Assembly polls

ರಾಜಸ್ತಾನದಲ್ಲಿ ನಳನಳಿಸುತ್ತಿದೆ 'ನಾರಿ ಶಕ್ತಿ': ಬರೋಬ್ಬರಿ 20 ಮಹಿಳಾ ಅಭ್ಯರ್ಥಿಗಳ ಗೆಲುವು!
ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ 50 ಮಹಿಳಾ ಅಭ್ಯರ್ಥಿಗಳ ಪೈಕಿ 20 ಮಂದಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ತಲಾ ಒಂಬತ್ತು ಮತ್ತು ಇಬ್ಬರು ಪಕ್ಷೇತರ ಮಹಿಳಾ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.

'ಗ್ಯಾರಂಟಿ' ಮೋಸ ಎನ್ನುವುದು ಸಾಬೀತಾಗಿದೆ; ಬಿಜೆಪಿಗೆ ಮತ ನೀಡಿ ಜನ ಮೋದಿ ಬೆಂಬಲಿಸಿದ್ದಾರೆ: ಶೋಭಾ ಕರಂದ್ಲಾಜೆ
3 ರಾಜ್ಯಗಳ ಜನರು ಬಿಜೆಪಿಗೆ ಮತ ನೀಡಿ ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಿದ್ದಾರೆ. ಕಾಂಗ್ರೆಸ್‌ನವರ ಗ್ಯಾರಂಟಿ ಅದು ಗ್ಯಾರಂಟಿ ಅಲ್ಲ, ಮೋಸ ಎನ್ನುವುದು ಸಾಬೀತಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಮುಂದಿನ ಸರ್ಕಾರದ ಭಾಗವಾಗುತ್ತೇವೆ: ಮಿಜೋರಾಂ ಬಿಜೆಪಿ ಮುಖ್ಯಸ್ಥ
ಮಿಜೋರಾಂನ 40 ವಿಧಾನಸಭಾ ಸ್ಥಾನಗಳ ಮತ ಎಣಿಕೆ ನಡೆಯುತ್ತಿದ್ದು, ಮುಂದಿನ ಸರ್ಕಾರದ ಭಾಗವಾಗಿ ತಮ್ಮ ಪಕ್ಷ ಇರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವನ್‌ಲಾಲ್‌ಮುಕಾ ಸೋಮವಾರ ಹೇಳಿದ್ದಾರೆ. ತಮ್ಮ ಪಕ್ಷ ಕನಿಷ್ಠ ಮೂರು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.

ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ನ ಹೀನಾಯ ಸೋಲು ಸನಾತನದ ಶಾಪ: ಸ್ವಂತ ಪಕ್ಷದ ವಿರುದ್ಧ ಪ್ರಮೋದ್ ಕೃಷ್ಣಂ ಆಕ್ರೋಶ
ಹಿರಿಯ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಪಕ್ಷದ ಕಳಪೆ ಪ್ರದರ್ಶನದ ಬಗ್ಗೆ ಕಟುವಾಗಿ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಮಹಾತ್ಮ ಗಾಂಧೀಜಿಯವರ ಮಾರ್ಗದಿಂದ ದೂರವಿಟ್ಟು ಮಾರ್ಕ್ಸ್ ಮಾರ್ಗದತ್ತ ಕೊಂಡೊಯ್ಯಲು ಕೆಲವರು ಮುಂದಾಗಿದ್ದಾರೆ ಎಂದರು.

ಕರ್ನಾಟಕದಿಂದ ಹೋಗಿರುವ ಹಣದಿಂದ ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದೆ: ಕುಮಾರಸ್ವಾಮಿ ಟಾಂಗ್!
ತೆಲಂಗಾಣ ರಾಜ್ಯ ನಾಯಕರು ಮಾಡಿದ ಪ್ರಚಾರದಿಂದ ಗೆದ್ದಿಲ್ಲ, ಬದಲಾಗಿ ಇಲ್ಲಿಂದ (ಕರ್ನಾಟಕ) ರವಾನೆಯಾದ ಹಣದಿಂದ ಕಾಂಗ್ರೆಸ್ ಗೆದ್ದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಮಿಜೋರಾಂ ವಿಧಾನಸಭಾ ಚುನಾವಣೆ: ಮತ ಎಣಿಕೆ ಸೋಮವಾರಕ್ಕೆ ಮುಂದೂಡಿಕೆ
ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಈ ಹಿಂದೆ ಡಿಸೆಂಬರ್ 3 ಭಾನುವಾರದಂದು ಮತ ಎಣಿಕೆಗೆ ಚುನಾವಣಾ ಆಯೋಗ ನಿರ್ಧರಿಸಿತ್ತು.

ಕರ್ನಾಟಕದಂತೆ ಮಧ್ಯಪ್ರದೇಶ, ತೆಲಂಗಾಣದಲ್ಲೂ ಮ್ಯಾಜಿಕ್ ಮಾಡ್ತಾರಾ ಸುನೀಲ್ ಕನುಗೋಳು?
ತೆಲಂಗಾಣ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮುಗಿದು ಡಿಸೆಂಬರ್‌ನಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ. ಚುನಾವಣಾ ತಂತ್ರಗಾರ ಸುನೀಲ್ ಕನುಗೋಳು ಅವರ ತಂತ್ರಗಾರಿಕೆ ಮ್ಯಾಜಿಕ್ ಮಾಡಲಿದ್ಯಾ ಎಂಬುದನ್ನು ನೋಡಲು ಡಿಸೆಂಬರ್ 3ರವರೆಗೂ ಕಾಯಬೇಕಾಗಿದೆ.

ತೆಲಂಗಾಣ ವಿಧಾನಸಭೆ ಚುನಾವಣೆ: ಬಿಆರ್‌ಎಸ್ ಹಾಲಿ ಶಾಸಕ ಕಾಂಗ್ರೆಸ್ ಸೇರ್ಪಡೆ
ತೆಲಂಗಾಣ ವಿಧಾನಸಭಾ ಚುನಾವಣೆಗೆ ಇನ್ನೂ ಕೇವಲ ಒಂದು ವಾರ ಬಾಕಿ ಇರುವಂತೆಯೇ ಬಿಆರ್ ಎಸ್ ಹಾಲಿ ಶಾಸಕ ಕೈ ಕೊಟ್ಟಿದ್ದು, ಶುಕ್ರವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಮಧ್ಯ ಪ್ರದೇಶ ಚುನಾವಣೆ: 340 ಕೋಟಿ ರೂ. ಮೌಲ್ಯದ ನಗದು, ಡ್ರಗ್ಸ್, ಚಿನ್ನಾಭರಣ ವಶ
ಮಧ್ಯಪ್ರದೇಶದಲ್ಲಿ ಅಕ್ಟೋಬರ್ 9 ರಂದು ರಾಜ್ಯ ವಿಧಾನಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೂ ರೂ. 40.18 ಕೋಟಿ ನಗದು, 17 ಕೋಟಿಗೂ ಹೆಚ್ಚು ಮೌಲ್ಯದ ಮಾದಕ ದ್ರವ್ಯಗಳು, ಮದ್ಯ, ಚಿನ್ನಾಭರಣ ಸೇರಿದಂತೆ ಒಟ್ಟು 280 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

