ಗ್ರಾಮಪಂಚಾಯಿತಿ ಚುನಾವಣೆ ಫಲಿತಾಂಶ: ಅಭ್ಯರ್ಥಿಗಳ ಮೇಲೆ ಬೆಟ್ಟಿಂಗ್; ಹಣ, ವಾಹನ, ಜಾನುವಾರು, ಚಿನ್ನ ಪಣಕ್ಕೆ!
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ, ಇದೇ ಬೆನ್ನಲ್ಲೇ ಗದಗದಲ್ಲಿ ಜನ ಈಗಾಗಲೇ ಬೆಟ್ಟಿಂಗ್ ಆರಂಭಿಸಿದ್ದಾರೆ.

ಗದಗ: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ, ಇದೇ ಬೆನ್ನಲ್ಲೇ ಗದಗದಲ್ಲಿ ಜನ ಈಗಾಗಲೇ ಬೆಟ್ಟಿಂಗ್ ಆರಂಭಿಸಿದ್ದಾರೆ.
ಗದಗದಲ್ಲಿ ತಮ್ಮ ಮೆಚ್ಚಿನ ಅಭ್ಯರ್ಥಿಗಳ ಮೇಲೆ ಹಣ, ಚಿನ್ನಾಭರಣ, ವಾಹನ ಮತ್ತು ಜಾನುವಾರುಗಳನ್ನು ಪಣಕ್ಕಿಡುತ್ತಿದ್ದಾರೆ, ಹಣ ಬಾಜಿ ಕಟ್ಟಲು ಇಚ್ಚಿಸಿದವರು ತಮ್ಮ ವಾಹನ, ಮತ್ತು ಜಾನುವಾರುಗಳ ಮೇಲೆ ಬೆಟ್ ಕಟ್ಟುತ್ತಿದ್ದಾರೆ.
ಈ ಬೆಟ್ಟಿಂಗ್ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳು ಪಾಲ್ಗೊಂಡಿದ್ದಾರೆ, ಗ್ರಾಮಸ್ಥರಿಂದ ಹಣ ಸಂಗ್ರಹಿಸುವ ಮಧ್ಯವರ್ತಿಗಳು ಬುಕ್ಕಿಗಳಿಗೆ ನೀಡಲಿದ್ದಾರೆ, ಈ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳಿಗೆ ಕಮಿಷನ್ ಹಣ ಸಿಗಲಿದೆ, ಅನೇಕ ಗ್ರಾಮಸ್ಥರು ಈ ತಾತ್ಕಾಲಿಕ ಕೆಲಸದ ಕಡೆ ತಮ್ಮ ಒಲವು ತೋರಿಸಿದ್ದಾರೆ.
ಗದಗಿನ ಅನೇಕ ಭಾಗಗಳಲ್ಲಿ ಚುನಾವಣಾ ಫಲಿತಾಂಶಗಳ ಮೇಲೆ ಬೆಟ್ಟಿಂಗ್ ಸಾಮಾನ್ಯವಾಗಿದೆ. ಗ್ರಾಮಸ್ಥರು ಅವುಗಳನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡು ಅಮೂಲ್ಯ ವಸ್ತುಗಳನ್ನು ಪಣಕ್ಕಿಡುತ್ತಿದ್ದಾರೆ. ಇದೇ ವೇಳೆ ರೋಣ ತಾಲ್ಲೂಕಿನ ಕೆಲವು ರೈತರು ತಮ್ಮ ಟ್ರಾಕ್ಟರ್ ಅನ್ನು ಬೆಟ್ಟಿಂಗ್ ನಲ್ಲಿ ಇಟ್ಟಿದ್ದಾರೆಂದು ವರದಿಯಾಗಿದೆ.
ಕಟ್ಟುನಿಟ್ಟಾದ ಪೊಲೀಸ್ ಜಾಗರೂಕತೆಯ ಹೊರತಾಗಿಯೂ ಹಿಂಬಾಗಿಲುಗಳ ಮೂಲಕ ಮತ್ತು ಮೊಬೈಲ್ ಫೋನ್‌ಗಳ ಮೂಲಕ ಈ ಎಲ್ಲಾ ಚಟುವಟಿಕೆಗಳು ನಡೆಯುತ್ತಿವೆ. "ಈ ಬೆಟ್ಟಿಂಗ್ ರಹಸ್ಯವಾಗಿ ನಡೆಯುತ್ತಿವೆ, ಆದ್ದರಿಂದ ಇದರಲ್ಲಿ ಭಾಗಿಯಾಗಿರುವವರನ್ನು ಕಂಡುಹಿಡಿಯುವುದು ಕಷ್ಟ. ಹೇಗಾದರೂ ಮಾಡಿ ಭಾಗಿಯಾದವನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಲ್ಲಿಯವರೆಗೆ ಇಂತಹ ಯಾವುದೇ ಘಟನೆಗಳು ನಮ್ಮ ಗಮನಕ್ಕೆ ಬಂದಿಲ್ಲ, ಆದರೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಬೆಟ್ಟಿಂಗ್ ಬಗ್ಗೆ ಪರೀಕ್ಷಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ “ಗ್ರಾಮಸ್ಥರು ಬೆಟ್ಟಿಂಗ್ ನಡೆಸುತ್ತಿರುವುದು ಕಂಡು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಮನವಿ ಮಾಡಿರುವುದಾಗಿ, ಗದಗ ಎಸ್ ಪಿ ಎನ್ ಯತೀಶ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


