Balochistan

ಪಾಕಿಸ್ತಾನ: ಬಲೂಚಿಸ್ತಾನದಲ್ಲಿ ಭಾರಿ ಮಳೆ, ಛಾವಣಿ ಕುಸಿದು ಐವರು ಗಣಿ ಕಾರ್ಮಿಕರು ಸಾವು
ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭಾರಿ ಮಳೆಯಿಂದಾಗಿ ಮನೆಯ ಛಾವಣಿ ಕುಸಿದು ಕನಿಷ್ಠ ಐವರು ಗಣಿ ಕಾರ್ಮಿಕರು ಸಾವಿಗೀಡಾಗಿದ್ದಾರೆ. ಸ್ಥಳೀಯ ಕಲ್ಲಿದ್ದಲು ಗಣಿ ಹೊರಗೆ ಕಾರ್ಮಿಕರ ವಸತಿಗಾಗಿ ಮನೆ ನಿರ್ಮಿಸಲಾಗಿದೆ. ಧಾರಾಕಾರ ಮಳೆಯಿಂದಾಗಿ ಕಲ್ಲಿದ್ದಲು ಗಣಿ ಕುಸಿದು ಐವರು ಕಾರ್ಮಿಕರು ಅವಶೇಷಗಳಡಿಯಲ್ಲಿ ಸಿಲುಕಿದ್ದಾರೆ ಎಂದು ಅವರು ಹೇಳಿದರು.

ಸಾರ್ವತ್ರಿಕ ಚುನಾವಣೆಗೂ ಮುನ್ನ ಬಲೂಚಿಸ್ಥಾನದಲ್ಲಿ ಸ್ಫೋಟ: 25 ಮಂದಿ ಸಾವು
ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಗೂ ಒಂದು ದಿನ ಮುನ್ನ ಬಲೂಚಿಸ್ಥಾನದ ಪ್ರಾಂತ್ಯದಲ್ಲಿ ಎರಡು ಬಾಂಬ್ ಸ್ಫೋಟ ಸಂಭವಿಸಿದ್ದು, 25 ಮಂದಿ ಸಾವನ್ನಪ್ಪಿದ್ದಾರೆ.

ಬಲೂಚಿಸ್ತಾನ ಉಗ್ರ ನೆಲೆಗಳ ಮೇಲೆ ವೈಮಾನಿಕ ದಾಳಿ: ಇರಾನ್ ರಾಯಭಾರಿ ವಾಪಸ್ ಕರೆಸಿಕೊಂಡ ಪಾಕ್
ಬಲೂಚಿಸ್ತಾನ ಪ್ರಾಂತ್ಯದ ಉಗ್ರ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ ಒಂದು ದಿನದ ನಂತರ ಪಾಕಿಸ್ತಾನ ಬುಧವಾರ ಇರಾನ್‌ನಲ್ಲಿರುವ ತನ್ನ ರಾಯಭಾರಿಯನ್ನು ವಾಪಸ್ ಕರೆಯಿಸಿಕೊಂಡಿದೆ ಮತ್ತು ಮುಂಬರುವ...

ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟ; 52 ಜನರು ಸಾವು, 50 ಕ್ಕೂ ಹೆಚ್ಚು ಜನರಿಗೆ ಗಾಯ
ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಮಸೀದಿಯೊಂದರ ಬಳಿ ಶುಕ್ರವಾರ ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಅಂಗವಾಗಿ ರ‍್ಯಾಲಿ ನಡೆಸಲು ಜನರು ಸೇರಿದ್ದಾಗ ನಡೆದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 52 ಜನರು ಸಾವಿಗೀಡಾಗಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಪಾಕಿಸ್ತಾನ: ನೆಲಬಾಂಬ್ ಸ್ಫೋಟ, ಯುನಿಯನ್ ಕೌನ್ಸಿಲ್ ಮುಖ್ಯಸ್ಥ ಸೇರಿ ಏಳು ಮಂದಿ ಸಾವು
ಬಲೂಚಿಸ್ತಾನದ ಪಂಜ್‌ಗುರ್ ಜಿಲ್ಲೆಯಲ್ಲಿ ನೆಲಬಾಂಬ್ ಸ್ಫೋಟಗೊಂಡು ಯುನಿಯನ್ ಕೌನ್ಸಿಲ್ ಮುಖ್ಯಸ್ಥ ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.

ಪಾಕಿಸ್ತಾನ: ಪೋಲಿಯೊ ಲಸಿಕೆ ತಂಡದ ಕಾವಲು ಕಾಯುತ್ತಿದ್ದ ಪೋಲೀಸ್ ಅಧಿಕಾರಿಯನ್ನು ಕೊಂದ ಶಂಕಿತ ಉಗ್ರರು
ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಮಂಗಳವಾರ ಪೋಲಿಯೊ ಲಸಿಕೆ ತಂಡವನ್ನು ಕಾವಲು ಕಾಯುತ್ತಿದ್ದಾಗ ಶಂಕಿತ ಉಗ್ರಗಾಮಿಗಳು ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ್ದಾರೆ.

ಪಾಕಿಸ್ತಾನ: ಬಲೂಚಿಸ್ತಾನ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಮಸೀದಿ ಹೊರಗೆ ಗುಂಡಿಕ್ಕಿ ಹತ್ಯೆ
ಪಾಕಿಸ್ತಾನದ ಬಲೋಚಿಸ್ತಾನ ಪ್ರಾಂತ್ಯದ ಹೈಕೋರ್ಟ್ ನ ಮಾಜಿ ಮುಖ್ಯ ನ್ಯಾಯಮೂರ್ತಿ ಮಸೀದಿಯ ಹೊರಗೆ ಗುಂಡಿನ ದಾಳಿಗೆ ನಿನ್ನೆ ಬಲಿಯಾಗಿದ್ದಾರೆ.

ಪಾಕ್ ಸಂಸ್ಥಾಪಕ ಮೊಹಮದ್ ಆಲಿ ಜಿನ್ನಾ ವಿಗ್ರಹ ಸ್ಫೋಟಿಸಿ ಧ್ವಂಸ: ಬಲೂಚ್ ಬಂಡುಕೋರರ ಕೃತ್ಯ
2013ರಲ್ಲಿ ಜಿನ್ನಾ ಅವರು ಕಡೆಗಾಲದಲ್ಲಿ ತಂಗಿದ್ದರು ಎನ್ನಲಾದ 121 ವರ್ಷ ಹಳೆಯ ಕಟ್ಟಡವನ್ನು ಬಲೂಚ್ ಬಂಡುಕೋರರು ಬೆಂಕಿ ಮತ್ತು ಗುಂಡಿನದಾಳಿಯಿಂದ ಹಾನಿಯುಂಟುಮಾಡಿದ್ದರು.

ಫುಟ್ಬಾಲ್ ಪಂದ್ಯದ ವೇಳೆ ಸ್ಫೋಟ: 14 ಮಂದಿಗೆ ಗಾಯ
ಫುಟ್ಬಾಲ್ ಪಂದ್ಯದ ವೇಳೆ ಸ್ಫೋಟ ಸಂಭವಿಸಿದ ಪರಿಣಾಮ 14 ಜನರು ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ನಡೆದಿದೆ.

