bhatkal

ಭಟ್ಕಳ: ಮುರ್ಡೇಶ್ವರ ಕಡಲ ತೀರದಲ್ಲಿ ಸಮುದ್ರದ ಅಲೆಗಳಿಗೆ ಕೊಚ್ಚಿ ಹೋದ ನಾಲ್ವರು ವಿದ್ಯಾರ್ಥಿನಿಯರು!
ಕೋಲಾರದ ಮುಳಬಾಗಿಲಿನಿಂದ ಕೊತ್ತೂರು ಮೂರಾರ್ಜಿ ದೇಸಾಯಿ ವಸತಿ ಶಾಲೆಯ 40ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಪುಣೆ ಸ್ಫೋಟ ಪ್ರಕರಣ: ಭಟ್ಕಳದ ಯುವಕನ ಮನೆಗೆ ನೋಟಿಸ್ ಅಂಟಿಸಿದ ಮಹಾರಾಷ್ಟ್ರ ATS!
ಮಹಾರಾಷ್ಟ್ರದ ಪುಣೆಯಲ್ಲಿ ನಡೆಸಿದ ಉಗ್ರ ಚಟುವಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಭಟ್ಕಳ ನವಾಯತ ಕಾಲೋನಿಯ ಯುವಕನಿಗೆ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಎಟಿಎಸ್ ತಂಡ ಆತನ ಮನೆಗೆ ನೋಟೀಸ್ ಅಂಟಿಸಿದೆ ಎಂದು ತಿಳಿದುಬಂದಿದೆ.

ಲೋಕಸಭೆ ಚುನಾವಣೆ: ಮತದಾನ ಮಾಡಲೆಂದೇ ವಿದೇಶಗಳಿಂದ ಭಟ್ಕಳಕ್ಕೆ ನೂರಾರು ಮಂದಿ ಆಗಮನ!
ಪಶ್ಚಿಮ ಏಷ್ಯಾದಲ್ಲಿ ಕೆಲಸ ಮಾಡುತ್ತಿರುವ ಭಟ್ಕಳದ ನೂರಾರು ಜನರು ಮೇ 7 ರಂದು ರಾಜ್ಯದಲ್ಲಿ ನಡೆಯುವ ಎರಡನೇ ಹಂತದ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ತವರಿಗೆ ಮರಳುತ್ತಿದ್ದಾರೆ.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬಾಂಬರ್ ಭಟ್ಕಳಕ್ಕೆ ತೆರಳಿರುವ ಶಂಕೆ; ಬಳ್ಳಾರಿ-ತುಮಕೂರು ಬಸ್ ನಿಲ್ದಾಣದಲ್ಲಿ NIA ಶೋಧ
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಲಭ್ಯವಾಗಿದ್ದು, ಬಾಂಬರ್ ಭಟ್ಕಳಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದೆ ಎಂದು ಹೇಳಲಾಗುತ್ತಿದೆ.

ಸಾವರ್ಕರ್ ಧ್ವಜ ಸ್ತಂಭ ತೆರವು ಮಾಡಿದ ತಾಲೂಕು ಆಡಳಿತ: ಮಂಡ್ಯ ನಂತರ ಭಟ್ಕಳದಲ್ಲಿ ಪರಿಸ್ಥಿತಿ ಉದ್ವಿಗ್ನ
ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ರಾಜ್ಯ ಸರಕಾರ ಹನುಮಾನ್ ಧ್ವಜ ತೆಗೆದ ನಂತರ ಪ್ರತಿಪಕ್ಷಗಳ ಪ್ರತಿಭಟನೆ ನಡೆಸಿದವು, ಅದೇ ರೀತಿ ಉತ್ತರ ಕನ್ನಡದ ಭಟ್ಕಳದಲ್ಲಿ ತಾಲೂಕು ಆಡಳಿತ ವೀರ ಸಾವರ್ಕರ್ ಹೆಸರಿನಲ್ಲಿ ಅಳವಡಿಸಿದ್ದ ಧ್ವಜ ಮತ್ತು ಬೋರ್ಡ್ ತೆಗೆದ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿತು.

ನಾಮಫಲಕ ಕಂಬ ತೆರವು ವಿಚಾರ: ಪ್ರತಿಭಟನೆ ಹಿಂಪಡೆದ ಕಾರ್ಯಕರ್ತರು, ಸಹಜ ಸ್ಥಿತಿಗೆ ಮರಳಿದ ಭಟ್ಕಳ
ನಾಮಫಲಕ ಕಂಬ ತೆರವು ವಿಚಾರ ಸಂಬಂಧ ಉದ್ವಿಗ್ನ ಸ್ಥಿತಿಯಲ್ಲಿದ್ದ ಭಟ್ಕಳದಲ್ಲಿ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ.

ಭಟ್ಕಳ: ಅಕ್ರಮ ಗೋಮಾಂಸ ಮಾರಾಟದ ವಿರುದ್ಧ ಫತ್ವಾ ಹೊರಡಿಸಿದ ತಂಝೀಮ್
ರಾಜ್ಯದಲ್ಲಿ ಗೋಹತ್ಯೆ ನಿಷೇಧಗೊಂಡು ಮೂರು ವರ್ಷಗಳ ನಂತರ ಅಕ್ರಮ ಗೋಮಾಂಸ ಸಾಗಾಟ ಮತ್ತು ಮಾರಾಟದ ವಿರುದ್ಧ ಭಟ್ಕಳದ ತಂಝೀಮ್ ಫತ್ವಾ ಹೊರಡಿಸಿದೆ.

ಉತ್ತರ ಕನ್ನಡ: ಇನ್‌ಸ್ಟಾಗ್ರಾಮ್ ಸ್ನೇಹಿತನ ಕಿರುಕುಳಕ್ಕೆ ಬೇಸತ್ತು 24 ವರ್ಷದ ಯುವತಿ ಆತ್ಮಹತ್ಯೆ
ಸಾಮಾಜಿಕ ಮಾಧ್ಯಮ ವೇದಿಕೆ ಇನ್‌ಸ್ಟಾಗ್ರಾಮ್ ಮೂಲಕ ಸ್ನೇಹ ಬೆಳೆಸಿದ ವ್ಯಕ್ತಿಯಿಂದ ಕಿರುಕುಳಕ್ಕೆ ಬೇಸತ್ತು ಉತ್ತರ ಕನ್ನಡ ಜಿಲ್ಲೆಯ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಭಟ್ಕಳ: ಯುವತಿಗೆ ಕಿರುಕುಳ, ಗುಂಪು ಘರ್ಷಣೆ, ಉದ್ವಿಗ್ನತೆ!
ನಿರ್ದಿಷ್ಟ ಸಮುದಾಯದ ಯುವತಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಭಟ್ಕಳದ ರಂಜಾನ್ ಮಾರ್ಕೆಟ್ ನಲ್ಲಿ ಗುರುವಾರ ತಡರಾತ್ರಿ ಎರಡು ಗುಂಪು ನಡುವೆ ಘರ್ಷಣೆ ನಡೆದು, ಉದ್ವಿಗ್ನತೆ ಉಂಟಾಗಿತ್ತು.

