BDA

ಬಿಡಿಎ ಅಕ್ರಮ ಸೈಟ್‌ಗಳಿಗೆ ಸಕ್ರಮ ಭಾಗ್ಯ: ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸುವ ಬಿಡಿಎ ಕಾಯ್ದೆ ತಿದ್ದುಪಡಿಗಾಗಿ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ. ಮನೆ ನಿರ್ಮಿಸಿ 12 ವರ್ಷ ಆಗಿದ್ದರೆ ಮಾತ್ರ ಸಕ್ರಮಕ್ಕೆ ಅವಕಾಶ ನೀಡಲಾಗುತ್ತದೆ.

40 ಸಾವಿರ ಬಿಡಿಎ ನಿವೇಶನಗಳ ಸಕ್ರಮಗೊಳಿಸಿದರೆ ಸರ್ಕಾರದ ಬೊಕ್ಕಸಕ್ಕೆ ಹರಿದು ಬರುವ ಹಣವೆಷ್ಟು ಗೊತ್ತೆ?
ರಾಜ್ಯದ ಬೊಕ್ಕಸ ತುಂಬಿಸುವ ಸಲುವಾಗಿ ಸುಮಾರು 40 ಸಾವಿರ ಬಿಡಿಎ ನಿವೇಶನಗಳನ್ನು ಸಕ್ರಮಗೊಳಿಸಲು ಸರ್ಕಾರ ಎದುರು ನೋಡುತ್ತಿದೆ.

ಲಾಕ್ ಡೌನ್ ನಿಂದ ಹದಗೆಟ್ಟ ಆರ್ಥಿಕ ಪರಿಸ್ಥಿತಿ: ಬೊಕ್ಕಸ ತುಂಬಿಸಲು ಸರ್ಕಾರದ ಹೊಸ ಪ್ಲಾನ್!
ಕೊರೊನಾ ಲಾಕ್‌ಡೌನ್‌ನಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಸರ್ಕಾರದ ಬೊಕ್ಕಸ ತುಂಬಿಸಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬುಧವಾರ ಕಷ್ಣಾದಲ್ಲಿ ಬಿಡಿಎ ಸಕ್ರಮೀಕರಣ ಉಪಸಮಿತಿ ಸಭೆಯಲ್ಲಿ ಅಧಿಕಾರಿಗಳು ಕೆಲವೊಂದು ಮಹತ್ವದ ಸಲಹೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಸರ್ಕಾರದ ಬೊಕ್ಕಸಕ್ಕೆ 30,000 ಕೋಟಿ ತರಲು ಬಿಡಿಎ ಯೋಜನೆ: ಸಾಧ್ಯವಿಲ್ಲ ಎನ್ನುತ್ತಿದ್ದಾರೆ ತಜ್ಞರು!
ಕೋವಿಡ್-19 ನಿಂದಾಗಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ರಾಜ್ಯ ಸರ್ಕಾರಕ್ಕೆ ಸಹಕಾರಿಯಾಗುವಂತೆ 30,000 ಕೋಟಿ ರೂಪಾಯಿ ಬೊಕ್ಕಸಕ್ಕೆ ತರಲು ಬಿಡಿಎ ಯೋಜನೆ ರೂಪಿಸಿದೆ.

ಪತ್ರಕರ್ತನ ಸೋಗಿನಲ್ಲಿ ಬಿಡಿಎ ಅಧಿಕಾರಿಯಿಂದ ಹಣ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯ ಅಕ್ರಮ ಬಯಲು!
ಆಂಗ್ಲ ಪತ್ರಿಕೆಯ ವರದಿಗಾರ ಎಂದು ಹೇಳಿಕೊಂಡು ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ಬಂದು ನಿಮ್ಮ ಅಕ್ರಮವನ್ನು ಬಯಲಿಗೆಳೆಯುತ್ತೇನೆ ಎಂದು ಬೆದರಿಸಿ ಬಿಡಿಎ ಅಧಿಕಾರಿಗಳಿಂದ ಹಣ ಸುಲಿಗೆ ಮಾಡುತ್ತಿದ್ದವನ ಅಕ್ರಮ ಬಯಲಿಗೆಳೆಯಲಾಗಿದೆ.

ಮುಖ್ಯಮಂತ್ರಿ ಭೇಟಿ ಭರವಸೆ ಬಳಿಕ ಪ್ರತಿಭಟನೆ ಹಿಂಪಡೆದ ರೈತರು
ಬಿಡಿಎಯು ಪೆರಿರೆರಲ್ ರಿಂಗ್ ರಸ್ತೆ ಯೋಜನೆ ಸ್ವಾಧೀನ ಪಡಿಸಿಕೊಳ್ಳುತ್ತಿರುವ ರೈತರ ಭೂಮಿಗೆ ನ್ಯಾಯಯುತವಾದ ಪರಿಹಾರ ನೀಡುವಂತೆ ಆಗ್ರಹಿಸಿ ಬಿಡಿಎ ಕಚೇರಿ ಮುಂದೆ ನಡೆಸಲಾಗುತ್ತಿದ್ದ ಪ್ರತಿಭಟನೆಯನ್ನು ರೈತರು ಹಿಂಪಡೆದಿದ್ದಾರೆ.

ಗೃಹ ಭಾಗ್ಯ: 60 ಪೌರ ಕಾರ್ಮಿಕರಿಗೆ ಫ್ಲ್ಯಾಟ್ ವಿತರಿಸಿದ ಮೇಯರ್
ಬಿಬಿಎಂಪಿಯ ಪಶ್ಚಿಮ ವಲಯದ 60 ಕಾಯಂ ಪೌರಕಾರ್ಮಿಕರಿಗೆ ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿರುವ ಮನೆಗಳ ಹಕ್ಕು ಪತ್ರವನ್ನು ಮೇಯರ್ ಎಂ.ಗೌತಮ್ ಕುಮಾರ್ ವಿತರಣೆ ಮಾಡಿದರು.

ಇನ್ನು ಮುಂದೆ ಸೈಟು, ಆಸ್ತಿಯ ನಕಲಿ ದಾಖಲೆ ಸೃಷ್ಟಿ ಅಸಾಧ್ಯ: ಬಿಡಿಎಯಿಂದ ಆನ್ ಲೈನ್ ನಲ್ಲಿ ಭೂ ದಾಖಲಾತಿ
ನಕಲಿ ದಾಖಲೆಗಳ ಮೂಲಕ ಆಸ್ತಿಗಳನ್ನು ಮಾರಾಟ ಮಾಡುವ ವಂಚನೆಯಿಂದ ತಪ್ಪಿಸಲು ಎಲ್ಲಾ ಭೂ ದಾಖಲೆಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸದ್ಯದಲ್ಲಿಯೇ ಆನ್ ಲೈನ್ ವ್ಯವಸ್ಥೆಗೊಳಪಡಿಸಲಿದೆ.

ಎಸಿಬಿ ತನಿಖೆಗೆ ಬಿಡಿಎ ಕಾಮಗಾರಿ, ಹೈಕೋರ್ಟ್ ಆದೇಶಕ್ಕೆ ಮುಖ್ಯಮಂತ್ರಿ ಸ್ವಾಗತ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಮಗಾರಿಗಳ ತನಿಖೆಗೆ ಹೈಕೋರ್ಟ್ ಆದೇಶ ನೀಡಿರುವುದಕ್ಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ವಾಗತಿಸಿದ್ದಾರೆ.

