ದೇಶ

ಕೊರೋನಾ ಭೀತಿ ಲೆಕ್ಕಿಸದೆ, ರಾಮನವಮಿ ಮೇಳಕ್ಕೆ ಅನುಮತಿ ನೀಡಿದ ಯೋಗಿ

ಕೊರೋನಾ ಸೋಂಕು ದೇಶಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿರುವ ಸಮಯದಲ್ಲೇ ಉತ್ತರಪ್ರದೇಶ ಸರ್ಕಾರ ರಾಮನವವಿಯ ಸಂದರ್ಭದಲ್ಲಿ, ತಜ್ಞರ ಅಭಿಪ್ರಾಯ ಧಿಕ್ಕರಿಸಿ ಅಯೋಧ್ಯೆಯಲ್ಲಿ ಬೃಹತ್ ರಾಮನವಮಿ ಧಾರ್ಮಿಕ ಮೇಳ ನಡೆಸಲು ಅನುಮತಿ ನೀಡಿರುವುದು ಹಲವು ಅಚ್ಚರಿಗೆ ಕಾರಣವಾಗಿದೆ

ಕೊರೋನಾ ಭೀತಿ ಲೆಕ್ಕಿಸದೆ, ರಾಮನವಮಿ ಮೇಳಕ್ಕೆ ಅನುಮತಿ ನೀಡಿದ ಯೋಗಿ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
Published On :

ಅಯೋಧ್ಯೆ: ಕೊರೋನಾ ಸೋಂಕು ದೇಶಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿರುವ ಸಮಯದಲ್ಲೇ ಉತ್ತರಪ್ರದೇಶ  ಸರ್ಕಾರ  ರಾಮನವವಿಯ ಸಂದರ್ಭದಲ್ಲಿ, ತಜ್ಞರ ಅಭಿಪ್ರಾಯ ಧಿಕ್ಕರಿಸಿ ಅಯೋಧ್ಯೆಯಲ್ಲಿ ಬೃಹತ್ ರಾಮನವಮಿ ಧಾರ್ಮಿಕ ಮೇಳ ನಡೆಸಲು  ಅನುಮತಿ  ನೀಡಿರುವುದು ಹಲವು ಅಚ್ಚರಿಗೆ ಕಾರಣವಾಗಿದೆ

ರಾಮನವಮಿ  ಮೇಳವು ಇದೇ  25ರಿಂದ ಮಂದಿನ ಏಪ್ರಿಲ್ 2ರವರೆಗೆ ನಡೆಯಲಿದ್ದು,ಲಕ್ಷಾಂತರ ಮಂದಿ ಭಕ್ತರು ಸೇರುವ ನಿರೀಕ್ಷೆಯಿದೆ.ಕೊರೋನ ವೈರಸ್ ಸೋಂಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಬೃಹತ್ ಸಭೆ, ಉತ್ಸವ ರದ್ದುಪಡಿಸಬೇಕು  ಎಂದು  ತಜ್ಞರು ಎಚ್ಚರಿಕೆ ನೀಡಿದ್ದರೂ ಆದಿತ್ಯನಾಥ್ ಸರಕಾರದ ಹಠದ ಕ್ರಮವು ಬಹಳ ಅಚ್ಚರಿ ತಂದಿದೆ

ಕೊರೋನ ಸೋಂಕು ಹರಡುವ  ಸಾಧ್ಯತೆಯ ಕಾರಣ  ಬೃಹತ್ ಕಾರ್ಯಕ್ರಮವನ್ನು ರದ್ದುಪಡಿಸುವಂತೆ ಅಯೋಧ್ಯೆಯ ಮುಖ್ಯ ವೈದ್ಯಾಧಿಕಾರಿಗಳು ಸರಕಾರಕ್ಕೆ ಮನವಿ ಮಾಡಿದ್ದಾರೆ

ಆ ಸಮಾರಂಭಕ್ಕೆ ಆಗಮಿಸುವ ಭಾರೀ ಜನಸಂಖ್ಯೆಯನ್ನು ವೈದ್ಯಕೀಯ ತಪಾಸಣೆ ಗುರಿಪಡಿಸಲು  ಬೇಕಾದ ಅಗತ್ಯ ಸಂಪನ್ಮೂಲ, ಸಿಬ್ಬಂದಿ ಇಲ್ಲ ಎಂದವರು ಹೇಳಿದ್ದರೂ ಸರ್ಕಾರ ಮಾತ್ರ  ಹಠಕ್ಕೆ ಬಿದ್ದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.