Bharat bandh

ಕೃಷಿ ಕಾಯಿದೆ ವಿರೋಧಿಸಿ ಸೆ. 27 ರಂದು ರೈತ ಸಂಘಟನೆಗಳಿಂದ 'ಭಾರತ್ ಬಂದ್'
ಕೇಂದ್ರದ ಮೂರು ಕೃಷಿ ಸುಧಾರಣಾ ಕಾಯಿದೆ ವಾಪಸ್ ಪಡೆಯುವಂತೆ ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೆಪ್ಟೆಂಬರ್ 27 ರಂದು 'ಭಾರತ್ ಬಂದ್' ಗೆ ಕರೆ ನೀಡಿದೆ.

ಭಾರತ್ ಬಂದ್ ಗೆ ಬೆಂಬಲ: ರಾಜ್ಯದ ಹಲವೆಡೆ ಭಾರೀ ಪ್ರತಿಭಟನೆ
ಕೃಷಿ ಕಾನೂನು ವಿರೋಧಿಸಿ ರೈತರು ಕರೆ ನೀಡಿದ್ದ ಭಾರತ್ ಬಂದ್ ಗೆ ಬೆಂಗಳೂರು ಹೊರತುಪಡಿಸಿ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಭಾರತ ಬಂದ್ ಗೆ ನೀರಸ ಪ್ರತಿಕ್ರಿಯೆ: ಎಲ್ಲೆಡೆ ಬಿಗಿ ಭದ್ರತೆ, ರೈತ ಸಂಘಟನೆಗಳಿಂದ ಪ್ರತಿಭಟನೆ, ಎಂದಿನಂತೆ ಜನಜೀವನ
ದೇಶಾದ್ಯಂತ ಮಂಗಳವಾರ ರೈತ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾನ್ಯ ಜನಜೀವನ, ವ್ಯಾಪಾರ-ವಹಿವಾಟುಗಳು ಎಂದಿನಂತೆ ಮುಂದುವರಿದಿವೆ.

ಅತ್ತ ರೈತರಿಂದ ಭಾರತ ಬಂದ್; ಇತ್ತ ಕಾಂಗ್ರೆಸ್ ನಾಯಕರಿಂದ ಪ್ರತಿಭಟನೆ; ಬಿಜೆಪಿ ನಾಯಕರಿಂದ ಕಾಯ್ದೆ ಬೆಂಬಲಿಸಿ ಟ್ವೀಟ್
ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಮಸೂದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ರೈತರ ದೆಹಲಿ ಚಲೋ ಮಂಗಳವಾರ 13ನೇ ದಿನಕ್ಕೆ ಕಾಲಿಟ್ಟು ಇಂದು ಬೆಳಗ್ಗೆ 11 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ಬಂದ್ ನಡೆಯಲಿದೆ.

ಭಾರತ್ ಬಂದ್ ಗೆ ಸ್ಪಂದಿಸಿದ ರಾಜ್ಯದ ಜನ; ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ
ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆನೀಡಿರುವ ಇಂದಿನ ಭಾರತ ಬಂದ್ ಗೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಹಲವೆಡೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇಂದು ಭಾರತ ಬಂದ್: ವಾಹನ ಸಂಚಾರ, ಅಗತ್ಯ ವಸ್ತುಗಳ ಪೂರೈಕೆಗೆ ತಟ್ಟಿದ ಬಿಸಿ, ಜನಸಾಮಾನ್ಯ ಚಟುವಟಿಕೆ ಎಂದಿನಂತೆ
ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಮಸೂದೆಗಳನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ರೈತ ಸಂಘಟನೆಗಳು ಮಂಗಳವಾರ ದೇಶಾದ್ಯಂತ ಕರೆ ನೀಡಿರುವ ಭಾರತ ಬಂದ್ ನಿಂದ ಸಾರಿಗೆ ಸೇವೆ, ಕಚೇರಿಗಳು, ಅಂಗಡಿ-ಮುಂಗಟ್ಟುಗಳ ತೆರೆಯುವಿಕೆ, ಹಣ್ಣು-ತರಕಾರಿ ಮಾರಾಟಗಳ ಮೇಲೆ ಪರಿಣಾಮ ಬೀರಲಿದೆ.

ಕೇಂದ್ರ-ರೈತ ಸಂಘಟನೆಗಳ ಮಧ್ಯೆ ನಾಳೆ 6ನೇ ಸುತ್ತಿನ ಮಾತುಕತೆ: ವಿಫಲವಾದರೆ ರೈತರ ನಿರ್ಧಾರವೇನು?
ತಮ್ಮ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಮಣಿಯದಿದ್ದರೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ರೈತ ಸಂಘಟನೆಗಳು ನಿರ್ಧರಿಸಿವೆ. ನಾಳೆ ಡಿಸೆಂಬರ್ 9ರಂದು ರೈತಪರ ಸಂಘಟನೆಗಳು ಹಾಗೂ ಕೇಂದ್ರ ಸರ್ಕಾರದ ಮಧ್ಯೆ 6ನೇ ಸುತ್ತಿನ ಮಾತುಕತೆ ನಡೆಯಲಿದ್ದು, ಅದು ವಿಫಲವಾದರೆ ಕಠಿಣ ಹೆಜ್ಜೆ ಮುಂದಿಡಲು ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ.

ಭಾರತ್ ಬಂದ್: 9 ಲಕ್ಷ ರೈತರಿಂದ ರಾಷ್ಟ್ರಪತಿಗೆ ಪೋಸ್ಟ್ ಕಾರ್ಡ್ ರವಾನೆ
9 ಲಕ್ಷ ರೈತರು ರಾಷ್ಟ್ರಪತಿಗೆ ಪೋಸ್ಟ್ ಕಾರ್ಡ್ ಮೂಲಕ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಲಿದ್ದಾರೆಂದು ತಿಳಿದುಬಂದಿದೆ.

ಭಾರತ್ ಬಂದ್‌ಗೆ ಸೆಲೆಬ್ರಿಟಿಗಳಾದ ಪ್ರಿಯಾಂಕಾ, ಸೋನಮ್ ಕಪೂರ್ ಬೆಂಬಲ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಹೊಸ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಮಂಗಳವಾರ ಭಾರತ ಬಂದ್ ಗೆ ಕರೆ ನೀಡಲಾಗಿದ್ದು ವ್ಯಾಪಕ ಬೆಂಬಲ ಸಿಕ್ಕಿದೆ. ಇದೀಗ ಬಾಲಿವುಡ್ ಸೆಲೆಬ್ರಿಟಿಗಳು ಭಾರತ್ ಬಂದ್‌ಗೆ ಬೆಂಬಲ ನೀಡಿದ್ದಾರೆ.

