basavaraja bommai

ಮುಂಗಾರು ವಿಳಂಬ: ಶಾಶ್ವತ ಟಾಸ್ಕ್ ಫೋರ್ಸ್ ರಚನೆಗೆ ಬಸವರಾಜ ಬೊಮ್ಮಾಯಿ ಆಗ್ರಹ
ಪ್ರತಿ ವರ್ಷ ಮಳೆ ಒಂದು ವಾರ ವಿಳಂಬವಾದರೆ ಕೃಷಿಗೆ ದೊಡ್ಡ ಸಮಸ್ಯೆಯಾಗುತ್ತದೆ. ಪ್ರತಿ ಜಿಲ್ಲೆಗೆ 50 ಲಕ್ಷ ರೂ. ಬಿಡುಗಡೆ ಮಾಡಿ, ಶಾಶ್ವತ ಟಾಸ್ಕ್ ಫೋರ್ಸ್ ರಚನೆ ಮಾಡುವಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಬಸವರಾಜ ಬೊಮ್ಮಾಯಿ ಆಯವ್ಯಕ್ಕಿಂತ ನನ್ನ ಬಜೆಟ್ 35 ಸಾವಿರ ಕೋಟಿ ರೂ. ಹೆಚ್ಚು: ಸಿಎಂ ಸಿದ್ದರಾಮಯ್ಯ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾರ್ಚ್‌ನಲ್ಲಿ ಮಂಡಿಸಿದ ಬಜೆಟ್‌ಗಿಂತ ಜುಲೈನಲ್ಲಿ ಮಂಡಿಸುವ ಬಜೆಟ್‌ನಲ್ಲಿ 35,000 ಕೋಟಿ ರೂಪಾಯಿ ಹೆಚ್ಚಳವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ.

'ರಾಜಕಾರಣದಲ್ಲಿ ಕಷ್ಟ ಪಟ್ಟು ಬಿಳಿ ಶರ್ಟ್ ಹಾಕಿಕೊಂಡಿರ್ತೀವಿ, ನೀವು ಬಂದು ಉಗಿದು ಹೋಗ್ತಿರಾ'': ಜಾಡಿಸಿದ ಬೊಮ್ಮಾಯಿ
ರಾಜಕಾರಣದಲ್ಲಿ ಅನೇಕ ವರ್ಷಗಳಿಂದ ಕಷ್ಟಪಟ್ಟು ಘನತೆ, ಗೌರವ ಸಂಪಾದಿಸಿ ಬಿಳಿ ಅಂಗಿ ಹಾಕಿಕೊಂಡಿರುತ್ತೇವೆ. ನೀವು ಒಂದು ಸಾರಿ ಬಂದು ನಮ್ಮ ಬಿಳಿ ಅಂಗಿ ಮೇಲೆ ಉಗಿದು ಹೋಗ್ತೀರ. ಅದನ್ನು ತೊಳೆದುಕೊಳ್ಳೋಕೆ ನಮಗೆ ತಿಂಗಳಾನುಗಟ್ಟಲೆ ಬೇಕಾಗುತ್ತದೆ.

ಯಡಿಯೂರಪ್ಪ ಬಳಿಕ ಅಧಿಕಾರಕ್ಕೆ ಬಂದ ಮಹಾನುಭಾವರು ಮಾಡಿದ್ದೇನು? ಕಾರ್ಯಕರ್ತರ ಇಚ್ಛೆಯಂತೆ ನಡೆದುಕೊಂಡರಾ?
ಇತ್ತೀಚೆಗಷ್ಟೆ ಹೊಂದಾಣಿಕೆ ರಾಜಕೀಯದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದ ಸಂಸದ ಪ್ರತಾಪ್ ಸಿಂಹ ಮತ್ತೆ ಮಾಜಿ ಸಿ ಎಂ ಬಸವರಾಜ ಬೊಮ್ಮಾಯಿ ವಿರುದ್ಧ ಹರಿಹಾಯ್ದಿದ್ದಾರೆ.

ಬಿಜೆಪಿ ಗರ್ಭಗುಡಿಯೊಳಗೆ ಪ್ರವೇಶ ಪಡೆಯಲಾಗದ ವಲಸಿಗ ಬೊಮ್ಮಾಯಿ, ಜೋಶಿ- ಸಂತೋಷರ ಮುಂದಿನ ಟಾರ್ಗೆಟ್!
ಹೊಂದಾಣಿಕೆ ರಾಜಕಾರಣದ ಬಗ್ಗೆ ಸಂಸದ ಪ್ರತಾಪ ಸಿಂಹ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಹೊಂದಾಣಿಕೆ ರಾಜಕೀಯ ಜೀವಮಾನದಲ್ಲಿ ಮಾಡಿಲ್ಲ ಎಂದು ಹೇಳಿದ್ದ ಬಸವರಾಜ ಬೊಮ್ಮಾಯಿಗೂ ತಿರುಗೇಟು ನೀಡಿದೆ.

ಕಾಂಗ್ರೆಸ್ ಜೊತೆ ಹೊಂದಾಣಿಕೆ ರಾಜಕಾರಣ: ಹಿರಿಯ ನಾಯಕ ಶಾಮನೂರ್ ಶಿವಶಂಕರಪ್ಪ ಭೇಟಿ ಕುರಿತು ಬೊಮ್ಮಾಯಿ ಹೇಳಿದ್ದೇನು?
ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ಹೊಂದಾಣಿಕೆ ರಾಜಕಾರಣದಿಂದಾಗಿ ಕರ್ನಾಟಕದಲ್ಲಿ ಬಿಜೆಪಿಗೆ ಇಂದು ದುರ್ಗತಿ ಬಂದಿದೆ ಎಂದು ಬಿಜೆಪಿಯ ಇಬ್ಬರು ನಾಯಕರು ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ತಲ್ಲಣ ಮೂಡಿಸಿದೆ.

ಬಿಜೆಪಿ ನೋಟು-ಕಾಂಗ್ರೆಸ್ ಗೆ ವೋಟು; 'ಕುರಾನ್' ಮೇಲೆ ಆಣೆ ಮಾಡಿ ವಂಚನೆ; ಬೊಮ್ಮಾಯಿಯಿಂದಲೂ ನನಗೆ ಮೋಸ!
ವಿಧಾನಸಭಾ ಚುನಾವಣೆಯಲ್ಲಿ ನಾನು ಸೋಲಲು ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್ ಮಾತ್ರವಲ್ಲ, ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಸಹ ಕಾರಣ. ಅವರೂ ನನಗೆ ಮೋಸ ಮಾಡಿದರು.

'ತಂದೆ ನನ್ನ ಕೈಹಿಡಿದು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು; ಯಡಿಯೂರಪ್ಪ ಸಾಹೇಬ್ರು ನನ್ನ ರಾಜಕೀಯ ಗುರುಗಳು': ಬಸವರಾಜ ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಆರ್ ಬೊಮ್ಮಾಯಿಯವರ ಜನ್ಮಶತಮಾನೋತ್ಸವದ ಉದ್ಘಾಟನೆ ಮತ್ತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿದ ‘ದಿ ರಾಡಿಕಲ್ ಹ್ಯೂಮಾನಿಸ್ಟ್’ ಕಾಫಿ ಟೇಬಲ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಮ್ಮ ತಂದೆಯನ್ನು ನೆನೆದು ಭಾವುಕರಾದರು.

ಬೊಮ್ಮಾಯಿ ಪ್ರಾಜ್ಞರು- ಪ್ರಜ್ಞಾವಂತರೆಂದು ಭಾವಿಸಿದ್ದೆ: ಕೋಮುವಾದಿಗಳ ಸಹವಾಸ ಮಾಡಿ ಅವಿವೇಕದ ತುಟ್ಟತುದಿಗೆ ಏರಿದ್ದಾರೆ!
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋಮುವಾದಿಗಳ ಸಹವಾಸ ಮಾಡಿ ಅವಿವೇಕದ ತುಟ್ಟತುದಿಗೆ ಏರಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ

