Andhra Pradesh

ಆಂಧ್ರದಲ್ಲಿ ಭಾರೀ ಮಳೆಗೆ 8 ಮಂದಿ ಬಲಿ: ಸಿಎಂ ಚಂದ್ರಬಾಬು ನಾಯ್ಡು ಅವರಿಂದ ಪರಿಸ್ಥಿತಿ ಅವಲೋಕನ
ಮುಖ್ಯಮಂತ್ರಿ ನಾಯ್ಡು ಅವರು ಶನಿವಾರ ಬೆಳಗ್ಗೆಯಿಂದ ರಾಜ್ಯದ ಪರಿಸ್ಥಿತಿ ಮತ್ತು ಮಳೆಯಿಂದ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಕೈಗೊಂಡ ಪರಿಹಾರ ಕ್ರಮಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಆಂಧ್ರ ಪ್ರದೇಶದ ಫಾರ್ಮಾ ಕಂಪನಿಯಲ್ಲಿ ಸ್ಫೋಟ: ಸಾವಿನ ಸಂಖ್ಯೆ 13ಕ್ಕೆ ಏರಿಕೆ, 30 ಮಂದಿಗೆ ಗಾಯ
ಅನಕಪಲ್ಲಿ ಜಿಲ್ಲೆಯ ರಾಂಬಿಲ್ಲಿ ಮಂಡಲದ ಅಚ್ಚುತಪುರಂ ಎಸ್‌ಇಜೆಡ್‌ನಲ್ಲಿರುವ ಎಸ್ಸೆಂಟಿಯಾ ಅಡ್ವಾನ್ಸ್‌ಡ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಇಂದು ಮಧ್ಯಾಹ್ನ ರಿಯಾಕ್ಟರ್ ಸ್ಫೋಟಗೊಂಡಿದೆ.

ಆಂಧ್ರ ಪ್ರದೇಶದ ಫಾರ್ಮಾ ಕಂಪನಿಯಲ್ಲಿ ಸ್ಫೋಟ: 7 ಕಾರ್ಮಿಕರು ಸಾವು, 30 ಮಂದಿಗೆ ಗಾಯ
ಅಚ್ಯುತಪುರಂ ವಿಶೇಷ ಆರ್ಥಿಕ ವಲಯದಲ್ಲಿರುವ ಎಸ್ಸೆಂಟಿಯಾ ಕಂಪನಿಯಲ್ಲಿ ಈ ಸ್ಫೋಟ ಸಂಭವಿಸಿದೆ.

Kadapa: ಮಕ್ಕಳಿಗೆ ವಿದ್ಯುತ್ ತಂತಿ ಸ್ಪರ್ಶ; ಓರ್ವ ಸಾವು, ಮತ್ತೋರ್ವ ಗಂಭೀರ! Video
ಕಡಪದ ಅಗಡಿ ಬೀದಿಯಲ್ಲಿ ಈ ಘಟನೆ ಬುಧವಾರ ನಡೆದಿದ್ದು, ಮಧ್ಯಾಹ್ನ ತನ್ವೀರ್ (11) ಮತ್ತು ಆದಂ (10) ಸೈಕಲ್ ನಲ್ಲಿ ಶಾಲೆಗೆ ಹೋಗುತ್ತಿದ್ದರು. ಸೈಕಲ್ ನಲ್ಲಿ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ವಿದ್ಯುತ್ ತಂತಿ ತಗುಲಿದ್ದು ಈ ವೇಳೆ ತನ್ವೀರ್ ಎಂಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Khammam Bike Accident: ವೇಗವಾಗಿ ಬಂದು ನಿಂತಿದ್ದ ಲಾರಿ ಢಿಕ್ಕಿ; ಸ್ಕೂಟಿಯಲ್ಲಿದ್ದ ಮೂವರ ಸಾವು! Video
ಮೂವರು ಯುವಕರ ತಂಡ ದ್ವಿಚಕ್ರವಾಹನದಲ್ಲಿ ವೇಗವಾಗಿ ಬಂದಿದೆ. ಈ ವೇಳೆ ನಿಯಂತ್ರಣ ತಪ್ಪಿದ ಬೈಕ್ ನಲ್ಲಿದ್ದ ಸವಾರರು ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿಗೆ ಢಿಕ್ಕಿ ಹೊಡೆದಿದ್ದಾರೆ. ಢಿಕ್ಕಿ ಹೊಡೆದ ರಭಸಕ್ಕೆ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರನ ತಲೆಯ ಮೆದುಳು ಹೊರಗೆ ಬಂದಿದೆ.

ಕೇಂದ್ರ ಬಜೆಟ್ 2024: ನಾಯ್ಡು-ನಿತೀಶ್ ರಾಜ್ಯಗಳಿಗೆ ಬಂಪರ್ ಕೊಡುಗೆ; ಬಿಹಾರ ರಸ್ತೆ ಯೋಜನೆಗಳಿಗೆ 26,000 ಕೋಟಿ ರೂ. ಘೋಷಣೆ
ಮಂಗಳವಾರ ಸಂಸತ್‌ನಲ್ಲಿ ತಮ್ಮ ಸತತ ಏಳನೇ ಬಜೆಟ್ ಮಂಡಿಸಿದ ಅವರು, ಬಿಜೆಪಿ ಮಿತ್ರ ಪಕ್ಷಗಳ ಬೇಡಿಕೆಗಳನ್ನು ತಣಿಸುವ ಮೂಲಕ ಅವುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಕೇಂದ್ರ ಸರ್ವಪಕ್ಷ ಸಭೆ: ಬಿಹಾರಕ್ಕೆ JD(U), ಆಂಧ್ರ ಪ್ರದೇಶಕ್ಕೆ YSRCP ವಿಶೇಷ ಸ್ಥಾನಮಾನಕ್ಕೆ ಒತ್ತಾಯ
ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು NEET-UG ಪೇಪರ್ ಸೋರಿಕೆ, ಇಡಿ ಮತ್ತು ಸಿಬಿಐನಂತಹ ಕೇಂದ್ರೀಯ ಸಂಸ್ಥೆಗಳ ದುರ್ಬಳಕೆ ಮತ್ತು ಉಪ ಸಭಾಪತಿ ಸ್ಥಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಇಂದು ಪ್ರಸ್ತಾಪಿಸಿದರು.

ಉದ್ಯೋಗ ಮೀಸಲಾತಿ ವಿವಾದ: ಕರ್ನಾಟಕದ ಖಾಸಗಿ ಕಂಪನಿಗಳಿಗೆ ಆಂಧ್ರ ಪ್ರದೇಶ ಗಾಳ; ಸರ್ಕಾರ ಕಿಡಿ
ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರ ಪುತ್ರ, ಸಚಿವ ನಾರಾ ಲೋಕೇಶ್ ಅವರು ನಾಸ್ಕಾಮ್ಗೆ ತಮ್ಮ ರಾಜ್ಯಕ್ಕೆ ಬರಲು ವಿಶೇಷ ಆಹ್ವಾನ ನೀಡಿದ್ದಾರೆ. ಕಂಪನಿಯ ಆಕ್ಷೇಪವನ್ನು ತಮ್ಮ ಸರ್ಕಾರ ಅರ್ಥ ಮಾಡಿಕೊಂಡಿದೆ. ಆಂಧ್ರದಲ್ಲಿ ಐಟಿ ಸೇವೆಗಳನ್ನು ವಿಸ್ತರಿಸಬಹುದು ಎಂದು ಕಂಪನಿಗೆ ತಿಳಿಸಿದ್ದಾರೆ.

Video: ತಿರುಮಲದಲ್ಲಿ ದೇವರ ದರ್ಶನಕ್ಕೆ ತೆರಳುತ್ತಿದ್ದಾಗ ತಲೆ ಮೇಲೆ ಬಿದ್ದ ಮರ, ಮಹಿಳೆ ಆಸ್ಪತ್ರೆಗೆ ದಾಖಲು!
ತಿರುಮಲ ಕ್ಷೇತ್ರದ ಜಪಾಲಿ ಆಂಜನೇಯಸ್ವಾಮಿ ಕ್ಷೇತ್ರದಲ್ಲಿ ಈ ಘಟನೆ ನಡೆದಿದ್ದು, ದೇವರ ದರ್ಶನಕ್ಕೆ ಹೋಗುತ್ತಿದ್ದ ಮಹಿಳೆಯ ಮೇಲೆ ಇದ್ದಕ್ಕಿದ್ದಂತೆ ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ.

