ಕರ್ನಾಟಕದಂತೆ ಮಧ್ಯಪ್ರದೇಶ, ತೆಲಂಗಾಣದಲ್ಲೂ ಮ್ಯಾಜಿಕ್ ಮಾಡ್ತಾರಾ ಸುನೀಲ್ ಕನುಗೋಳು?
ತೆಲಂಗಾಣ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮುಗಿದು ಡಿಸೆಂಬರ್‌ನಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ. ಚುನಾವಣಾ ತಂತ್ರಗಾರ ಸುನೀಲ್ ಕನುಗೋಳು ಅವರ ತಂತ್ರಗಾರಿಕೆ ಮ್ಯಾಜಿಕ್ ಮಾಡಲಿದ್ಯಾ ಎಂಬುದನ್ನು ನೋಡಲು ಡಿಸೆಂಬರ್ 3ರವರೆಗೂ ಕಾಯಬೇಕಾಗಿದೆ.

ಬೆಂಗಳೂರು: ತೆಲಂಗಾಣ ಮತ್ತು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮುಗಿದು ಡಿಸೆಂಬರ್‌ನಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ. ಚುನಾವಣಾ ತಂತ್ರಗಾರ ಸುನೀಲ್ ಕನುಗೋಳು ಅವರ ತಂತ್ರಗಾರಿಕೆ ಮ್ಯಾಜಿಕ್ ಮಾಡಲಿದ್ಯಾ ಎಂಬುದನ್ನು ನೋಡಲು ಡಿಸೆಂಬರ್ 3ರವರೆಗೂ ಕಾಯಬೇಕಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 224 ರಲ್ಲಿ 135 ಸ್ಥಾನಗಳೊಂದಿಗೆ ಭಾರೀ ಬಹುಮತ ಗಳಿಸಲು ತಂತ್ರ ಹೆಣೆದಿದ್ದರು. ಕರ್ನಾಟಕದಲ್ಲಿ ಮೇ.10 ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರ ರಚಿಸಿದ ನಂತರ, ಕಾಂಗ್ರೆಸ್ ಪಕ್ಷಕ್ಕೆ ಸಾಕಷ್ಟು ಮುಂಚಿತವಾಗಿ ಸೇರ್ಪಡೆಗೊಂಡಿದ್ದ ಕನುಗೋಳು ಅವರಿಗೆ ಸಂಪುಟ ದರ್ಜೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಖ್ಯ ಸಲಹೆಗಾರ ಹುದ್ದೆಯನ್ನು ನೀಡಲಾಯಿತು.
ಕರ್ನಾಟಕದ ಶಕ್ತಿಕೇಂದ್ರ ‘ವಿಧಾನಸೌಧ’ದ ಮೂರನೇ ಮಹಡಿಯಲ್ಲಿ ಸಿಎಂಒ ಕಚೇರಿಯ ಅದೇ ಸಾಲಿನಲ್ಲಿ ಅವರಿಗೆ ಕಚೇರಿಯನ್ನೂ ಮಂಜೂರು ಮಾಡಲಾಗಿದೆ. ಸ್ಪಷ್ಟವಾಗಿ, ಇದು ಅವರ ತಂತ್ರಗಾರಿಕೆಗೆ ನೀಡಿದ ಮನ್ನಣೆಯಾಗಿದೆ. ಆದರೆ ಮಧ್ಯಪ್ರದೇಶ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಯ ಕಾರ್ಯವನ್ನು ಅವರಿಗೆ ನೀಡಿದ್ದರಿಂದ ಅವರು ವಿಧಾನಸೌಧದ ಕಾರಿಡಾರ್‌ನಲ್ಲಿ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ಕರ್ನಾಟಕವು ವಿಧಾನಸಭೆ ಚುನಾವಣೆಯ ಪೂರ್ವದಲ್ಲಿ ಐದು ಭರವಸೆ ನೀಡಿತು, ಈ ಖಾತರಿಗಳು ಚುನಾವಣೆಯಲ್ಲಿ ಪರಿಣಾಮ ಬೀರಿದವು.
ಕರ್ನಾಟಕದಲ್ಲಿ JD(S) ಅನ್ನು ಕೇಸರಿ ಪಕ್ಷದ 'B' ಟೀಮ್ ಎಂದು ಬ್ರಾಂಡ್ ಮಾಡಿದಂತೆ, ಕೆ.ಚಂದ್ರಶೇಖರ ರಾವ್ ಅವರ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಬಿಜೆಪಿಯೊಂದಿಗೆ ನಿಗೂಢ ಮೈತ್ರಿ ಮಾಡಿಕೊಂಡಿದೆ ಎಂದು ಬ್ರಾಂಡ್ ಮಾಡುವ ಮೂಲಕ ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಪಕ್ಷದ ಪರವಾಗಿ ಧ್ರುವೀಕರಿಸುವ ಮೂಲಕ ಕನುಗೋಳು ಸಲಹೆ ನೀಡಿದ್ದಾರೆ.
ಕರ್ನಾಟಕದಂತೆ ವಾರ್ ರೂಂಗಳನ್ನು ಸ್ಥಾಪಿಸಿ ಆಕ್ರಮಣಕಾರಿಯಾಗಿ ಕೆಲಸ ಮಾಡಿರುವ ಕನುಗೋಳು ಅವರು ಮಧ್ಯಪ್ರದೇಶದಲ್ಲಿ 230 ರಲ್ಲಿ 125 ಮತ್ತು ತೆಲಂಗಾಣದಲ್ಲಿ 119 ರಲ್ಲಿ 67 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಅಂದರೆ ಸರಳ ಬಹುಮತ ತರುವ ಭವಿಷ್ಯ ನುಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


