bagalkot

ಬಾಗಲಕೋಟೆ: ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆ ಉಂಟಾಗದಿರಲು ಲಾಕ್‌ಡೌನ್ ಕಾರಣ!
ಪ್ರತಿವರ್ಷ ಮೇ ತಿಂಗಳಿನಲ್ಲಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ತೀವ್ರ ಕುಡಿವ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಈ ಬಾರಿ ಮಾತ್ರ ಜಿಲ್ಲೆಯ ಯಾವ ಭಾಗದಲ್ಲೂ ಇದುವರೆಗೂ ಕುಡಿವ ನೀರಿನ ಸಮಸ್ಯೆ ಕಾಣಿಸಿಕೊಂಡಿಲ್ಲ.

ಮುಧೋಳದಲ್ಲಿ 15 ಹೊಸ ಕೋವಿಡ್ ಪ್ರಕರಣಗಳು ದೃಢ: ಜಿಲ್ಲಾಧಿಕಾರಿ
ಮುಧೋಳದಲ್ಲಿ 15 ಹೊಸ ಕೋವಿಡ್ ಪ್ರಕರಣಗಳು ದೃಡಪಟ್ಟಿದ್ದು, ಸೋಂಕಿತರ ಸಂಖ್ಯೆ 68 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ. ಕೆ.ರಾಜೇಂದ್ರ ತಿಳಿಸಿದ್ದಾರೆ.

ಕೊರೋನಾ ವೈರಸ್ ಅಪಾಯದ ಮಧ್ಯೆ ಸಹಜ ಸ್ಥಿತಿಯತ್ತ ಮರಳುತ್ತಿರುವ ಬಾಗಲಕೋಟೆ
ಮಹಾಮಾರಿ ಕೊರೋನಾ ಭಾರತ ಸೇರಿದಂತೆ ವಿಶ್ವಾದ್ಯಂತ ತನ್ನ ಅಟ್ಟಹಾಸ ಮುಂದುವರಿಸಿರುವಾಗಲೇ ಎದುರಾಗಲಿರುವ ಅಪಾಯಗಳ ಮಧ್ಯೆಯೇ ಬಾಗಲಕೋಟೆ ನಗರ ಸಹಜ ಸ್ಥಿತಿಯತ್ತ ತನ್ನನ್ನು ತೆರೆದುಕೊಳ್ಳಲಾರಂಭಿಸಿದೆ.

ರಾಜ್ಯದಲ್ಲೇ ಮೊದಲ ಬಾರಿಗೆ ಬಾಗಲಕೋಟೆಯಲ್ಲಿ ಅತ್ಯಾಧುನಿಕ ಸ್ಯಾನಿಟೈಸರ್ ಯಂತ್ರ ಬಳಕೆ
ಕೊರೋನಾ ತಡೆಗಟ್ಟುವಿಕೆಯಲ್ಲಿ ಪರಿಣಾಮಕಾರಿ ಕೆಲಸ ಬಾಗಲಕೋಟೆಯಲ್ಲಿ ನಡೆಯುತ್ತಿದೆ. ನಗರದ ಸ್ವಚ್ಚತೆ ಕಾಪಾಡುವುದಕ್ಕಾಗಿ ಹಳೆಯ ಪದ್ದತಿ ಜತೆಗೆ ರಾಜ್ಯದಲ್ಲೇ ಮೊದಲ ಬಾರಿಗೆ ಹೊಸ ಪದ್ಧತಿ ಅಳವಡಿಸಿಕೊಳ್ಳಲಾಗಿದೆ.

ಬಾಗಲಕೋಟೆ: ಲಾಕ್ ಡೌನ್ ಖಾಸಗಿ ಆಸ್ಪತ್ರೆಗಳು ಬಂದ್, ಚಿಕಿತ್ಸೆ ಸಿಗದೇ ಗರ್ಭಿಣಿ ಸಾವು
ಸೂಕ್ತ ಚಿಕಿತ್ಸೆ ಸಿಗದೇ ಗರ್ಭಿಣಿ ಮಹಿಳೆ ಸಾವನ್ನಪ್ಪಿದ ಘಟನೆ ಜಿಲ್ಲೆಯ ಜಮಖಂಡಿ ತಾಲೂಕು ಕಡಪಟ್ಟಿಯಲ್ಲಿ ನಡೆದಿದೆ.

ಬಾಗಲಕೋಟೆಯಲ್ಲಿ ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆ
ಆಲಮಟ್ಟಿ ಜಲಾಶಯ ಹಿನ್ನೀರು ಬಾಧಿತ ಬಾಗಲಕೋಟೆ ಹಳೆ ಪಟ್ಟಣಕ್ಕೆ ಮಹಾಮಾರಿ ಕೊರೋನಾ ಒಕ್ಕರಿಸಿ ಸಂತ್ರಸ್ತರ ಬದುಕಿನೊಂದಿಗೆ ಚೆಲ್ಲಾಟ ಆರಂಭಿಸಿದೆ.

ಬಾಗಲಕೋಟೆ: ಲಾಕ್‌ಡೌನ್‌ನಿಂದ ರಸ್ತೆ ಬಂದ್, ಚಿಕಿತ್ಸೆ ಸಿಗದೆ ವೃದ್ದೆ ಸಾವು
ದೇಶಾದ್ಯಂತ ಕೊರೋನಾ ಲಾಕ್‌ಡೌನ್‌ನಿಂದ ಕಾರಣ ಮನೆಯಿಂದ ಜನ ಹೊರ ಬರುತ್ತಿಲ್ಲ. ಕೆಲ ಗ್ರಾಮಗಳಲ್ಲಿ ಗ್ರಾಮಕ್ಕೆ ಬರುವ ರಸ್ತೆಗಳನ್ನೇ ಅಗೆದು ಹಾಕಲಾಗಿದ್ದು ಹೊರ ಪ್ರದೇಶದವರು ಗ್ರಾಮಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಆದರೆ ರಸ್ತೆ ಅಗೆದಿದ್ದ ಕಾರಣಕ್ಕೆ ಗ್ರಾಮದ ಅನಾರೋಗ್ಯಪೀಡಿತ ವೃದ್ದೆಗೆ ಸಕಾಲಕ್ಕೆ ಚಿಕಿತ್ಸೆ ಸಿಕ್ಕದೆ ಮೃತಪಟ್ಟಿರುವ ಘಟನೆ ಬಾಗಲಕೋಟೆಯಲ್ಲಿ

ಬಾಗಲಕೋಟೆ: ಧರ್ಮ ಪ್ರಚಾರಕನಿಗೆ ಸೋಂಕು, ರಹಸ್ಯ ಬೇಧಿಸಲು ಪೊಲೀಸರ ಹರಸಾಹಸ
ಧರ್ಮ ಪ್ರಚಾಕರಕರೊಬ್ಬರಲ್ಲಿ ಕೊರೋನಾ ವೈರಸ್ ಪತ್ತೆಯಾಗಿದ್ದು, ವ್ಯಕ್ತಿಗೆ ವೈರಸ್ ಹೇಗೆ ತಗುಲಿತು ಎಂಬ ರಹಸ್ಯ ಬೇಧಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಮಕ್ಕಳಿಗೂ ಹಬ್ಬಿದ ಮಾರಕ ಸೋಂಕು: ಬಾಗಲಕೋಟೆಯ ಮೂವರು ಅಪ್ರಾಪ್ತರಲ್ಲಿ ಕೊರೋನಾ ಪತ್ತೆ
ಬಾಗಲಕೋಟೆ ಜಿಲ್ಲೆಯಲ್ಲಿ ಗುರುವಾರ ಮೂವರು ಅಪ್ರಾಪ್ತ ವಯಸ್ಕರಿಗೆ ಕೊರೋನಾವೈರಸ್ ಸೋಂಕು ತಗುಲಿದೆ. ಇವರೆಲ್ಲರೂ ಕೇವಲ ಎರಡು ದಿನಗಳ ಹಿಂದೆ ಕೊರೋನಾ ಸೋಂಕು ದೃಢಪಟ್ಟಿದ್ದ ರೋಗಿಯ ಸಂಪರ್ಕದಲ್ಲಿದ್ದರು.

