Assembly polls

ಪಶ್ಚಿಮ ಬಂಗಾಳ ಚುನಾವಣೆ: ಏಪ್ರಿಲ್ 14ರಿಂದ ರಾಹುಲ್ ಗಾಂಧಿ ಪ್ರಚಾರ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಏಪ್ರಿಲ್ 14ರಿಂದ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ಗೋಲ್ಪೋಖರ್ ಮತ್ತು ಮತಿಗರ-ನಕ್ಸಲ್ಬಾರಿಯಲ್ಲಿ ರ‍್ಯಾಲಿಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಶ್ಚಿಮ ಬಂಗಾಳ: ಕೇಂದ್ರ ಗೃಹ ಸಚಿವ ಅಮಿತ್ ಶಾಗೆ 13 ತರಹೇವಾರಿ ಭಕ್ಷ್ಯ ಭೋಜನ!
ಪಶ್ಚಿಮ ಬಂಗಾಳದ ಬಾಬಾನಿಪುರದಲ್ಲಿ ಇಂದು ಮನೆ ಮನೆಗೆ ಹೋಗಿ ಮತ ಯಾಚಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಹಿರಿಯ ಮುಖಂಡ ಸಮರೇಂದ್ರ ಪ್ರಸಾದ್ ಬಿಸ್ವಾಸ್ ಅವರ ನಿವಾಸದಲ್ಲಿ ಮಧ್ಯಾಹ್ನ ಭೋಜನ ಸವಿದರು. ಪಕ್ಷದ ಮುಖಂಡರಾದ ಪಕ್ಷದ ಮುಖಂಡರಾದ ಸ್ವಪನ್ ದಾಸ್‌ಗುಪ್ತಾ ಮತ್ತು ದಿನೇಶ್ ತ್ರಿವೇದಿ ಕೂಡ ಪಾಲ್ಗೊಂಡಿದ್ದರು.

ಚುನಾವಣಾ ಆಯೋಗದ ಶೋಕಾಸ್ ನೋಟಿಸ್ ಗೆ 'ಡೋಂಟ್ ಕೇರ್' ಎಂದ ಮಮತಾ!
ಕೇಂದ್ರಿಯ ಪಡೆಗಳಿಂದ ಮತದಾರರಿಗೆ ಬೆದರಿಕೆ ಹೇಳಿಕೆಗಾಗಿ ಚುನಾವಣಾ ಆಯೋಗದಿಂದ ನೀಡಲಾಗಿರುವ ನೋಟಿಸ್ ಕುರಿತಂತೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಿಆರ್ ಪಿಎಫ್ , ಬಿಜೆಪಿ ಪರ ಕೆಲಸ ಮಾಡುವುದನ್ನು ನಿಲ್ಲಿಸುವವರೆಗೂ ಅದರ ಬಗ್ಗೆ ಮಾತನಾಡುವುದನ್ನು ಮುಂದುವರೆಸುತ್ತೇನೆ ಎಂದಿದ್ದಾರೆ.

ಪಶ್ಚಿಮ ಬಂಗಾಳ: ನಾಳೆ 44 ಕ್ಷೇತ್ರಗಳಲ್ಲಿ ನಾಲ್ಕನೇ ಹಂತದ ಮತದಾನ
ಪಶ್ಚಿಮ ಬಂಗಾಳ ವಿಧಾನಸಭೆಯ 44 ಕ್ಷೇತ್ರಗಳಲ್ಲಿ ನಾಳೆ ನಾಲ್ಕನೇ ಹಂತದ ಮತದಾನ ನಡೆಯಲಿದೆ. ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಮತ್ತು ಪಶ್ಚಿಮ ಬಂಗಾಳದ ಸಚಿವರಾದ ಪಾರ್ಥ ಚಟರ್ಜಿ, ಅನೂಪ್ ಬಿಸ್ವಾಸ್ ಸೇರಿದಂತೆ ಹಲವು ಮುಖಂಡರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.

ಮುಂದಿನ ವರ್ಷದ ಚುನಾವಣೆಗಾಗಿ ಪ್ರಶಾಂತ್ ಕಿಶೋರ್ ತಂಡ ಮೇ ತಿಂಗಳಿನಿಂದ ಪಂಜಾಬ್ ನಲ್ಲಿ ವಾಸ್ತವ್ಯ ಸಾಧ್ಯತೆ
ಪಂಜಾಬ್ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಇರುವಂತೆಯೇ, ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಗೆ ಪ್ರಧಾನ ಸಲಹೆಗಾರರಾಗಿ ನೇಮಕವಾಗಿರುವ ಚುನಾವಣಾ ರಣತಂತ್ರ ಪರಿಣತ ಪ್ರಶಾಂತ್ ಕಿಶೋರ್ , ತನ್ನ ತಂಡದೊಂದಿಗೆ ಮೇ ತಿಂಗಳಿನಿಂದ ಪಂಜಾಬ್ ನಲ್ಲಿ ವಾಸ್ತವ್ಯಹೂಡುವ ಸಾಧ್ಯತೆಯಿದೆ.

ಪಶ್ಚಿಮ ಬಂಗಾಳದಲ್ಲಿ ಪಕ್ಷಾಂತರ ಪರ್ವ: ಬಿಜೆಪಿ ಸಂಸದ ಸೌಮಿತ್ರಾ ಖಾನ್ ಪತ್ನಿ ಟಿಎಂಸಿಗೆ ಸೇರ್ಪಡೆ!
ವಿಧಾನಸಭೆ ಚುನಾವಣೆ ಸಮೀಪದಲ್ಲಿರುವಂತೆ ಪಶ್ಚಿಮ ಬಂಗಾಳದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದೆ. ಒಂದು ಕಡೆ ಆಡಳಿತಾರೂಢ ಟಿಎಂಸಿಯ ಶಾಸಕರು ಬಿಜೆಪಿಯತ್ತ ಜಿಗಿಯುತ್ತಿದ್ದರೆ ಮತ್ತೊಂದೆಡೆ ಬಿಜೆಪಿ ಮುಖಂಡರು ಸಹ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಾಯಕತ್ವ ಒಪ್ಪಿ, ಟಿಎಂಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ, ಎಐಎಡಿಎಂಕೆಯೊಂದಿಗೆ ಮೈತ್ರಿ ಇಲ್ಲ ಎಂದ ಕಮಲ್ ಹಾಸನ್
ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಎಐಎಡಿಎಂಕೆ ಅಥವಾ ಡಿಎಂಕೆಯೊಂದಿಗೆ ತಮ್ಮ ಪಕ್ಷ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಕ್ಕಳ್ ನಿಧಿ ಮೈಮ್ (ಎಂಎನ್ ಎಂ) ಮುಖ್ಯಸ್ಥ ಕಮಲ್ ಹಾಸನ್ ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ದಾಟಲ್ಲ: ಪ್ರಶಾಂತ್ ಕಿಶೋರ್
ಸುವೇಂದು ಅಧಿಕಾರಿ ಜೊತೆಗೆ ಹಲವು ಶಾಸಕರು ಬಿಜೆಪಿ ಸೇರುವುದರೊಂದಿಗೆ ಕಳೆದ ವಾರಾಂತ್ಯ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾಲಿಗೆ ಸಂಕಷ್ಟದ ವೀಕೆಂಡ್ ಆಗಿ ಪರಿಣಮಿಸಿತು.

2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸ್ಪರ್ಧೆ: ಅರವಿಂದ ಕೇಜ್ರಿವಾಲ್
2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

