betting

'ಸಿಎನ್ ಮಂಜುನಾಥ್ ವಿರುದ್ಧ ಡಿಕೆ ಸುರೇಶ್ ಗೆದ್ದೇ ಗೆಲ್ಲುತ್ತಾರೆ': 50 ಲಕ್ಷ ರೂ. ಬೆಟ್ಟಿಂಗ್ ಕಟ್ಟಿದ್ದ ವ್ಯಕ್ತಿ ನೇಣಿಗೆ ಶರಣು!
ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿಎನ್ ಮಂಜುನಾಥ್ ವಿರುದ್ಧ ಕಾಂಗ್ರೆಸ್ ಡಿಕೆ ಸುರೇಶ್ ಗೆಲ್ಲುತ್ತಾರೆ ಎಂದು 50 ಲಕ್ಷ ರೂ. ಬೆಟ್ಟಿಂಗ್ ಕಟ್ಟಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಲೋಕಸಭೆ ಚುನಾವಣೆ ಮುಗಿಯಿತು; ಈಗ ಮಂಡ್ಯದಲ್ಲಿ ಬೆಟ್ಟಿಂಗ್ ಭರಾಟೆ!
ಲೋಕಸಭೆ ಚುನಾವಣೆಯ ರಾಜ್ಯದ ಹೈವೋಲ್ಟೇಜ್ ಕ್ಷೇತ್ರಗಳಲ್ಲೊಂದಾದ ಮಂಡ್ಯ ಲೋಕಸಭಾ ಚುನಾವಣೆ ಇಡೀ ಇಂಡಿಯಾದಲ್ಲೇ ಸದ್ದು ಮಾಡಿದೆ. ಏಪ್ರಿಲ್ 26ರ ಚುನಾವಣೆಯ ಫಲಿತಾಂಶದ ಬಗ್ಗೆ ತೀವ್ರ ಚರ್ಚೆ ಮತ್ತು ಬೆಟ್ಟಿಂಗ್ ಆರಂಭವಾಗಿದೆ.

ಫಲಿತಾಂಶಕ್ಕೂ ಮೊದಲು ಬೆಟ್ಟಿಂಗ್ ಭರಾಟೆ ಜೋರು: ಮಾರುಕಟ್ಟೆಯಲ್ಲಿ ಕಾಂಗ್ರೆಸ್ ಪಕ್ಷದ್ದೆ ಕಾರು-ಬಾರು!
ರಾಜ್ಯ ವಿಧಾನಸಭೆ ಚುನಾವಣೆ ಬುಧವಾರ ನಡೆಯಲಿದ್ದು, ಶನಿವಾರ ಫಲಿತಾಂಶ ಪ್ರಕಟವಾಗಲಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಮೇಲೆ ಮತ್ತು ಯಾರು ಗೆಲ್ಲಬಹುದು ಎಂಬ ಬಗ್ಗೆ ಬೆಟ್ಟಿಂಗ್ ಕೂಡ ಜೋರಾಗಿ ನಡೆಯುತ್ತಿದೆ ಎನ್ನಲಾಗಿದೆ.

ಗ್ರಾಮಪಂಚಾಯಿತಿ ಚುನಾವಣೆ ಫಲಿತಾಂಶ: ಅಭ್ಯರ್ಥಿಗಳ ಮೇಲೆ ಬೆಟ್ಟಿಂಗ್; ಹಣ, ವಾಹನ, ಜಾನುವಾರು, ಚಿನ್ನ ಪಣಕ್ಕೆ!
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ, ಇದೇ ಬೆನ್ನಲ್ಲೇ ಗದಗದಲ್ಲಿ ಜನ ಈಗಾಗಲೇ ಬೆಟ್ಟಿಂಗ್ ಆರಂಭಿಸಿದ್ದಾರೆ.

ಕ್ರಿಕೆಟ್ ಬೆಟ್ಟಿಂಗ್ ಕಾನೂನುಬದ್ಧಗೊಳಿಸಿ: ಶಶಿ ತರೂರ್ ಒತ್ತಾಯ
ಭಾರತದ ಕ್ರೀಡೆಯಲ್ಲಿ ಬೆಟ್ಟಿಂಗ್ ಅನ್ನು ಕಾನೂನುಬದ್ದಗೊಳಿಸಬೇಕೆಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ಸದಸ್ಯ ಶಶಿ ತರೂರ್ ಆಗ್ರಹಿಸಿದ್ದಾರೆ.

ಇವತ್ತು 1000, ಅಲ್ಲ 2000: ಕೊರೋನಾ ಕೇಸ್ ಗಳ ಮೇಲೆ ಶುರುವಾಯ್ತು ಬೆಟ್ಟಿಂಗ್!
ಇವತ್ತು ಕರ್ನಾಟಕದಲ್ಲಿ ಒಂದೂವರೆ ಸಾವಿರ ಕೊರೋನಾ ಕೇಸ್ ಗಳು ದಾಖಲೆಯಾಗುತ್ತವೆ ಎಂದು ಒಬ್ಬ ಮಧ್ಯ ವಯಸ್ಕ ಟೀ ಅಂಗಡಿ ಮುಂದೆ ನಿಂತು ಫೋನಿನಲ್ಲಿ ಹೇಳುವುದು, ಫೋನಿನಲ್ಲಿ ಆ ಕಡೆಯಿಂದ ಮಾತನಾಡುವ ವ್ಯಕ್ತಿ ಒಂದೂವರೆ ಸಾವಿರ ಅಲ್ಲ 2ಸಾವಿರ ಕೇಸ್ ಆಗುತ್ತದೆ ಎಂದು 500 ರು ಬೆಟ್ಟಿಂಗ್ ಕಟ್ಟುವುದು.

ಉಪಚುನಾವಣೆ: ಸೋಲು-ಗೆಲುವಿನ ಲೆಕ್ಕಾಚಾರದ ನಡುವೆಯೇ ಹೆಚ್ಚಿದ ಬೆಟ್ಟಿಂಗ್ ಭರಾಟೆ
ಉಪಚುನಾವಣೆ ಅಂತ್ಯಗೊಳ್ಳುತ್ತಿದ್ದಂತೆಯೇ ಒಂದೆಡೆ ಸೋಲು ಗೆಲುವಿನ ಲೆಕ್ಕಾಚಾರ ನಡೆಯುತ್ತಿದ್ದು, ಮತ್ತೊಂದೆಡೆ ಬೆಟ್ಟಿಂಗ್ ಭರಾಟೆ ಜೋರಾಗಿದೆ.

ಭಾರತ-ಪಾಕ್ ಹೈ-ವೋಲ್ಟೇಜ್ ಪಂದ್ಯ ಬೆಟ್ಟಿಂಗ್ ನಲ್ಲೂ ದಾಖಲೆ!
ಭಾರತ-ಪಾಕ್ ನಡುವೆ ಹೈ-ವೋಲ್ಟೇಜ್ ಪಂದ್ಯ ನಡೆಯುತ್ತಿದ್ದು, ಬದ್ಧ ವೈರಿಗಳ ನಡುವಿನ ಕ್ರಿಕೆಟ್ ಸಮರವನ್ನು ಎದುರು ನೋಡಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ.

ಮಧ್ಯಪ್ರದೇಶ: ಬೆಟ್ಟಿಂಗ್ ನಲ್ಲಿ ಸೋತಿದ್ದಕ್ಕೆ ತಲೆ ಬೋಳಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತ
ಮುಂದಿನ ಪ್ರಧಾನ ಮಂತ್ರಿ ಯಾರು ಆಗುತ್ತಾರೆ ಎನ್ನುವುದಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತನೊಂದಿಗೆ ಕಟ್ಟಿದ ಬೆಟ್ಟಿಂಗ್ ನಲ್ಲಿ ಸೋತ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ತಲೆ ಬೋಳಿಸಿಕೊಂಡಿರುವ ಘಟನೆ ಮಧ್ಯಪ್ರದೇಶದ ರಾಜಗಢದಲ್ಲಿ ನಡೆದಿದೆ.

