bhatkal

ಭಟ್ಕಳ: ಮುಸ್ಲಿಂ ಅಭ್ಯರ್ಥಿಗಳ ಬೆಂಬಲಿಸದಿರಲು ತಂಝೀಮ್ ನಿರ್ಣಯ, ಮಹಿಳೆಯರಿಂದ ಪ್ರತಿಭಟನೆ
ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಟ್ಕಳ-ಹೊನ್ನಾವರ ಕ್ಷೇತ್ರದಿಂದ ಮುಸ್ಲಿಂ ಅಭ್ಯರ್ಥಿಯನ್ನು ಬೆಂಬಲಿಸದೇ ಜಾತ್ಯತೀತ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲು ಭಟ್ಕಳ ತಂಝೀಮ್ ನಿರ್ಣಯ ಕೈಗೊಂಡಿದೆ ಎಂದು ತಿಳಿದುಬಂದಿದೆ.

ಉತ್ತರ ಕನ್ನಡ: ಒಂದೇ ಕುಟುಂಬದ ನಾಲ್ವರ ಹತ್ಯೆ; ಕೊಲೆ ಪ್ರಕರಣ ಭೇದಿಸಲು ವಿಶೇಷ ಪೊಲೀಸ್ ತಂಡಗಳ ರಚನೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣವನ್ನು ಭೇದಿಸಲು ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಆಸ್ತಿ ವಿವಾದ: ಭಟ್ಕಳದಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ
ಆಸ್ತಿ ವಿವಾದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿಯಲ್ಲಿ ನಡೆದಿದೆ.

ಭಟ್ಕಳದ ಪಾರಂಪರಿಕ 'ನವೈತಿ' ಸಂಸ್ಕೃತಿಯ ವಿಶಿಷ್ಟ ಸಂಗ್ರಹಾಲಯದ ಸುತ್ತ ಒಂದು ನೋಟ...
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪಾರಂಪರಿಕ ಕಟ್ಟಡವಿದೆ. 150 ವರ್ಷಗಳಷ್ಟು ಹಳೆಯದಾದ ಈ ಕಟ್ಟಡವು ಅತ್ಯಂತ ವಿಶಿಷ್ಟವಾದ ವಸ್ತುಸಂಗ್ರಹಾಲಯಕ್ಕೆ ನೆಲೆಯಾಗಿದೆ. ಅದರ ಸಭಾಂಗಣಗಳಲ್ಲಿ ಕಲಾಕೃತಿಗಳ ಸಂಗ್ರಹವಿದೆ, ಇದನ್ನು ನೋಡಲು ಹೋದ ಸಂದರ್ಶಕರಿಗೆ ಇದನ್ನು ನೋಡುವುದೇ ಒಂದು ಖುಷಿ.

ಭಟ್ಕಳದಲ್ಲಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಪೊಲೀಸರಿಗೆ ಪತ್ರ: ಓರ್ವನ ಬಂಧನ
ಭಟ್ಕಳ ಟೌನ್ ಪೊಲೀಸ್ ಠಾಣೆಯನ್ನು ಸ್ಫೋಟಿಸುವುದಾಗಿ ಪತ್ರದಲ್ಲಿ ಬೆದರಿಕೆ ಹಾಕಿದ್ದ ವ್ಯಕ್ತಿಯೊಬ್ಬನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಭಟ್ಕಳ ಪೊಲೀಸರಿಗೆ ಒಪ್ಪಿಸಲಾಗುವ ಪ್ರಕ್ರಿಯೆ ನಡೆಯುತ್ತಿದೆ.

ಯಕ್ಷಗಾನ ವೇಷಭೂಷಣ ಧರಿಸಿ, ಹೆಜ್ಜೆ ಹಾಕಿದ ಸಚಿವ ಸುಧಾಕರ್
ಕರ್ನಾಟಕ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಯಕ್ಷಗಾನ ವೇಷಭೂಷಣ ಧರಿಸಿ ಪೋಸ್ ನೀಡಿದ್ದು, ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

ಭಟ್ಕಳ: ಬ್ರೆಡ್ ತರಲು ಹೋಗಿದ್ದ ಬಾಲಕ ಅಪಹರಣ; ಕಾರಿನಲ್ಲಿ ಬಂದು ದುಷ್ಕರ್ಮಿಗಳ ಕೃತ್ಯ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
ತಾಲೂಕಿನ ಆಜಾದ್ ನಗರದಲ್ಲಿ ನಿನ್ನೆ ರಾತ್ರಿ 8 ವರ್ಷದ ಬಾಲಕನನ್ನು ಅಪಹರಿಸಿದ ಘಟನೆ ನಡೆದಿದೆ. ಬಾಲಕ ಅಲಿ ಸಾದಾ (8) ಅಂಗಡಿಯಿಂದ ಬ್ರೆಡ್ ತರಲು ಹೋಗಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಪಹರಿಸಿದ್ದಾರೆ

ಭಟ್ಕಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರವಾಸ: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರವಾಹ ಪೀಡಿತ ಭಟ್ಕಳಕ್ಕೆ ಬುಧವಾರ ಭೇಟಿ ನೀಡಲಿದ್ದಾರೆ.ಬೆಂಗಳೂರಿನಿಂದ ವಿಮಾನದಲ್ಲಿ ಗೋವಾಕ್ಕೆ ಬಂದು ಅಲ್ಲಿಂದ ರಸ್ತೆ ಮೂಲಕ ಭಟ್ಕಳಕ್ಕೆ ಪ್ರಯಾಣಿಸಲಿದ್ದಾರೆ.

ಐಎಸ್ಐಎಸ್ ಪ್ರಕರಣ: ರಾಜ್ಯದ ಭಟ್ಕಳ, ತುಮಕೂರು, 5 ರಾಜ್ಯಗಳಲ್ಲಿ ಎನ್ಐಎ ಶೋಧ ಕಾರ್ಯಾಚರಣೆ
ರಾಷ್ಟ್ರೀಯ ತನಿಖಾ ದಳ (ಎನ್ಐಎ) ರಾಜ್ಯದ ಭಟ್ಕಳ, ತುಮಕೂರು ಹಾಗೂ 5 ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ಶೋಧಕಾರ್ಯಾಚರಣೆ ನಡೆಸಿದೆ.

