BMRCL

ಕೆಆರ್ ಪುರಂನಿಂದ ವೈಟ್ ಫೀಲ್ಡ್ ಗೆ ಮೆಟ್ರೋ ರೈಲು ಸಂಚಾರ ಸಮಯ ಕೇವಲ 22 ನಿಮಿಷ!
ಕೆಆರ್ ಪುರಂ ಮತ್ತು ವೈಟ್ ಫೀಲ್ಡ್ ನಡುವಣ ಕೇವಲ 22 ನಿಮಿಷಗಳಲ್ಲಿ ಸಂಚರಿಸಬಹುದಾದ ಮೆಟ್ರೋ ರೈಲನ್ನು ಶೀಘ್ರದಲ್ಲಿಯೇ ಆರಂಭಿಸಲಾಗುತ್ತಿದೆ. ಹೊಸ ಮಾರ್ಗದಲ್ಲಿ ಪ್ರತಿ 12 ನಿಮಿಷಕ್ಕೊಮ್ಮೆ ಒಂದು ರೈಲು ಸೇವೆ ಆರಂಭಿಸಲು ಬಿಎಂಆರ್ ಸಿಎಲ್ ಯೋಜಿಸುತ್ತಿದೆ.

ವೈಟ್‌ಫೀಲ್ಡ್ ಲೈನ್‌ನ 12 ನಿಲ್ದಾಣಗಳ ಸುತ್ತ ಐದು ಕಿ.ಮೀವರೆಗೆ ಫೀಡರ್ ಬಸ್ ಸೇವೆ, ಕೆಲವು ನಿಲ್ದಾಣಗಳ ಮರುನಾಮಕರಣ
ವೈಟ್‌ಫೀಲ್ಡ್-ಕೆಆರ್ ಪುರಂ ಸ್ಟ್ರೆಚ್‌ನ ರೀಚ್-I ವಿಸ್ತರಣೆಯನ್ನು ಮುಂದಿನ ತಿಂಗಳು ಪ್ರಾರಂಭಿಸಲಾಗುವುದು. ಈ ಬೆನ್ನಲ್ಲೇ, ಬಿಎಂಆರ್‌ಸಿಎಲ್ ಎಲ್ಲಾ 12 ನಿಲ್ದಾಣಗಳ ಸುತ್ತಲೂ ಕನಿಷ್ಠ 5 ಕಿಮೀವರೆಗೆ ಫೀಡರ್ ಬಸ್ ಸೇವೆಗಳನ್ನು ಒದಗಿಸಲು ಬಿಎಂಟಿಸಿಯೊಂದಿಗೆ ಕೆಲಸ ಮಾಡುತ್ತಿದೆ.

ಬ್ರಿಗೇಡ್ ರಸ್ತೆಯಲ್ಲಿ ಸಿಂಕ್ ಹೋಲ್: ಪೈಪ್ ಬದಲಾಯಿಸಲು ಬಿಎಂಆರ್ ಸಿಎಲ್ ನಿಂದ 3.5 ಕೋಟಿ ರೂ. ಕೇಳಿದ ಬಿಡಬ್ಲ್ಯೂಎಸ್ ಎಸ್ ಬಿ
ಒಂದು ತಿಂಗಳ ಹಿಂದೆ ಬ್ರಿಗೇಡ್ ರಸ್ತೆಯಲ್ಲಿ ಉಂಟಾದ ಸಿಂಕ್ ಹೋಲ್ ಸಮಸ್ಯೆಗೆ ಸಂಬಂಧಿಸಿದಂತೆ ಮೆಟ್ರೋ ಮಾರ್ಗದುದ್ದಕ್ಕೂ ಹಳೆಯ ಪೈಪ್ ಲೈನ್ ಬದಲಾಯಿಸಲು ರೂ. 3.5 ಕೋಟಿ ನೀಡುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೇಳಿದೆ.

ಮೆಟ್ರೋ ರೈಲಿನ ಹಳಿ ದಾಟಲು ಮುಂದಾದ ಇಬ್ಬರು ಪ್ರಯಾಣಿಕರು, 10 ನಿಮಿಷ ಸೇವೆಗೆ ಅಡ್ಡಿ
ಮಹಾಕವಿ ಕುವೆಂಪು ರಸ್ತೆಯ ಮೆಟ್ರೋ ನಿಲ್ದಾಣದಲ್ಲಿ ಶನಿವಾರ ಇಬ್ಬರು ಮೆಟ್ರೋ ಪ್ರಯಾಣಿಕರು ಮೆಟ್ರೋ ರೈಲು ಹಳಿಗಳ ಮೇಲೆ ದಾಟಲು ಯತ್ನಿಸಿದರು. ಇದರಿಂದಾಗಿ ಶನಿವಾರ 10 ನಿಮಿಷಗಳ ಕಾಲ ಗ್ರೀನ್ ಲೈನ್‌ನಲ್ಲಿ ರೈಲು ಸೇವೆಗಳ ಮೇಲೆ ಪರಿಣಾಮ ಬೀರಿತು.

ಬೆಂಗಳೂರು ಮೆಟ್ರೋ ಹಳಿಯಲ್ಲಿ ಬಿರುಕು: ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ದುರಂತ, ತಡವಾಗಿ ವಿಷಯ ಬಹಿರಂಗ!
ಬೆಂಗಳೂರಿನ ನಮ್ಮ ಮೆಟ್ರೋ ರೈಲು ಮಾರ್ಗದಲ್ಲಿ ಹಳಿ ಬಿರುಕು ಬಿಟ್ಟಿದ್ದು, ಮೆಟ್ರೋ ಸಂಚಾರದಲ್ಲಿ ಸ್ವಲ್ಪವೇ ಅಂತರದಲ್ಲಿ ಬೃಹತ್ ಅನಾಹುತ ನಡೆಯುವುದು ತಪ್ಪಿದಂತಾಗಿದೆ. ಹಳಿ ಬಿರುಕು ಬಿಟ್ಟ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ನಮ್ಮ ಮೆಟ್ರೋ ಪಿಲ್ಲರ್ ಕುಸಿತಕ್ಕೆ ಕಾರಣ ಕೊಟ್ಟ ತಜ್ಞರು: ಐಐಎಸ್‌ಸಿ ನೀಡಿದ ವರದಿಯಲ್ಲೇನಿದೆ?
ಇತ್ತೀಚೆಗೆ ಬೆಂಗಳೂರಿನ ಮೆಟ್ರೋ ನಿರ್ಮಾಣ ಸ್ಥಳದಲ್ಲಿ ಪಿಲ್ಲರ್ ಕುಸಿದು ತಾಯಿ-ಮಗ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ IISc ನ ಸಿವಿಲ್ ಎಂಜಿನಿಯರಿಂಗ್ ವಿಭಾಗವು 27 ಪುಟಗಳ ವರದಿಯನ್ನು ಸಲ್ಲಿಸಿದ್ದು, ಪಿಲ್ಲರ್ ನಡುವಿನ ಅಂತರವೇ ಅವಘಡಕ್ಕೆ ಕಾರಣವಾಯಿತು ಎಂದು ಹೇಳಿದೆ.

ಫೆಬ್ರವರಿ 15 ರ ನಂತರ ವೈಟ್‌ಫೀಲ್ಡ್ ಮಾರ್ಗ ಪರಿಶೀಲನೆಗೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಗೆ BMRCL ಆಹ್ವಾನ
ವೈಟ್‌ಫೀಲ್ಡ್ ಮತ್ತು ಕೆಆರ್ ಪುರಂ ನಡುವಿನ 13 ಕಿಮೀ ವ್ಯಾಪ್ತಿಯಲ್ಲಿನ ಮೆಟ್ರೋ ರೈಲು ಮಾರ್ಗದ ಪರೀಕ್ಷಾರ್ಥ ಪರಿಶೀಲನೆಗೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಗೆ BMRCL ಆಹ್ವಾನ ನೀಡಿದೆ.

ಬೆಂಗಳೂರು ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ; ಘಟನೆಗೆ ಸ್ಪಷ್ಟ ಕಾರಣ ತಿಳಿಸದೆ ಮೌನ ವಹಿಸಿದ ಬಿಎಂಆರ್‌ಸಿಎಲ್
ಬೆಂಗಳೂರಿನ ಮೆಟ್ರೋ ನಿರ್ಮಾಣ ಸ್ಥಳದಲ್ಲಿ ಪಿಲ್ಲರ್ ಕುಸಿದು ತಾಯಿ-ಮಗ ಸಾವಿಗೀಡಾದ ಪ್ರಕರಣಕ್ಕೆ ಸಂಬಂದಿಸಿದಂತೆ ನಿಖರ ಕಾರಣ ಏನೆಂಬುದರ ಬಗ್ಗೆ ಬಿಎಂಆರ್‌ಸಿಎಲ್ ಮೌನವಾಗಿರುವುದರ ಬಗ್ಗೆ ಅನುಮಾನಗಳು ಮತ್ತು ಪ್ರಶ್ನೆಗಳು ಹುಟ್ಟಿಕೊಂಡಿವೆ.

ಮೆಟ್ರೋ ಪಿಲ್ಲರ್ ಕುಸಿತ ದುರಂತ ಬಳಿಕ ಎಚ್ಚೆತ್ತ ಬಿಎಂಆರ್'ಸಿಎಲ್: ನಿರ್ಮಾಣ ಸ್ಥಳಗಳಿಗೆ ಹೊಸ ಮಾರ್ಗಸೂಚಿ ಹೊರಡಿಸಲು ಸಿದ್ಧತೆ!
ಎಚ್‌ಬಿಆರ್ ಲೇಔಟ್‌ನಲ್ಲಿ ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೋ ಪಿಲ್ಲರ್ ಕುಸಿದುಬಿದ್ದು ತಾಯಿ ಮತ್ತು ಮಗು ದುರ್ಮರಣವನ್ನಪ್ಪಿದ ಘಟನೆ ಬಳಿಕ ಎಚ್ಚೆತ್ತುಕೊಂಡಿರುವ ಬಿಎಂಆರ್'ಸಿಎಲ್ ಅಧಿಕಾರಿಗಳು ಇದೀಗ ನಿರ್ಮಾಣ ಸ್ಥಳಗಳಿಗೆ ಮಾರ್ಗಸೂಚಿ ಹೊರಡಿಸಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

