Badminton

ಪಿವಿ ಸಿಂಧು ಮುಡಿಗೆ ಬಿಬಿಸಿ ಗರಿ, ಪಿಟಿ ಉಷಾ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ!
ಕ್ರೀಡೆ

ಪಿವಿ ಸಿಂಧು ಮುಡಿಗೆ ಬಿಬಿಸಿ ಗರಿ, ಪಿಟಿ ಉಷಾ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ!

ಒಲಿಂಪಿಕ್ ಬೆಳ್ಳಿ ವಿಜೇತ ಮತ್ತು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ ಸಿಂಧು ಅವರನ್ನು ವರ್ಷದ ಬಿಬಿಸಿ ಭಾರತೀಯ ಕ್ರೀಡಾಪಟು ಎಂದು ಆಯ್ಕೆ ಮಾಡಲಾಗಿದೆ. ಪಿಟಿ ಉಷಾ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿದೆ.

ಪುಲ್ಲೇಲಾ ಗೋಪಿಚಂದ್‌ಗೆ ಜೀವಮಾನ ಸಾಧನೆ ಪ್ರಶಸ್ತಿ
ಕ್ರೀಡೆ

ಪುಲ್ಲೇಲಾ ಗೋಪಿಚಂದ್‌ಗೆ ಜೀವಮಾನ ಸಾಧನೆ ಪ್ರಶಸ್ತಿ

ಒಲಿಂಪಿಕ್ ಸಮಿತಿ ತರಬೇತುದಾರರ ಜೀವಮಾನ ಸಾಧನೆ ಪ್ರಶಸ್ತಿಗೆ ಪುರುಷರ ವಿಭಾಗದಲ್ಲಿ ಭಾರತ ಬ್ಯಾಡ್ಮಿಂಟನ್ ತಂಡದ ಮುಖ್ಯ ಕೋಚ್ ಪುಲ್ಲೇಲಾ ಗೋಪಿಚಂದ್ ಅವರು ಭಾಜನರಾಗಿದ್ದಾರೆ. ದೇಶದ ಬ್ಯಾಡ್ಮಿಂಟನ್ ಕ್ರೀಡೆಗೆ ನೀಡಿರುವ ಕೊಡುಗೆಗಾಗಿ ಇವರಿಗೆ ಪುರಸ್ಕಾರ ನೀಡಲಾಗಿದೆ.

ಬ್ಯಾಡ್ಮಿಂಟನ್ : ಲಕ್ಷ್ಯ ಸೇನ್‌ಗೆ ಬಾಂಗ್ಲಾದೇಶ ಇಂಟರ್‌ನ್ಯಾಷನಲ್ ಚಾಲೆಂಜ್ ಮುಕುಟ
ಕ್ರೀಡೆ

ಬ್ಯಾಡ್ಮಿಂಟನ್ : ಲಕ್ಷ್ಯ ಸೇನ್‌ಗೆ ಬಾಂಗ್ಲಾದೇಶ ಇಂಟರ್‌ನ್ಯಾಷನಲ್ ಚಾಲೆಂಜ್ ಮುಕುಟ

 ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಅವರು ಮಲೇಷ್ಯಾದ ಲಿಯಾಂಗ್ ಜುನ್ ಹಾವ್ ಅವರನ್ನು ಮಣಿಸಿ ಬಾಂಗ್ಲಾದೇಶ ಇಂಟರ್‌ನ್ಯಾಷನಲ್ ಚಾಲೆಂಜರ್ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಮುಡಿಗೇರಿಸಿಕೊಂಡರು. ಆ ಮೂಲಕ ಭಾರತದ ಆಟಗಾರನಿಗೆ ಪ್ರಸಕ್ತ ಆವೃತ್ತಿಯ ಐದನೇ ಕಿರೀಟ ಇದಾಯಿತು.

ದಕ್ಷಿಣ ಏಷ್ಯಾ ಕ್ರೀಡಾಕೂಟ: ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ ಎರಡು ಚಿನ್ನ
ಕ್ರೀಡೆ

ದಕ್ಷಿಣ ಏಷ್ಯಾ ಕ್ರೀಡಾಕೂಟ: ಬ್ಯಾಡ್ಮಿಂಟನ್ ನಲ್ಲಿ ಭಾರತಕ್ಕೆ ಎರಡು ಚಿನ್ನ

13 ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತ ಪ್ರಾಬಲ್ಯವನ್ನು ಮುಂದುವರಿಸಿದ್ದು, ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದಿದೆ. 

ಬ್ಯಾಡ್ಮಿಂಟನ್: ಸ್ಕಾಟೀಷ್ ಓಪನ್ ಮುಡಿಗೇರಿಸಿಕೊಂಡ ಲಕ್ಷ್ಯಸೇನ್, 3 ತಿಂಗಳಲ್ಲಿ ಇದು 4ನೇ ಪ್ರಶಸ್ತಿ!
ಕ್ರೀಡೆ

ಬ್ಯಾಡ್ಮಿಂಟನ್: ಸ್ಕಾಟೀಷ್ ಓಪನ್ ಮುಡಿಗೇರಿಸಿಕೊಂಡ ಲಕ್ಷ್ಯಸೇನ್, 3 ತಿಂಗಳಲ್ಲಿ ಇದು 4ನೇ ಪ್ರಶಸ್ತಿ!

ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯಸೇನ್ ಇಲ್ಲಿ ಮುಕ್ತಾಯವಾದ ಸ್ಕಾಟೀಷ್ ಓಪನ್ ಪುರುಷರ ಸಿಂಗಲ್ಸ್‌ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇದರೊಂದಿಗೆ ಕೇವಲ ಮೂರು ತಿಂಗಳ ಅಂತರದಲ್ಲಿ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದರು.

ದಾಲ್ಮಿಯಾ ಸಿಮೆಂಟ್ ಬೆಂಬಲದೊಂದಿಗೆ ಕಳಿಂಗ ಕ್ರೀಡಾಂಗಣದಲ್ಲಿ ವಿಶ್ವ ದರ್ಜೆಯ ಬ್ಯಾಡ್ಮಿಂಟನ್ ಅಕಾಡೆಮಿ!
ಕ್ರೀಡೆ

ದಾಲ್ಮಿಯಾ ಸಿಮೆಂಟ್ ಬೆಂಬಲದೊಂದಿಗೆ ಕಳಿಂಗ ಕ್ರೀಡಾಂಗಣದಲ್ಲಿ ವಿಶ್ವ ದರ್ಜೆಯ ಬ್ಯಾಡ್ಮಿಂಟನ್ ಅಕಾಡೆಮಿ!

ದಾಲ್ಮಿಯಾ ಸಿಮೆಂಟ್ಸ್ ಭಾರತ್ ಲಿಮಿಟೆಡ್ (ಡಿಸಿಬಿಎಲ್) ಬೆಂಬಲದೊಂದಿಗೆ ಪುಲ್ಲೇಲಾ ಗೋಪಿಚಂದ್ ಬ್ಯಾಡ್ಮಿಂಟನ್ ಫೌಂಡೇಶನ್ (ಪಿಜಿಬಿಎಫ್) ಉನ್ನತ ಕಾರ್ಯಕ್ಷಮತೆ ಕೇಂದ್ರವನ್ನು ಹೊಂದಿರುವ ವಿಶ್ವ ದರ್ಜೆಯ ಬ್ಯಾಡ್ಮಿಂಟನ್ ಅಕಾಡೆಮಿಯನ್ನು ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಸ್ಥಾಪಿಸಲು ಮುಂದಾಗಿದೆ.

ಕೊರಿಯಾ ಓಪನ್: ಕಶ್ಯಪ್‌ಗೆ ಜಯ, ಪಿವಿ ಸಿಂಧು, ಪ್ರಣೀತ್, ಸೈನಾಗೆ ಸೋಲು
ಕ್ರೀಡೆ

ಕೊರಿಯಾ ಓಪನ್: ಕಶ್ಯಪ್‌ಗೆ ಜಯ, ಪಿವಿ ಸಿಂಧು, ಪ್ರಣೀತ್, ಸೈನಾಗೆ ಸೋಲು

ಕೊರಿಯಾ ಓಪನ್ ಟೂರ್ನಿಯಲ್ಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಬಂಗಾರದ ಸಾಧನೆ ಮಾಡಿರುವ ಪಿ.ವಿ.ಸಿಂಧು, ಬಿ.ಸಾಯಿ ಪ್ರಣೀತ್ ಹಾಗೂ ಸೈನಾ ನೆಹ್ವಾಲ್ ನಿರಾಸೆ ಅನುಭವಿಸಿದ್ದು ಕಶ್ಯಪ್ ಭಾರತದ ಭರವಸೆಯಾಗಿ ಉಳಿದಿದ್ದಾರೆ.

ಬ್ಯಾಡ್ಮಿಂಟನ್ ನಲ್ಲಿ ಭಾರಕ್ಕೆ ಡಬಲ್ ಧಮಾಕಾ! ಸೌರಭ್ ವರ್ಮಾ ಗೆ ವಿಯೆಟ್ನಾಂ ಓಪನ್ ಚಾಂಪಿಯನ್ ಪ್ರಶಸ್ತಿ
ಕ್ರೀಡೆ

ಬ್ಯಾಡ್ಮಿಂಟನ್ ನಲ್ಲಿ ಭಾರಕ್ಕೆ ಡಬಲ್ ಧಮಾಕಾ! ಸೌರಭ್ ವರ್ಮಾ ಗೆ ವಿಯೆಟ್ನಾಂ ಓಪನ್ ಚಾಂಪಿಯನ್ ಪ್ರಶಸ್ತಿ

ಭಾನುವಾರ ಭಾರತದ ಬ್ಯಾಡ್ಮಿಂಟನ್ ಪ್ರಿಯರಿಗೆ ಡಬಲ್ ಖುಷಿ ಸಿಕ್ಕಿದೆ. ಇಂದು ಬೆಳಿಗ್ಗೆ ಭಾರತದ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯಸೇನ್ ಅವರು ಬೆಲ್ಜಿಯಂ ಇಂಟರ್ ನ್ಯಾಷನಲ್ ಚಾಲೆಂಜ್ ಕಿರೀಟ ಮುಡಿಗೇರಿಸಿಕೊಂಡಿದ್ದರೆ ಇದೀಗ ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಕ್ರೀಡಾಪಟು ಸೌರಭ್ ವರ್ಮಾ ವಿಯೆಟ್ನಾಂ ಓಪನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ವಿಶ್ವ ಚಾಂಪಿಯನ್ ಪಿ.ವಿ.ಸಿಂಧುಗೆ ನಗದು ಬಹುಮಾನ ಘೋಷಿಸಿದ ಬಿ.ಎಸ್.ಯಡಿಯೂರಪ್ಪ
ಕ್ರೀಡೆ

ವಿಶ್ವ ಚಾಂಪಿಯನ್ ಪಿ.ವಿ.ಸಿಂಧುಗೆ ನಗದು ಬಹುಮಾನ ಘೋಷಿಸಿದ ಬಿ.ಎಸ್.ಯಡಿಯೂರಪ್ಪ

ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಪಡೆದ ಭಾರತೀಯ ಆಟಗಾರ್ತಿ ಪಿ.ವಿ.ಸಿಂಧು ಅವರಿಗೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ದೇಶದ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಅಭಿನಂದನೆ ಸಲ್ಲಿಸಿದ್ದಾರೆ.