ ಜಲಮಂಡಳಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಕಟ್ಟಡ ನಿರ್ಮಾಣಕ್ಕೆ ಸಂಸ್ಕರಿಸಿದ ನೀರನ್ನು ಮಾತ್ರ ಅನುಮತಿಸಲಾಗಿದೆ ಎಂದು BWSSB ಸ್ಪಷ್ಟವಾಗಿ ಹೇಳಿದೆ. ಆದರೆ, ಮಾಲೀಕರು ಖಾಲಿ ನಿವೇಶನಕ್ಕೆ ಅನುಮತಿ ಪಡೆದಿದ್ದು, ಬೋರ್‌ವೆಲ್ ಕೊರೆಸಲು ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ಅನುಮತಿ ಸಿಕ್ಕಿದ್ದೇ ಆದರೆ, ಬೋರ್ವೆಲ್ ಕೊರೆತಿ ಆ ನೀರನ್ನು ನಿರ್ಮಾಣ ಕಾರ್ಯಕ್ಕೆ ಬಳಕೆ ಮಾಡುತ್ತಾರೆಂದು ಹೇಳಿದ್ದಾರೆ.

ಪಿಜಿ ವ್ಯವಹಾರವು ವಾಣಿಜ್ಯ ವ್ಯವಹಾರಕ್ಕೆ ಬರುತ್ತದೆ, ಆದರೆ, ಮಾಲೀಕರು ನಿರ್ಮಾಣವನ್ನು ದೇಶೀಯವೆಂದು ಘೋಷಿಸಿ ಮೋಸದಿಂದ ಅನುಮತಿ ಪಡೆದಿದ್ದಾರೆ. ಎರಡು ವಾರಗಳ ಹಿಂದೆ ಇದೇ ಪ್ರದೇಶದಲ್ಲಿ ಅನಧಿಕೃತ ಬೋರ್‌ವೆಲ್‌ ಕೊರೆಯುವುದನ್ನು ಸ್ಥಳೀಯ ನಿವಾಸಿಗಳು ನಿಲ್ಲಿಸಿದ್ದರು ಎಂದು ತಿಳಿಸಿದ್ದಾರೆ.

ದೂರು ಹಿನ್ನೆಲೆಯಲ್ಲಿ ನಾವು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಪೊಲೀಸರಿಗೆ ದೂರು ನೀಡಿದೆವು. ಬೋರ್‌ವೆಲ್ ಗುತ್ತಿಗೆದಾರನ ವಿರುದ್ಧವೂ ದೂರು ದಾಖಲಾಗಿದ್ದು, ವಾಹನದ ನಂಬರ್‌ಗಳನ್ನು ಪೊಲೀಸರಿಗೆ ನೀಡಲಾಗಿದೆ. ಇನ್ನು ಮುಂದೆ ಬೋರ್‌ವೆಲ್ ಗುತ್ತಿಗೆದಾರರ ವಿರುದ್ಧವೂ ದೂರು ದಾಖಲು ಮಾಡಲಾಗುವುದು ಎಂದು ಬಿಡಬ್ಲ್ಯುಎಸ್‌ಎಸ್‌ಬಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.