BDA

ಸೈಟ್ ಹಂಚಿಕೆ ವಿಳಂಬ: 12.5 ಲಕ್ಷ ರೂ ಪರಿಹಾರ ನೀಡುವಂತೆ ಬಿಡಿಎಗೆ K-RERA ಆದೇಶ
ವಿದ್ಯಾರಣ್ಯಪುರದಲ್ಲಿ ವಾಸಿಸುವ ನಿವೃತ್ತ ಚಾರ್ಟರ್ಡ್ ಅಕೌಂಟೆಂಟ್ ಸುತಂತಿರಾಜ್ ಅವರು ಬಿಡಿಎ ಆಯುಕ್ತರ ವಿರುದ್ಧ ರೇರಾ ಕಾಯ್ದೆಯ ಸೆಕ್ಷನ್ 31ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಎಚ್ ಡಿ ಕುಮಾರಸ್ವಾಮಿಗೆ ಹಿನ್ನಡೆ: ಡಿನೋಟಿಫಿಕೇಷನ್ ಪ್ರಕರಣದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಕುಮಾರಸ್ವಾಮಿ ಅವರು 2006ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಬನಶಂಕರಿ 5ನೇ ಹಂತದ ಹಲಗೆವಡೇರಹಳ್ಳಿಯಲ್ಲಿ 3 ಎಕರೆ 34 ಗುಂಟೆ ಜಮೀನನ್ನು ಡಿನೋಟಿಫಿಕೇಶನ್ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಸುಗಮ ಸಂಚಾರಕ್ಕೆ BDA ಮಾಸ್ಟರ್ ಪ್ಲಾನ್: ತುಮಕೂರು ಲೂಪ್‌ನೊಂದಿಗೆ ಬ್ಯಾಪ್ಟಿಸ್ಟ್ ಆಸ್ಪತ್ರೆ ರಸ್ತೆ ಲೇನ್ ಜೋಡಣೆ!
ಹೆಬ್ಬಾಳ ಮೇಲ್ಸೇತುವೆಯ ಕೆ ಆರ್ ಪುರ ಲೂಪ್ ನವೀಕರಣಕ್ಕೆ ಮುಖ್ಯ ಕಾರ್ಯದರ್ಶಿ ನಿಗದಿಪಡಿಸಿದ 100 ದಿನಗಳ ಗಡುವಿನಲ್ಲೇ ಬಿಡಿಎ ಯಶಸ್ವಿಯಾಗಿ ಕಾಮಗಾರಿ ಪೂರ್ಣಗೊಳಿಸಲಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಪೆರಿಫೆರಲ್ ರಿಂಗ್ ರೋಡ್ ಗಾಗಿ ಭೂಸ್ವಾಧೀನ: ರೈತರೊಂದಿಗೆ ಚರ್ಚಿಸಿ ವಿವಾದ ಬಗೆಹರಿಸಲು BDA ಅಧಿಕಾರಿಗಳಿಗೆ DCM ಸೂಚನೆ
ನಗರದ ದಟ್ಟಣೆ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ 73 ಕಿಮೀ ಪೆರಿಪೆರಲ್ ರಿಂಗ್ ರೋಡ್ ಯೋಜನೆಯನ್ನು 19 ವರ್ಷಗಳ ಹಿಂದೆ ಪ್ರಸ್ತಾಪಿಸಲಾಗಿತ್ತು.ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ಪರಿಹಾರದ ಬಗ್ಗೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದು, ಮಾರುಕಟ್ಟೆ ಮೌಲ್ಯಕ್ಕೆ ಸಮಾನವಾಗಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

BDA ಕಾರ್ಯಾಚರಣೆ: 35 ಕೋಟಿ ರೂ ಮೌಲ್ಯದ ಆಸ್ತಿ ವಶಕ್ಕೆ
ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ಕತ್ರಿಗುಪ್ಪೆ ಗ್ರಾಮದ (ಬನಶಂಕರಿ 2ನೇ ಹಂತ) ಸರ್ವೆ ನಂ. 15/1ರಲ್ಲಿನ 19 ಗುಂಟೆ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್‌ಗಳು, ಗ್ಯಾರೇಜ್, ಗುಜರಿ ಅಂಗಡಿ, ದೇವಸ್ಥಾನವನ್ನು ಜೆಸಿಬಿ ಬಳಸಿ ತೆರವು ಮಾಡಿದರು.

BDA: ಅರ್ಕಾವತಿ ಲೇಔಟ್ 167 ಮಂದಿಗೆ ಲಾಟರಿ ಮೂಲಕ NPKLನಲ್ಲಿ ಪರ್ಯಾಯ ನಿವೇಶನ ಹಂಚಿಕೆ
ಸರ್ಕಾರವು ಹಂಚಿಕೆಯನ್ನು ಹಲವು ಬಾರಿ ಡಿನೋಟಿಫೈ ಮಾಡಿದ ನಂತರ ನೂರಾರು ಅರ್ಕಾವತಿ ಲೇಔಟ್ ಸೈಟ್ ಹಂಚಿಕೆದಾರರು ತಮ್ಮ ಸೈಟ್‌ಗಳನ್ನು ಕಳೆದುಕೊಂಡಿದ್ದರು.

BDA ಮನವಿ: ಬಿಬಿಸಿ ಮಾರ್ಗದಲ್ಲಿರುವ ಅಕ್ರಮ ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಬೆಸ್ಕಾಂ
ಭೂಮಾಲೀಕರು ಅಲ್ಲಿದ್ದ ಸಿಬ್ಬಂದಿಯ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಅದಕ್ಕೆ ಕಾರಣ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಅವರ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಬಿಡಿಎ ಕಡಿತಗೊಳಿಸಿತ್ತು.

BDA ಒತ್ತುವರಿ ತೆರವು ಕಾರ್ಯಾಚರಣೆ: ಮಾಲಿಕರ ಮಾತು ನಂಬಿ ನೂರಾರು ಜನರ ಬದುಕು ಬೀದಿಗೆ, ಕಣ್ಣೀರು
ಭೂಮಿ ಕಳೆದುಕೊಂಡ ಸಾಕಷ್ಟು ಮಂದಿ ಮೂಲ ಮಾಲೀಕರಿಂದ ವಂಚನೆಗೊಳಗಾಗಿದ್ದು, ಒತ್ತುವರಿ ಕಾರ್ಯಾಚರಣೆ ವೇಳೆ ಅಧಿಕಾರಿಗಳ ಮುಂದೆ ಕಣ್ಣೀರಿಟ್ಟರು.

BDA: ಹುಣ್ಣಿಗೆರೆ ವಸತಿ ಯೋಜನೆಯ 80 ವಿಲ್ಲಾಗಳ ಹರಾಜಿಗೆ ಸಜ್ಜು
ತುಮಕೂರು ರಸ್ತೆ ಮತ್ತು ಮಾಗಡಿ ರಸ್ತೆಯ ನಡುವಿನ ದಾಸನಪುರ ಹೋಬಳಿಯಲ್ಲಿರುವ ಈ ಯೋಜನೆಯು 322 ವಿಲ್ಲಾಗಳನ್ನು ಹೊಂದಿದೆ.

