Ayodhya

ಕಾಶ್ಮೀರದಲಿ ಕೊರೋನಾ ತಡೆಗೆ ಫಾರೂಕ್ ಅಬ್ದುಲ್ಲಾರಿಂದ ಕೋಟಿ ರು. ಬಿಡುಗಡೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೋನಾ ಹಾವಳಿ ಎದುರಿಸಲು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಸಂಸತ್ ಸದಸ್ಯ ಫಾರೂಕ್ ಅಬ್ದುಲ್ಲಾ ಶನಿವಾರ ತಮ್ಮ ಎಂಪಿಎಲ್‌ಎಡಿ ನಿಧಿಯಿಂದ ಒಂದು ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.ಇನ್ನೊಂದೆಡೆ ಶ್ರೀರಾಮನವಮಿಯನ್ನು ಭಕ್ತರು ಮನೆಗಳಲ್ಲೇ ಆಚರಿಸಿ ಎಂದು ಅಯೋಧ್ಯೆ ಶ್ರೀರಾಮತೀರ್ಥಕ್ಷೇತ್ರ ಟ್ರಸ್ಟ್ ಮನವಿ ಮಾಡಿದೆ.

ಕೊರೋನಾ ಭೀತಿ ಲೆಕ್ಕಿಸದೆ, ರಾಮನವಮಿ ಮೇಳಕ್ಕೆ ಅನುಮತಿ ನೀಡಿದ ಯೋಗಿ
ಕೊರೋನಾ ಸೋಂಕು ದೇಶಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿರುವ ಸಮಯದಲ್ಲೇ ಉತ್ತರಪ್ರದೇಶ ಸರ್ಕಾರ ರಾಮನವವಿಯ ಸಂದರ್ಭದಲ್ಲಿ, ತಜ್ಞರ ಅಭಿಪ್ರಾಯ ಧಿಕ್ಕರಿಸಿ ಅಯೋಧ್ಯೆಯಲ್ಲಿ ಬೃಹತ್ ರಾಮನವಮಿ ಧಾರ್ಮಿಕ ಮೇಳ ನಡೆಸಲು ಅನುಮತಿ ನೀಡಿರುವುದು ಹಲವು ಅಚ್ಚರಿಗೆ ಕಾರಣವಾಗಿದೆ

ರಾಮಜನ್ಮಭೂಮಿ: ರಾಮ ಲಲ್ಲಾಗೆ ಗುಂಡುನಿರೋಧಕ, ಇನ್ನಷ್ಟು ಸಮೀಪದಿಂದ ದರ್ಶನ
ಇನ್ನು ಕೆಲವೇ ದಿನಗಳಲ್ಲಿ ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿನ ರಾಮ ಲಲ್ಲಾ ಗುಂಡು ನಿರೋಧಕ ಆವರಣ ಸೇರಲಿದ್ದಾನೆ! ಹೌದು ಇದೇ ಮಾರ್ಚ್ 25ಕ್ಕೆ ರಾಮ ಲಲ್ಲಾ ವಿಗ್ರಹವನ್ನು ಈಗಿರುವ ತಾತ್ಕಾಲಿಕ ದೇವಾಲಯದ ಸಮೀಪ ಗುಂಡು ನಿರೋಧಕ ಆವರಣದ ಹೊಸ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ನಾಯಕ ವಿನೋದ್ ಕುಮಾರ್ ಬನ್ಸಾಲ್ ಭಾನುವಾರ ಹೇಳಿದ್ದಾರೆ.

ಬಿಜೆಪಿಯಿಂದ ಬೇರ್ಪಟ್ಟಿದ್ದು, ಹಿಂದುತ್ವದಿಂದಲ್ಲ: ರಾಮಮಂದಿರ ನಿರ್ಮಾಣಕ್ಕೆ 1 ಕೋಟಿ ರೂ. ದೇಣಿಗೆ ಘೋಷಿಸಿದ ಉದ್ಧವ್ ಠಾಕ್ರೆ
ತಾವು ಬಿಜೆಪಿಯಿಂದ ಮಾತ್ರ ಬೇರ್ಪಟ್ಟಿದ್ದು, ಹಿಂದುತ್ವದಿಂದಲ್ಲ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ.

ಮೂರುವರೆ ವರ್ಷಗಳಲ್ಲಿ ರಾಮ ಮಂದಿರ ನಿರ್ಮಾಣ- ಟ್ರಸ್ಟ್ ಸದಸ್ಯ
ಮೂರು ಅಥವಾ ಮೂರೂವರೆ ವರ್ಷಗಳಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ ಎಂದು ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖಜಾಂಚಿ ಗೋವಿಂದ್ ದೇವ್ ಗಿರಿಜಿ ಮಹಾರಾಜ್ ಹೇಳಿದ್ದಾರೆ.

ಪೇಜಾವರ ಮಠದಿಂದ ವಿಶ್ವೇಶತೀರ್ಥ ಶ್ರೀಗಳ ಹೆಸರಿನಲ್ಲಿ ರಾಮ ಮಂದಿರಕ್ಕೆ 5 ಲಕ್ಷ ರೂ ದೇಣಿಗೆ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಟ್ರಸ್ಟ್ ನಿರ್ಮಾಣವಾಗುತ್ತಿದ್ದಂತೆಯೇ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಕಾರ್ಯ ಪ್ರಾರಂಭವಾಗಿದೆ.

ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್; ಕಿಷ್ಕಿಂಧೆಯಲ್ಲಿ ಹನುಮದ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್!
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ರಾಜ್ಯದಲ್ಲಿ ಪಂಪಾಕ್ಷೇತ್ರ ಕಿಷ್ಕಿಂಧಾ” ನಗರದ ಸಮಗ್ರ ಅಭಿವೃದ್ಧಿಗಾಗಿ ಶ್ರೀ ಹನುಮದ್ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿದೆ.

ರಾಮ ಮಂದಿರ ನಿರ್ಮಾಣ ಟ್ರಸ್ಟ್ ಗೆ ಅಧ್ಯಕ್ಷ-ಕಾರ್ಯದರ್ಶಿಗಳ ನೇಮಕ
ರಾಮ ಮಂದಿರ ನಿರ್ಮಾಣ ಟ್ರಸ್ಟ್ ಗೆ ಅಧ್ಯಕ್ಷ-ಕಾರ್ಯದರ್ಶಿಗಳ ನೇಮಕ ಮಾಡಲಾಗಿದ್ದು, ಪ್ರಧಾನಿ ಮೋದಿ ಆಪ್ತರೆಂದು ಹೇಳಲಾಗುತ್ತಿರುವ ನೃಪೇಂದ್ರ ಮಿಶ್ರಾ ಅವರಿಗೆ ದೇಗುಲ ನಿರ್ಮಾಣ ಸಮಿತಿಯಲ್ಲಿ ಪ್ರಮುಖ ಪಾತ್ರ ನೀಡಲಾಗಿದೆ ಎನ್ನಲಾಗಿದೆ.

ಮುಸ್ಲಿಮರ ಸಮಾಧಿಗಳ ಮೇಲೆ ರಾಮ ಮಂದಿರವೇ..? ಟ್ರಸ್ಟ್‌ಗೆ ಮುಸ್ಲಿಮರ ಪತ್ರ!
ರಾಮಮಂದಿರ ನಿರ್ಮಿಸಲು ಹಂಚಿಕೆ ಮಾಡಿರುವ ಭೂಮಿಯಲ್ಲಿ ಗೋರಿಗಳಿವೆ ಎಂದು ಕೆಲ ಅಯೋಧ್ಯ ಮುಸ್ಲಿಮರು ದೇಗುಲ ನಿರ್ಮಾಣ ಸಂಬಂಧ ರಚಿಸಲಾಗಿರುವ ಟ್ರಸ್ಟ್‌ಗೆ ಪತ್ರ ಬರೆದಿದ್ದಾರೆ.

