ಪಶ್ಚಿಮ ಬಂಗಾಳ: ಕೇಂದ್ರ ಗೃಹ ಸಚಿವ ಅಮಿತ್ ಶಾಗೆ 13 ತರಹೇವಾರಿ ಭಕ್ಷ್ಯ ಭೋಜನ!
ಪಶ್ಚಿಮ ಬಂಗಾಳದ ಬಾಬಾನಿಪುರದಲ್ಲಿ ಇಂದು ಮನೆ ಮನೆಗೆ ಹೋಗಿ ಮತ ಯಾಚಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಹಿರಿಯ ಮುಖಂಡ ಸಮರೇಂದ್ರ ಪ್ರಸಾದ್ ಬಿಸ್ವಾಸ್ ಅವರ ನಿವಾಸದಲ್ಲಿ ಮಧ್ಯಾಹ್ನ ಭೋಜನ ಸವಿದರು. ಪಕ್ಷದ ಮುಖಂಡರಾದ ಪಕ್ಷದ ಮುಖಂಡರಾದ ಸ್ವಪನ್ ದಾಸ್‌ಗುಪ್ತಾ ಮತ್ತು ದಿನೇಶ್ ತ್ರಿವೇದಿ ಕೂಡ ಪಾಲ್ಗೊಂಡಿದ್ದರು.

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಬಾಬಾನಿಪುರದಲ್ಲಿ ಇಂದು ಮನೆ ಮನೆಗೆ ಹೋಗಿ ಮತ ಯಾಚಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಹಿರಿಯ ಮುಖಂಡ ಸಮರೇಂದ್ರ ಪ್ರಸಾದ್ ಬಿಸ್ವಾಸ್ ಅವರ ನಿವಾಸದಲ್ಲಿ ಮಧ್ಯಾಹ್ನದ ಭೋಜನ ಸವಿದರು. ಪಕ್ಷದ ಮುಖಂಡರಾದ ಪಕ್ಷದ ಮುಖಂಡರಾದ ಸ್ವಪನ್ ದಾಸ್‌ಗುಪ್ತಾ ಮತ್ತು ದಿನೇಶ್ ತ್ರಿವೇದಿ ಕೂಡ ಪಾಲ್ಗೊಂಡಿದ್ದರು.
ಅಮಿತ್ ಶಾ ಅವರ ಮಧ್ಯಾಹ್ನದ ಊಟಕ್ಕಾಗಿ ಲುಚಿ, ರೊಟ್ಟಿ, ಚಾಲ್ಲರ್ ದಾಲ್, ಬೈಂಗನ್ ಭಜಾ, ಕುಮ್ರೊ (ಕುಂಬಳಕಾಯಿ) ಭಜಾ, ಪಟಾಲ್ ಸಬ್ಜಿ, ಚನಾರ್ (ಪನೀರ್) ದಾಲ್ನಾ, ಧೋಕರ್ ದಾಲ್ನಾ, ಭಿಂದಿ ಸಬ್ಜಿ, ಮಾವಿನ ಚಾಟ್ನಿ, ಪಾಪಾಡ್ ಮತ್ತು ಐದು ವಿಧದ ಕೋಲ್ಕತ್ತಾದ ವಿಶೇಷ ಸಿಹಿತಿಂಡಿಗಳನ್ನು ತಯಾರಿಸಲಾಗಿತ್ತು.
ಇದೇ ವೇಳೆ ಚುನಾವಣೆ ಕುರಿತಂತೆ ಮಾತನಾಡಿದ ಬಿಸ್ವಾಸ್, ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ ಅವರ ಬೆಂಬಲದಿಂದಾಗಿ ಬೆಳೆದ ಮಮತಾ ಬ್ಯಾನರ್ಜಿಗೆ ಇಂದು ಅವರ ನೆನಪಿಲ್ಲ. ಪಶ್ಚಿಮ ಬಂಗಾಳದಲ್ಲಿ ಎಡ ಸರ್ಕಾರವನ್ನು ಕಿತ್ತು ಹಾಕಿ ಮಮತಾ ಬ್ಯಾನರ್ಜಿ ಬೆಳೆಯಲು ಬೆಂಬಲಿಸಿತ್ತು,ಇಲ್ಲವಾದರೆ ಈಗ ಅಷ್ಟು ಎತ್ತರಕ್ಕೆ ಆಕೆ ಬೆಳೆಯುತ್ತಿರಲಿಲ್ಲ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


