BJP MP

ಆಯ್ಕೆ ಪ್ರಶ್ನಿಸಿ ಅರ್ಜಿ: ಹಿಮಾಚಲ ಪ್ರದೇಶ ಹೈಕೋರ್ಟ್ ನೋಟಿಸ್; ಕಂಗನಾ ರಣಾವತ್ ಸಂಸದ ಸ್ಥಾನಕ್ಕೆ ಕುತ್ತು?
ಕಳೆದ ಲೋಕಸಭೆ ಚುನಾವಣೆ ವೇಳೆ ತನ್ನ ನಾಮಪತ್ರವನ್ನು ಚುನಾವಣಾ ಅಧಿಕಾರಿ (ಮಂಡಿಯ ಜಿಲ್ಲಾಧಿಕಾರಿ) ಅನ್ಯಾಯವಾಗಿ ತಿರಸ್ಕರಿಸಿದ್ದರು ಎಂದು ಕಿನ್ನೂರು ನಿವಾಸಿ ಲಾಯಕ್ ರಾಮ್ ನೇಗಿ ಎಂಬುವರು ದೂರು ಸಲ್ಲಿಸಿದ್ದರು.

ನನ್ನ ಭೇಟಿಗೆ ಬರುವವರು ಆಧಾರ್ ಕಾರ್ಡ್ ತರುವುದು ಕಡ್ಡಾಯ: ಸಂಸದೆ ಕಂಗನಾ ರಣಾವತ್ ಹೇಳಿಕೆಗೆ ಆಕ್ರೋಶ
ಬಾಲಿವುಟ್ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು, ‘ತಾವು ಪ್ರತಿನಿಧಿಸುವ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಜನರು ತಮ್ಮನ್ನು ಭೇಟಿ ಮಾಡಲು ಬಯಸಿದರೆ, ತಮ್ಮ ಆಧಾರ್ ಕಾರ್ಡ್‌ಗಳನ್ನು ತರಬೇಕು’ ಎಂದು ಹೇಳಿದ್ದಾರೆ.

ಅಭಿನಂದನಾ ಸಮಾರಂಭ ನಾನು ಆಯೋಜಿಸಿಲ್ಲ, ನನಗೂ ಅದಕ್ಕೂ ಸಂಬಂಧವಿಲ್ಲ: ಸಂಸದ ಕೆ. ಸುಧಾಕರ್
ಸಾರ್ವಜನಿಕವಾಗಿ ಮದ್ಯ ಹಂಚುವುದು ಅಪರಾಧವಾಗಿದ್ದು, ಅಕ್ಷಮ್ಯವಾಗಿದೆ. ನನ್ನ 20 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ಎಂದಿಗೂ ಮದ್ಯ ವಿತರಿಸಿಲ್ಲ. ನಾನು ಸನ್ಮಾನ ಕಾರ್ಯಕ್ರಮ ಆಯೋಜಿಸಿಲ್ಲ ಎಂದಿದ್ದಾರೆ.

ಸಂಸದ ಕೆ. ಸುಧಾಕರ್ ಮದ್ಯ ಹಂಚಿರುವ ಬಗ್ಗೆ ಬಿಜೆಪಿ ಅಧ್ಯಕ್ಷ ನಡ್ಡಾ ಉತ್ತರಿಸಲಿ: ಡಿ ಕೆ ಶಿವಕುಮಾರ್
ಬಾವಿಕೆರೆ ಗ್ರಾಮದ ಜಮೀನೊಂದರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನೇತೃತ್ವದಲ್ಲಿ ಆಯೋಜಿಸಿದ್ದ ನೂತನ ಸಂಸದ ಡಾ.ಕೆ.ಸುಧಾಕರ್ ಅಭಿನಂದನಾ ಸಮಾರಂಭದಲ್ಲಿ ಭರ್ಜರಿ ಬಾಡೂಟದೊಂದಿಗೆ ಮದ್ಯ ವಿತರಣೆ ಮಾಡಲಾಗಿತ್ತು.

ವಾರಾಂತ್ಯದ ಪರಿಕಲ್ಪನೆ 'ಪಾಶ್ಚಿಮಾತ್ಯರ ಬ್ರೈನ್‌ವಾಶಿಂಗ್'; ಅದರಿಂದ ದೂರವಿರಬೇಕು: ಕಂಗನಾ ರಣಾವತ್
ಏಕತಾನತೆಯ (ಗೀಳಿನ) ಕೆಲಸದ ಸಂಸ್ಕೃತಿಯನ್ನು ಕೈಬಿಡಬೇಕು ಎಂದಿರುವ ಬಿಜೆಪಿ ಸಂಸದೆ ಕಂಗನಾ ರಣಾವತ್, ಕಠಿಣ ಪರಿಶ್ರಮ ಮತ್ತು ಸಮರ್ಪಣೆಯನ್ನು ಹೆಚ್ಚು ಮೌಲ್ಯಯುತ ಮತ್ತು ಸಾಮಾನ್ಯವೆಂದು ಪರಿಗಣಿಸುವ ಸಂಸ್ಕೃತಿಯನ್ನು ಉತ್ತೇಜಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದ್ದಾರೆ.

ಕಪಾಳಮೋಕ್ಷ ಮಾಡಿದ CISF ಮಹಿಳಾ ಪೇದೆಯನ್ನು ಹೊಗಳಿದವರ ವಿರುದ್ಧ ಕಂಗನಾ ರಣಾವತ್ ಕಿಡಿ!
ಯಾವುದೇ ಅಪರಾಧವಾದರೂ ಅದು ಕಾರಣವಿಲ್ಲದೆ ಎಂದಿಗೂ ಸಂಭವಿಸುವುದಿಲ್ಲ. ಆದರೂ ಅವರನ್ನು ಅಪರಾಧಿ ಎಂದು ನಿರ್ಣಯಿಸಲಾಗುತ್ತದೆ ಮತ್ತು ಜೈಲಿಗೆ ಹಾಕಲಾಗುತ್ತದೆ ಎಂದು ಕಂಗನಾ ರಣಾವತ್ ಹೇಳಿದ್ದಾರೆ.

ಕಂಗನಾ ರಣಾವತ್‌ಗೆ ಕಪಾಳಮೋಕ್ಷ: CISF ಮಹಿಳಾ ಪೇದೆ ವಿರುದ್ಧ FIR ದಾಖಲು
ಚಂಡೀಗಢ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಸಂಸದೆ ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಮಹಿಳಾ ಪೇದೆಯನ್ನು ಇನ್ನೂ ಬಂಧಿಸಿಲ್ಲ. ಆದರೆ, ಐಪಿಸಿ ಸೆಕ್ಷನ್ 321 ಮತ್ತು 341 ರ ಅಡಿಯಲ್ಲಿ ಕಾನ್‌ಸ್ಟೆಬಲ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕರಿಂದ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಭೇಟಿ: ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ!
ಶ್ರೀನಿವಾಸ ಪ್ರಸಾದ್ ಅವರು ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಶುಭ ಕೋರಲು ಬಂದಿದ್ದೇವೆ. ಇಲ್ಲಿ ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ ಎಂದರು.

ಚಿತ್ರದುರ್ಗ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ಸಂಸದ ಬಿ.ವೈ. ರಾಘವೇಂದ್ರ ವಿರುದ್ಧ ದೂರು ದಾಖಲು
ಬಿಜೆಪಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ರಾಘವೇಂದ್ರ ಅವರು ಶನಿವಾರ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಘಟನೆ ವರದಿಯಾಗಿದೆ.

