birthday

ನೀನು ಹುಟ್ಟಿದಾಗ ಕುಣಿದಾಡಿದ್ದೆ, ಇಂದು ಈ ರೀತಿಯ ಸಾಲುಗಳ ಬರೆಯುತ್ತೇನೆ ಎಂದುಕೊಂಡಿರಲಿಲ್ಲ: ಚಿರು ನೆನೆದ ಅರ್ಜುನ್ ಸರ್ಜಾ
36 ವರ್ಷಗಳ ಹಿಂದೆ ನೀನು ಹುಟ್ಟಿದಾಗ ಕುಣಿದಾಡಿದ್ದೆ. ವಿಧಿಯ ಕೌರ್ಯವನ್ನು ನಾನು ನಂಬಿರಲಿಲ್ಲ. ನಿನ್ನ ಹುಟ್ಟುಹಬ್ಬದಂದು ಈ ರೀತಿಯ ಸಾಲುಗಳನ್ನು ಬರೆಯುತ್ತೇನೆಂದುಕೊಂಡಿರಲಿಲ್ಲ ಎಂದು ನಟ ಚಿರಂಜೀವಿ ಸರ್ಜಾ ಅವರನ್ನು ನೆನೆದು ಅರ್ಜುನ್ ಸರ್ಜಾ ಅವರು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

25 ವರ್ಷಗಳ ದಾಂಪತ್ಯದಲ್ಲಿ ಕೋವಿಡ್ ಕಾರಣದಿಂದ ಇದೇ ಮೊದಲ ಬಾರಿಗೆ ಪ್ರತ್ಯೇಕವಾಗಿದ್ದೇವೆ: ಟಬು ರಾವ್
ಕೋವಿಡ್ ಹಿನ್ನೆಲೆ 25 ವರ್ಷಗಳ ವೈವಾಹಿಕ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಒಟ್ಟಾಗಿ ದಿನೇಶ್ ಗುಂಡೂರಾವ್ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುತ್ತಿಲ್ಲ ಎಂದು ಅವರ ಪತ್ನಿ ತಬು ರಾವ್ ಬೇಸರ ವ್ಯಕ್ತಪಡಿಸಿದ್ದಾರೆ.

ನನಗಾಗಿ ಸಿನಿಮಾ ಮಾಡುವಂತೆ ನಿರ್ದಿಷ್ಟ ನಿರ್ಮಾಪಕರ ಹಿಂದೆ ಹೋಗಲ್ಲ: ಅಭಿಷೇಕ್ ಅಂಬರೀಶ್
ದಿವಂಗತ ಹಿರಿಯ ನಟ ರೆಬೆಲೆ ಸ್ಟಾರ್ ಅಂಬರೀಷ್ ಅವರ ಪುತ್ರ ಅಭಿಷೇಕ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ 'ಬ್ಯಾಡ್ ಮ್ಯಾನರ್ಸ್' ಚಿತ್ರ ತಂಡ 30 ಸೆಕೆಂಡ್ ಗಳ ಟೀಸರ್ ಬಿಡುಗಡೆ ಮಾಡಿದೆ. 27ನೇ ವಸಂತಕ್ಕೆ ಕಾಲಿಟ್ಟಿರುವ ಅಭಿಷೇಕ್ ಅಂಬರೀಷ್ ಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಇಂದು ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬ: ಕಬ್ಜ ಚಿತ್ರದ ಪೋಸ್ಟರ್ ಬಿಡುಗಡೆ
ರಿಯಲ್ ಸ್ಟಾರ್ ಉಪೇಂದ್ರ ಅವರ ಬಹು ನಿರೀಕ್ಷಿತ ಕಬ್ಜ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಇಂದು ಉಪೇಂದ್ರ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿದ್ದಾರೆ. ನಿರ್ದೇಶಕ ಆರ್ ಚಂದ್ರು ಅವರ ಕಬ್ಜ ಚಿತ್ರ ಅಂಡರ್ ವರ್ಲ್ಡ್ ಡಾನ್ ಗೆ ಸಂಬಂಧಿಸಿದ ಕಥೆಯಾಗಿದೆ.

ಪ್ರಧಾನಿ ಮೋದಿ ಹುಟ್ಟುಹಬ್ಬ: 'ನಮೋ ಬಗ್ಗೆ ತಿಳಿಯಿರಿ' ರಸಪ್ರಶ್ನೆ ಸ್ಪರ್ಧೆ ಆಯೋಜಿಸಿದ ಬಿಜೆಪಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 70ನೇ ಹುಟ್ಟಹಬ್ಬ ಹಿನ್ನೆಲೆಯಲ್ಲಿ ಬಿಜೆಪಿಯು ‘ನಮೋ ಬಗ್ಗೆ ತಿಳಿಯಿರಿ’ ರಸಪ್ರಶ್ನೆ ಸ್ಪರ್ಧೆಯನ್ನು ಗುರುವಾರ ಆಯೋಜಿಸಿದೆ.

70ನೇ ವಸಂತಕ್ಕೆ ಕಾಲಿಟ್ಟ ಪ್ರಧಾನಿ ಮೋದಿ: ಕೊರೋನಾ ವಾರಿಯರ್ ಥೀಮ್ ಕೇಕ್ ಸಿದ್ಧಪಡಿಸಿದ ಸೂರತ್ ಬೇಕರಿ!
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ 70ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ವಿಭಿನ್ನ ರೀತಿಯಲ್ಲಿ ಆಚರಣೆಗಳನ್ನು ಮಾಡಲಾಗುತ್ತಿದೆ.

70ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಧಾನಿ ಮೋದಿ: ನೇಪಾಳ ಪ್ರಧಾನಿ, ರಷ್ಯಾ ಅಧ್ಯಕ್ಷರು ಸೇರಿದಂತೆ ಗಣ್ಯರಿಂದ ಶುಭಾಶಯ
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 70ನೇ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನೇಪಾಳ, ರಷ್ಯಾ ಅಧ್ಯಕ್ಷರು ಸೇರಿದಂತೆ ಬಹುತೇಕ ದೇಶದ ನಾಯಕರು ಶುಭಾಶಯಗಳನ್ನು ಕೋರುತ್ತಿದ್ದಾರೆ.

ಪ್ರಧಾನಿಗೆ 70ನೇ ಹುಟ್ಟುಹಬ್ಬದ ಸಂಭ್ರಮ: ಗಣ್ಯರಿಂದ ಶುಭ ಹಾರೈಕೆ
ಪ್ರಧಾನಿ ನರೇಂದ್ರ ಮೋದಿಗೆ 70ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕೇಂದ್ರ ಸರ್ಕಾರದ ಸಚಿವರು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.

ಪ್ರಧಾನಿ ಮೋದಿ ಜನ್ಮದಿನ: ಸೇವಾ ಸಪ್ತಾಹಕ್ಕೆ ಜೆ.ಪಿ.ನಡ್ಡಾ ಚಾಲನೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 70ನೇ ಹುಟ್ಟು ಹಬ್ಬದ ಅಂಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸೋಮವಾರ ’ಸೇವಾ ಸಪ್ತಾಹ’ ಎಂಬ ಅಭಿಯಾನಕ್ಕೆ ಇಲ್ಲಿ ಚಾಲನೆ ನೀಡಿದರು.

