ನನಗಾಗಿ ಸಿನಿಮಾ ಮಾಡುವಂತೆ ನಿರ್ದಿಷ್ಟ ನಿರ್ಮಾಪಕರ ಹಿಂದೆ ಹೋಗಲ್ಲ: ಅಭಿಷೇಕ್ ಅಂಬರೀಶ್
ದಿವಂಗತ ಹಿರಿಯ ನಟ ರೆಬೆಲೆ ಸ್ಟಾರ್ ಅಂಬರೀಷ್ ಅವರ ಪುತ್ರ ಅಭಿಷೇಕ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ 'ಬ್ಯಾಡ್ ಮ್ಯಾನರ್ಸ್' ಚಿತ್ರ ತಂಡ 30 ಸೆಕೆಂಡ್ ಗಳ ಟೀಸರ್ ಬಿಡುಗಡೆ ಮಾಡಿದೆ. 27ನೇ ವಸಂತಕ್ಕೆ ಕಾಲಿಟ್ಟಿರುವ ಅಭಿಷೇಕ್ ಅಂಬರೀಷ್ ಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಬೆಂಗಳೂರು: ದಿವಂಗತ ಹಿರಿಯ ನಟ ರೆಬೆಲೆ ಸ್ಟಾರ್ ಅಂಬರೀಷ್ ಅವರ ಪುತ್ರ ಅಭಿಷೇಕ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ 'ಬ್ಯಾಡ್ ಮ್ಯಾನರ್ಸ್' ಚಿತ್ರ ತಂಡ 30 ಸೆಕೆಂಡ್ ಗಳ ಟೀಸರ್ ಬಿಡುಗಡೆ ಮಾಡಿದೆ. 27ನೇ ವಸಂತಕ್ಕೆ ಕಾಲಿಟ್ಟಿರುವ ಅಭಿಷೇಕ್ ಅಂಬರೀಷ್ ಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಈ ಸಂದರ್ಭದಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿರುವ ಅಭಿಷೇಕ್ ಅಂಬರೀಷ್, ಖಂಡಿತವಾಗಿಯೂ ಈ ವರ್ಷ, ನಾನು ನನ್ನ ತಾಯಿಯೊಂದಿಗೆ ಕೆಲಸ ಮಾಡಬೇಕಾಗಿದೆ. ಆದರೆ ನನ್ನ ತಂದೆಯ ಆಶೀರ್ವಾದ ಯಾವಾಗಲೂ ನನಗೆ ಇರುತ್ತದೆ ಎಂದು ತಿಳಿದಿದೆ ಸುಮಲತಾ ಸಂಸದೆಯಾಗಿದ್ದು, ನನ್ನ ಬಗ್ಗೆ ಮಾತ್ರ ಅಲ್ಲದೇ, ನೂರಾರು ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಬೇಕಾಗಿದೆ. ನಾನು ಅವರಿಂದ ಏನನ್ನೂ ನಿರೀಕ್ಷಿಸುವುದಿಲ್ಲ, ಆದರೆ ಆಶೀರ್ವಾದ ಪಡೆಯುವುದಾಗಿ ತಿಳಿಸಿದ್ದಾರೆ.
ಲಾಕ್ ಡೌನ್ ನಿಂದ ಕಲಿತ ಪಾಠಗಳ ಬಗ್ಗೆ ತಿಳಿಸಿರುವ ಅಭಿಷೇಕ್, ಸೂರಿ ನಿರ್ದೇಶನದ ಮುಂಬರುವ ಬ್ಯಾಡ್ ಮ್ಯಾನರ್ಸ್ ಚಿತ್ರದ ಚಿತ್ರೀಕರಣಕ್ಕೆ ಆರಂಭಕ್ಕೆ ಕಾಯುತ್ತಾ ಕುಳಿತಿರುವುದಾಗಿ ಹೇಳಿದ್ದಾರೆ. ಅಭಿಮಾನಿಗಳು ಉತ್ತಮ ಸ್ನೇಹಿತರು ಎಂದು ಕರೆಯುವ ಅಭಿಷೇಕ್, ಅವರಿಲ್ಲದೆ ಹುಟ್ಟುಹಬ್ಬ ಆಚರಿಸದಂತೆ ಆಗಲ್ಲ ಎಂದಿದ್ದಾರೆ.
ಅಂಬಿ ಅಭಿಮಾನಿಗಳು ನನ್ನ ಹದಿಹರೆಯದ ದಿನಗಳಿಂದಲೂ ತುಂಬಾ ಪ್ರೀತಿಯಿಂದ ಹುಟ್ಟುಹಬ್ಬ ಆಚರಿಸುತ್ತಾ ಬಂದಿದ್ದಾರೆ. ಶಾಲಾ ದಿನಗಳಿಂದಲೂ ಆಚರಿಸುತ್ತಿದ್ದಾರೆ. ನನ್ನ ತಂದೆಗೆ ತೋರುತ್ತಿದ್ದ ಪ್ರೀತಿಯನ್ನು ನನಗೂ ತೋರಿಸುತ್ತಿದ್ದಾರೆ. ಕಳೆದ ವರ್ಷ ಹುಟ್ಟುಹಬ್ಬ ಆಚರಿಸಿರಲಿಲ್ಲ, ಈ ಬಾರಿ ಕೋವಿಡ್-19 ಸಾಂಕ್ರಾಮಿಕ ರೋಗದ ಹೊರತಾಗಿಯೂ ಸುರಕ್ಷತಾ ಕ್ರಮಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದಾಗಿ ತಿಳಿಸಿದರು.
ನಟನೆಯ ಹೊರತಾಗಿ ವಿಡಿಯೋ ಗೇಮ್ ಅಭಿಷೇಕ್ ಅಂಬರೀಶ್ ಅವರ ಮತ್ತೊಂದು ಪ್ಯಾಶನ್ ಆಗಿದೆ. ಸಮಯ ಸಿಕ್ಕಾಗಲೆಲ್ಲಾ ವಿಡಿಯೋ ಗೇಮ್ ನೋಡುತ್ತಿನಿ. ಊಟ, ನೀರು ಬಿಟ್ಟು 48 ಗಂಟೆಗಳವರೆಗೂ ವಿಡಿಯೋ ಗೇಮ್ ಆಡುತ್ತಾ ಕೂರುತ್ತೇನೆ. ವಿಡಿಯೋ ಗೇಮ್ ನನ್ನ ಸಿಕ್ರೇಟ್ ಚಟ ಎಂದು ಅಭಿಷೇಕ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


