Andhra Pradesh

ವಿಧಾನಸಭಾ ಚುನಾವಣೆ Exit polls: ಆಂಧ್ರದಲ್ಲಿ NDA ಗೆ ಬಹುಮತ; ಒಡಿಶಾದಲ್ಲಿ ಬಿಜೆಪಿ-ಬಿಜೆಡಿ ನಡುವೆ ತೀವ್ರ ಜಿದ್ದಾಜಿದ್ದಿ!
ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡ ನಂತರ ಹಲವು ರಾಜ್ಯಗಳಿಗೆ ನಡೆದಿದ್ದ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆಗಳು ಇಂದು ಪ್ರಕಟವಾಗಿವೆ.

ಇಂದಿನಿಂದ ಹೈದರಾಬಾದ್ ಆಂಧ್ರ-ತೆಲಂಗಾಣ ಜಂಟಿ ರಾಜಧಾನಿಯಲ್ಲ!
ಆಂಧ್ರಪ್ರದೇಶ ರಾಜ್ಯದ ವಿಭಜನೆಯಾದ ಬಳಿಕ ಹೈದರಾಬಾದ್ ಗೆ ನೀಡಲಾಗಿದ್ದ ತೆಲಂಗಾಣ- ಆಂಧ್ರದ ಜಂಟಿ ರಾಜಧಾನಿ ಸ್ಥಾನ ಇಂದಿನಿಂದ ಕೊನೆಗೊಳ್ಳಲಿದೆ.

ದಾಖಲೆ ಇಲ್ಲದ ಖಾಸಗಿ ಬಸ್ ವಶಕ್ಕೆ: ಗದಗ ಹೊರವಲಯದಲ್ಲಿ ಊಟ-ನಿದ್ರೆ ಇಲ್ಲದೆ 49 ಆಂಧ್ರ ಪ್ರವಾಸಿಗರ ಪರದಾಟ!
ಸೂಕ್ತ ದಾಖಲೆ ಇಲ್ಲದೆ ಸಂಚಾರ ನಡೆಸುತ್ತಿದ್ದ ಖಾಸಗಿ ಬಸ್ ವೊಂದನ್ನು ಆರ್ಟಿಒ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಇದರ ಪರಿಣಾಮ ಬಸ್ ನಲ್ಲಿ ಸಂಚರಿಸುತ್ತಿದ್ದ ಆಂಧ್ರಪ್ರದೇಶದ 49 ಪ್ರಯಾಣಿಕರು ಗದಗದ ಹೊರವಲಯದಲ್ಲಿ ಊಟ-ನಿದ್ರೆ ಇಲ್ಲದೆ ಪರದಾಡಿದ ಘಟನೆ ಬೆಳಕಿಗೆ ಬಂದಿದೆ.

ರಾಜ್ಯದಲ್ಲಿ ಚುನಾವಣೋತ್ತರ ಹಿಂಸಾಚಾರ; ಆಂಧ್ರ ಪ್ರದೇಶದ ಮುಖ್ಯ ಕಾರ್ಯದರ್ಶಿ, ಡಿಜಿಪಿಗೆ ಚುನಾವಣಾ ಆಯೋಗ ಸಮನ್ಸ್
ಆಂಧ್ರ ಪ್ರದೇಶದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಭಾರತದ ಚುನಾವಣಾ ಆಯೋಗವು ಘಟನೆಗಳನ್ನು ನಿಯಂತ್ರಿಸುವಲ್ಲಿ ಆಡಳಿತದ ವೈಫಲ್ಯವನ್ನು 'ವೈಯಕ್ತಿಕವಾಗಿ ವಿವರಿಸಲು' ಗುರುವಾರ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಸಮನ್ಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಬಸ್ಸು-ಲಾರಿ ಡಿಕ್ಕಿ: 6 ಮಂದಿ ಸಜೀವ ದಹನ
ಬಸ್ಸು ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಬಸ್ಸು ಸಂಪೂರ್ಣ ಹೊತ್ತಿ ಉರಿದು ಆರು ಮಂದಿ ಸಜೀವ ದಹನವಾದ ಪ್ರಕರಣ ಆಂಧ್ರ ಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ಬುಧವಾರ ನಸುಕಿನ ಜಾವ ನಡೆದಿದೆ.

LokSabha Election 2024: 4ನೇ ಹಂತದ ಮತದಾನ, ಸಾಮಾನ್ಯರಂತೆ ಬಂದು ಮತ ಚಲಾಯಿಸಿದ ಚಿತ್ರ ನಟರು
ಲೋಕಸಭಾ ಚುನಾವಣೆ 2024ರ 4ನೇ ಹಂತದ ಮತದಾನ ನಡೆಯುತ್ತಿದ್ದು, ತೆಲಂಗಾಣ, ಆಂಧ್ರ ಪ್ರದೇಶ ಮತ್ತು ಒಡಿಶಾದಲ್ಲಿ ಮತದಾನ ನಡೆಯುತ್ತಿದೆ.

ಲೋಕಸಭೆ ಚುನಾವಣೆ 4ನೇ ಹಂತ: 10 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ 96 ಕ್ಷೇತ್ರಗಳಿಗೆ ಮತದಾನ ಆರಂಭ
ತೆಲಂಗಾಣದ ಎಲ್ಲ 17 ಸ್ಥಾನಗಳು ಸೇರಿದಂತೆ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಸೋಮವಾರ (ಮೇ 13) ಆರಂಭಗೊಂಡಿದೆ. ಆಂಧ್ರಪ್ರದೇಶದಲ್ಲಿ ತನ್ನ ಎಲ್ಲ 25 ಲೋಕಸಭಾ ಸ್ಥಾನಗಳು ಮತ್ತು 175 ವಿಧಾನಸಭೆ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಒಡಿಶಾ ವಿಧಾನಸಭೆ ಚುನಾವಣೆಗೆ ಸಹ ಮತದಾನ ಆರಂಭವಾಗಿದೆ.

ಆಂಧ್ರ ಪ್ರದೇಶ ಪೊಲೀಸ್ ಮಹಾ ನಿರ್ದೇಶಕರ ವರ್ಗಾವಣೆ ಮಾಡಿ ಇಸಿ ಆದೇಶ
ಆಂಧ್ರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಕೆ ವಿ ರಾಜೇಂದ್ರನಾಥ ರೆಡ್ಡಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಚುನಾವಣಾ ಆಯೋಗ ಭಾನುವಾರ ಆದೇಶ ಹೊರಡಿಸಿದೆ.

ಆಂಧ್ರಪ್ರದೇಶ: ಲಾರಿ- ಆಟೋ ಡಿಕ್ಕಿ, ನಾಲ್ವರು ಸಾವು
ಆಟೋ-ಲಾರಿ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯಲ್ಲಿ ನಡೆದಿದೆ. ಲಾರಿ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಅಷ್ಟೇ ಸಂಖ್ಯೆಯ ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

