alive

ಮಧ್ಯ ಪ್ರದೇಶ: ಪ್ರತಿಭಟನೆ ನಡೆಸುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಮಣ್ಣು ಸುರಿದು ಜೀವಂತ ಸಮಾಧಿಗೆ ಯತ್ನ! Video
ಮಧ್ಯ ಪ್ರದೇಶದ ರೇವಾ ಜಿಲ್ಲೆಯ ಹಿನೌಟಾದಲ್ಲಿ ಎರಡು ಕುಟುಂಬಗಳ ನಡುವೆ ಜಮೀನು ಜಗಳ ನಡೆಯುತ್ತಿತ್ತು. ಒಂದು ಕಡೆಯ ಗುಂಪು ಜಮೀನಿನ ಮೂಲಕ ರಸ್ತೆ ನಿರ್ಮಾಣ ಕಾಮಗಾರಿ ಮಾಡುತ್ತಿದ್ದರು. ಅದನ್ನು ಇನ್ನೊಂದು ಕಡೆಯ ಗುಂಪು ವಿರೋಧಿಸುತ್ತಿತ್ತು ಎಂದು ತಿಳಿದು ಬಂದಿದೆ.

ಅಮೆಜಾನ್: ವಿಮಾನ ಅಪಘಾತ, ಎರಡು ವಾರಗಳ ನಂತರ ಜೀವಂತವಾಗಿ ಪತ್ತೆಯಾದ ನಾಲ್ಕು ಮಕ್ಕಳು!
ಕೊಲಂಬಿಯಾದ ಅಮೆಜಾನ್ನಲ್ಲಿ ಎರಡು ವಾರಗಳ ಹಿಂದೆ ಸಂಭವಿಸಿದ ವಿಮಾನ ಅಪಘಾತದ ನಂತರ 11 ತಿಂಗಳ ಮಗು ಸೇರಿದಂತೆ ನಾಲ್ಕು ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಅಧ್ಯಕ್ಷ ಗುಸ್ಟಾವೊ ಪೆಟ್ರೋ ಬುಧವಾರ ಹೇಳಿದ್ದಾರೆ.

ಸಲ್ಮಾನ್ ರಶ್ದಿ ಜೀವಂತ, ಪರಿಸ್ಥಿತಿ ಮೇಲ್ವಿಚಾರಣೆ: ನ್ಯೂಯಾರ್ಕ್ ಗವರ್ನರ್
ವೇದಿಕೆ ಮೇಲೆಯೇ ಚಾಕು ಇರಿತಕ್ಕೊಳಗಾಗಿರುವ ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರನ್ನು ಸುರಕ್ಷಿತವಾಗಿ ಏರ್ ಲಿಫ್ಟ್ ಮಾಡಿದ ನಂತರ ಜೀವಂತವಾಗಿದ್ದಾರೆ. ಪರಿಸ್ಥಿತಿಯನ್ನು ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ನ್ಯೂಯಾರ್ಕ್ ಗವರ್ನರ್ ಕ್ಯಾಥಿ ಹೋಚುಲ್ ಶುಕ್ರವಾರ ತಿಳಿಸಿದ್ದಾರೆ.

ಪ್ರಧಾನ ಕಸುಬು: ನಾರಾಯಣಪುರದಲ್ಲಿ ಸಾಂಪ್ರಾದಾಯಿಕ ಕುಂಬಾರಿಕೆ ಇನ್ನೂ ಜೀವಂತ!
ಮಹಾನಗರದಿಂದ ಸುಮಾರು 25 ಕಿಮೀ ದೂರದಲ್ಲಿರುವ ನಾರಾಯಣಪುರದಲ್ಲಿ ಇಂದಿಗೂ ಕುಂಬಾರಿಕೆ ಜೀವಂತವಾಗಿದೆ. ನಾರಾಯಣಪುರ ಮತ್ತು ಕುಂಬಾರಿಕೆಗೆ ಎಂಟು ದಶಕಗಳಿಗೂ ಹಿಂದಿನ ಅವಿನಾಭಾವ ಸಂಬಂಧವಿದೆ. ಇಂದು ಈ ಗ್ರಾಮವು ತನ್ನ ಮಣ್ಣಿನ ಕುಶಲಕರ್ಮಿಗಳಿಗಿಂದ ಪ್ರಾಮುಖ್ಯತೆ ಪಡೆದುಕೊಂಡಿದೆ.

ಸತ್ತ 7 ಗಂಟೆಗಳ ತರುವಾಯ ಶವಾಗಾರದ ಫ್ರೀಜರ್ ನಿಂದ ಎದ್ದು ಕೂತ ವ್ಯಕ್ತಿ
ಆತನ ಶವವನ್ನು ಅಲ್ಲಿನ ಸಿಬ್ಬಂದಿ ಶವಾಗಾರಕ್ಕೆ ಸ್ಥಳಾಂತರಿಸಿದರು. ಆತನ ಮನೆಯವರು ಆಸ್ಪತ್ರೆಗೆ ಬಂದು ಶವವನ್ನು ಗುರುತಿಸಿ, ಮರಣೋತ್ತರ ಪರೀಕ್ಷೆ ನಡೆಸಲು ಅನುಮತಿ ನೀಡಿ ಸಹಿಯನ್ನೂ ಹಾಕಿದರು.

ಭೂಗತ ಪಾತಕಿ ಛೋಟಾ ರಾಜನ್ ಸತ್ತಿಲ್ಲ: ಏಮ್ಸ್ ಸ್ಪಷ್ಟನೆ
ಭೂಗತ ಪಾತಕಿ ಛೋಟಾ ರಾಜನ್ ಸತ್ತಿಲ್ಲ, ಜೀವಂತವಾಗಿರುವುದಾಗಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮಗನಿಂದ ಸಮಾಧಿಯಾದ ತಾಯಿ ಮೂರು ದಿನಗಳ ನಂತರ ಬದುಕಿ ಬಂದಾಗ!
ನಿಷ್ಕರುಣಿ ಮಗನೊಬ್ಬ 79 ವರ್ಷದ ತನ್ನ ತಾಯಿಯನ್ನು ಜೀವಂತವಾಗಿರುವಾಗಿಯೇ ಸಮಾಧಿ ಮಾಡಿರುವ ಘಟನೆ ಉತ್ತರ ಚೀನಾದಲ್ಲಿ ನಡೆದಿದೆ. ಮೂರು ದಿನಗಳ ಬಳಿಕ ಆಶ್ಚರ್ಯಕರ ರೀತಿಯಲ್ಲಿ ತಾಯಿ ಕೊಳೆತ ವಸ್ತ್ರದೊಂದಿಗೆ ಜೀವಂತವಾಗಿ ಪತ್ತೆಯಾಗಿದ್ದು, ಹೀನಕೃತ್ಯ ವೆಸಗಿದ ವ್ಯಕ್ತಿಯ ವಿರುದ್ಧ ಪೊಲೀಸರು ಕೊಲೆ ಯತ್ನ ದೂರು ದಾಖಲಿಸಿದ್ದಾರೆ.

ಬೀದರ್ : ಏಕಾಏಕೀ ಹೊತ್ತಿ ಉರಿದ ಕಾರು, ಮಹಿಳೆ ಸಜೀವ ದಹನ
ನಡು ರಸ್ತೆಯಲ್ಲೇ ಕಾರೊಂದು ಹೊತ್ತಿ ಉರಿದ ಪರಿಣಾಮ ಮಹಿಳೆಯೊಬ್ಬರು ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಹುಮನಾಬಾದ್ ತಾಲೂಕಿನ ನಿರ್ಣಾ ಕ್ರಾಸ್ ಬಳಿ ಗುರುವಾರ ಬೆಳಗ್ಗೆ ನಡೆದಿದೆ.

ಗಟ್ಟಿ ಜೀವ: ಸತ್ತಿದೆ ಎಂದು ಮಣ್ಣಿನಲ್ಲಿ ಹೂತ ಬಳಿಕ ಬದುಕಿ ಬಂದ ನವಜಾತ ಶಿಶು!
ಸತ್ತಿದೆ ಎಂದು ಮಣ್ಣಿನಲ್ಲಿ ಹೂತಿದ್ದರೂ ನವಜಾತ ಶಿಶುವೊಂದು ಬದುಕಿ ಬಂದಿರುವ ಪವಾಡಸದೃಶ ಘಟನೆಯೊಂದು ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.

