ಬೊಮ್ಮಾಯಿ ಪ್ರಾಜ್ಞರು- ಪ್ರಜ್ಞಾವಂತರೆಂದು ಭಾವಿಸಿದ್ದೆ: ಕೋಮುವಾದಿಗಳ ಸಹವಾಸ ಮಾಡಿ ಅವಿವೇಕದ ತುಟ್ಟತುದಿಗೆ ಏರಿದ್ದಾರೆ!
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋಮುವಾದಿಗಳ ಸಹವಾಸ ಮಾಡಿ ಅವಿವೇಕದ ತುಟ್ಟತುದಿಗೆ ಏರಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋಮುವಾದಿಗಳ ಸಹವಾಸ ಮಾಡಿ ಅವಿವೇಕದ ತುಟ್ಟತುದಿಗೆ ಏರಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ
ಈ ಸಂಬಂಧ ಟ್ವೀಟ್ ಮಾಡಿರುವ ಅವರು ‘ಬೊಮ್ಮಾಯಿ ಅವರನ್ನು ನಾನು ಪ್ರಾಜ್ಞರು ಹಾಗೂ ಪ್ರಜ್ಞಾವಂತರೆಂದು ಭಾವಿಸಿದ್ದೆ. ಆದರೆ, ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬಂತೆ ಜನತಾ ಪರಿವಾರದ ಬೊಮ್ಮಾಯಿ, ಕೋಮುವಾದಿಗಳ ಸಹವಾಸ ಮಾಡಿ ಅವಿವೇಕದ ತುತ್ತತುದಿಗೆ ಏರಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಬೊಮ್ಮಾಯಿಯವರೇ, ನೀವು ಮುಖ್ಯಮಂತ್ರಿ ಆಗಿದ್ದವರು. ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ತಪ್ಪೇ ಎಂದು ಗುಂಡೂರಾವ್ ಪ್ರಶ್ನಿಸಿದ್ದಾರೆ. ಬೊಮ್ಮಾಯಿಯವರೇ, ಯುಪಿಎ ಅವಧಿಯಲ್ಲಿ ಅಪರಾಧಿಗಳ ರಕ್ಷಣೆಯಾಗುತಿತ್ತು ಎಂದು ಹೇಳಿದ್ದೀರಿ.
ನಮ್ಮ ಅವಧಿಯಲ್ಲಿ ಯಾವ ಅಪರಾಧಿಯ ರಕ್ಷಣೆಯಾಗಿದೆ ಎಂದು ಹೇಳಿ? ನಾರಾಯಣ ರಾಣೆ, ಸುವೇಂದು ಅಧಿಕಾರಿಯನ್ನು ಮಹಾಭ್ರಷ್ಟರೆಂದು ಬಿಂಬಿಸಿದ್ದು ನಿಮ್ಮ ಪಕ್ಷವೇ ಅಲ್ಲವೇ?, ಅವರೀಗ ನಿಮ್ಮ ಪಕ್ಷದ ಸದಸ್ಯರು, ಬೇರೆ ಪಕ್ಷದಲ್ಲಿದ್ದಾಗ ಮಹಾಭ್ರಷ್ಟರು ಈಗ ಅವರೇನು’ ಎಂದು ಗುಂಡೂರಾವ್ ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


