Ayodhya Verdict

ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಶಾಂತಿ ಕಾಪಾಡುವಂತೆ ರಾಜಕೀಯ ಗಣ್ಯರ ಮನವಿ
ಅಯೋಧ್ಯೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಶಾಂತಿ ಕಾಪಾಡುವಂತೆ ರಾಜಕೀಯ ಗಣ್ಯರು ದೇಶದ ಜನತೆ ಬಳಿ ಮನವಿ ಮಾಡಿಕೊಂಡಿದ್ದಾರೆ.

ಅಯೋಧ್ಯೆ ತೀರ್ಪು ಪ್ರಕಟ: ಕೆಎಸ್ಆರ್ ಟಿಸಿಯಿಂದ ಮುಂಜಾಗ್ರತಾ ಕ್ರಮ
ಅಯೋಧ್ಯೆ ತೀರ್ಪು ಹಿನ್ನಲೆಯಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದ್ದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಜಾಗರೂಕತೆ ವಹಿಸುವಂತೆ ಪ್ರಯಾಣಿಕರಿಗೆ ಸೂಚಿಸಿದೆ. ಒಂದು ವೇಳೆ ಅಹಿತಕರ ಘಟನೆ ಕಲ್ಲು ತೂರಾಟ ನಡೆದರೆ ಬಸ್ ಸಂಚಾರ ಸ್ಥಗಿತಗೊಳಿಸುವ ಸಾಧ್ಯತೆಯಿದೆ.

ಅಯೋಧ್ಯೆ ತೀರ್ಪು ಪ್ರಕಟ: 1528ರಿಂದ 2019ರವರೆಗೆ, ನ್ಯಾಯಾಲಯದ ನಡಾವಳಿ
ವಿವಾದಿತ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕುರಿತು 2010ರಲ್ಲಿ ಅಲಹಾಬಾದ್ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿ ಕುರಿತು ಸುಪ್ರೀಂ ಕೋರ್ಟ್ ಶನಿವಾರ ಐತಿಹಾಸಿಕ ತೀರ್ಪು ನೀಡಿದೆ.ನ್ಯಾಯಾಲಯದಲ್ಲಿ ಇಷ್ಟು ವರ್ಷಗಳ ಕಾಲ ನಡೆದ ಹೋರಾಟದ ಸುದೀರ್ಘ ವಿವರ ಇಲ್ಲಿದೆ.

ಅಯೋಧ್ಯೆ ತೀರ್ಪು ಏನೇ ಆಗಿರಲಿ. ಶಾಂತಿ-ಸೌಹಾರ್ದತೆಯ ಅಂತಃಶಕ್ತಿ ಜಗದ ಬೆಳಕಾಗಲಿ: ಸಿಎಂ ಯಡಿಯೂರಪ್ಪ
ಅಯೋಧ್ಯೆ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ಶನಿವಾರ ತೀರ್ಪು ನೀಡಲಿದ್ದು, ತೀರ್ಪು ಯಾರದೇ ಪರವಿರಲಿ, ವಿರುದ್ಧವಿರಲಿ ಉದ್ವೇಗಕ್ಕೆ ಒಳಗಾಗದೆ ಸಮಚಿತ್ತದಿಂದ ಸ್ವೀಕರಿಸೋಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದ್ದಾರೆ.

ಶನಿವಾರವೇ ತೀರ್ಪು ಏಕೆ ಪ್ರಕಟ?
ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಾಯ್ ಇದೇ 17 ರಂದು ಅಧಿಕಾರದಿಂದ ನಿವೃತ್ತರಾಗಲಿದ್ದು ಮುಂದಿನ ವಾರ ಪ್ರಕಟವಾಗಬೇಕಿದ್ದ ಅಯೋಧ್ಯೆ ಭೂ ವಿವಾದದ ತೀರ್ಪು ಶನಿವಾರವೇ ಪ್ರಕಟವಾಗುತ್ತಿರುವುದು ಏಕೆ?

ಅಯೋಧ್ಯೆ ತೀರ್ಪಿನ ಲಾಭ ಮೋದಿ ಸರ್ಕಾರ ಪಡೆಯುವಂತಿಲ್ಲ: ಶಿವಸೇನೆ
ಅಯೋಧ್ಯೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ತೀರ್ಪು ನೀಡಲಿದ್ದು, ತೀರ್ಪಿನ ಲಾಭವನ್ನು ಮೋದಿ ಸರ್ಕಾರ ಪಡೆಯುವಂತಿಲ್ಲ ಎಂದು ಶಿವಸೇನೆ ಶುಕ್ರವಾರ ಹೇಳಿದೆ.

ಅಯೋಧ್ಯೆ ತೀರ್ಪು: ಹಲವು ರಾಜ್ಯಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ, ಸೆಕ್ಷನ್ 144 ಜಾರಿ
60 ವರ್ಷಗಳಿಗೂ ಹೆಚ್ಚು ವಿವಾದದಲ್ಲಿರುವ ಅಯೋಧ್ಯೆ ವಿವಾದಕ್ಕೆ ಸುಪ್ರೀಂಕೋರ್ಟ್ ಶನಿವಾಕ ತಾರ್ಕಿಕ ಅಂತ್ಯ ಹಾಡಲಿದ್ದು, ತೀರ್ಪು ಹಿನ್ನೆಲೆಯಲ್ಲಿ ಉತ್ತರಪ್ರದೇಶ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ ಹಾಗೂ ದೆಹಲಿ ರಾಜ್ಯಗಳಲ್ಲಿ ಶಾಲಾ ಕಾಲೇಜುಗಳು ಮತ್ತು ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದ್ದು, ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ನಮಗೆ ಮತ್ತೊಂದು ಬಾಬ್ರಿ ಮಸೀದಿ ಬೇಡ, ಶಾಂತಿ ಬೇಕು: ಭಾರತೀಯ ಯುವ ಮುಸ್ಲಿಮರು
60 ವರ್ಷಗಳಿಗೂ ಹೆಚ್ಚು ಕಾಲ ವಿವಾದದಲ್ಲಿರುವ ರಾಮಜನ್ಮಭೂಮಿ ವಿವಾದಕ್ಕೆ ಶನಿವಾರ ಸುಪ್ರೀಂಕೋರ್ಟ್ ತೆರೆ ಎಳೆಯಲಿದ್ದು, ಈ ನಡುವೆ ಹೇಳಿಕೆ ನೀಡಿರುವ ಭಾರತೀಯ ಯುವ ಮುಸ್ಲಿಮರು ನಮಗೆ ಮತ್ತೊಂದು ಬಾಬ್ರಿ ಮಸೀದಿ ಬೇಡ, ಶಾಂತಿ ಬೇಕೆಂದು ಹೇಳಿದ್ದಾರೆ.

ವಿವಾದಿತ 2.77 ಎಕರೆ ಜಮೀನು ಯಾರಿಗೆ?: ಅಯೋಧ್ಯೆ ತೀರ್ಪಿಗೆ ಕ್ಷಣಗಣನೆ ಆರಂಭ
ಅಯೋಧ್ಯೆಯ ವಿವಾದಿತ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಿ ಎಂದು 1885ರಲ್ಲಿ ಮೊದಲ ಬಾರಿ ನ್ಯಾಯಾಲಯದ ಕಟಕಟೆ ಏರಿದ್ದ, ಬಳಿಕದ 134 ವರ್ಷಗಳಲ್ಲಿ ನಾನಾ ಹಂತದ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಗುರಿಯಾಗಿದ್ದ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಕುರಿತ ಐತಿಹಾಸಿಕ ತೀರ್ಪಿಗೆ ಕ್ಷಣಗಣನೆ ಆರಂಭವಾಗಿದೆ.

