ಮಗನಿಂದ ಸಮಾಧಿಯಾದ ತಾಯಿ ಮೂರು ದಿನಗಳ ನಂತರ ಬದುಕಿ ಬಂದಾಗ!
ನಿಷ್ಕರುಣಿ ಮಗನೊಬ್ಬ 79 ವರ್ಷದ ತನ್ನ ತಾಯಿಯನ್ನು ಜೀವಂತವಾಗಿರುವಾಗಿಯೇ ಸಮಾಧಿ ಮಾಡಿರುವ ಘಟನೆ ಉತ್ತರ ಚೀನಾದಲ್ಲಿ ನಡೆದಿದೆ. ಮೂರು ದಿನಗಳ ಬಳಿಕ ಆಶ್ಚರ್ಯಕರ ರೀತಿಯಲ್ಲಿ ತಾಯಿ ಕೊಳೆತ ವಸ್ತ್ರದೊಂದಿಗೆ ಜೀವಂತವಾಗಿ ಪತ್ತೆಯಾಗಿದ್ದು, ಹೀನಕೃತ್ಯ ವೆಸಗಿದ ವ್ಯಕ್ತಿಯ ವಿರುದ್ಧ ಪೊಲೀಸರು ಕೊಲೆ ಯತ್ನ ದೂರು ದಾಖಲಿಸಿದ್ದಾರೆ.

ಬೀಜಿಂಗ್: ನಿಷ್ಕರುಣಿ ಮಗನೊಬ್ಬ 79 ವರ್ಷದ ತನ್ನ ತಾಯಿಯನ್ನು ಜೀವಂತವಾಗಿರುವಾಗಿಯೇ ಸಮಾಧಿ ಮಾಡಿರುವ ಘಟನೆ ಉತ್ತರ ಚೀನಾದಲ್ಲಿ ನಡೆದಿದೆ. ಮೂರು ದಿನಗಳ ಬಳಿಕ ಆಶ್ಚರ್ಯಕರ ರೀತಿಯಲ್ಲಿ ತಾಯಿ ಕೊಳೆತ ವಸ್ತ್ರದೊಂದಿಗೆ ಜೀವಂತವಾಗಿ ಪತ್ತೆಯಾಗಿದ್ದು, ಹೀನಕೃತ್ಯ ವೆಸಗಿದ ವ್ಯಕ್ತಿಯ ವಿರುದ್ಧ ಪೊಲೀಸರು ಕೊಲೆ ಯತ್ನ ದೂರು ದಾಖಲಿಸಿದ್ದಾರೆ.
ಮೇ 2 ರಂದು ಪತಿ ತನ್ನ ತಾಯಿಯನ್ನು ಒಂದು ರೀತಿಯ ಚಕ್ರದ ಕೈಬಂಡಿಯಲ್ಲಿ ಕರೆದೊಯ್ದಿದ್ದಾನೆ ಎಂದು ವ್ಯಕ್ತಿಯ ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ.
ಮೂರು ದಿನಗಳ ಬಳಿಕ ಮಹಿಳೆ ಹಿಂತಿರುಗಿ ಬಾರದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಶಾಂಕ್ಸಿ ಪ್ರಾಂತ್ಯದ ಜಿಂಗ್ ಬೈಯನ್ ಕೌಂಟಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಸಮಾಧಿಯಿಂದ ಹೊರಗೆ ಎತ್ತುವಂತೆ ಸಹಾಯಕ್ಕಾಗಿ ವೃದ್ಧ ಮಹಿಳೆ ಮೆಲು ಧ್ವನಿಯಲ್ಲಿ ಕೂಗುತ್ತಿದ್ದರು. ತದನಂತರ ಆಕೆಯನ್ನು ರಕ್ಷಣೆ ಮಾಡಲಾಯಿತು ಎಂದು ರಕ್ಷಣೆ ಮಾಡಿದ್ದವರು ತಿಳಿಸಿರುವುದಾಗಿ ಸ್ಟೇಟ್ ಮೀಡಿಯಾ ಶುಕ್ರವಾರ ವರದಿ ಮಾಡಿದೆ.ಪಾಪಿ ಮಗನನ್ನು 58 ವರ್ಷದ ಯನ್ ಮತ್ತು ಆತನ ತಾಯಿ 79 ವರ್ಷದ ವಾಂಗ್ ಎಂದು ಉಪನಾಮಗಳಿಂದ ಗುರುತಿಸಲಾಗಿದೆ.
ಭಾಗಶಃ ಪಾರ್ಶ್ವವಾಯುವಿಗೆ ತುತ್ತಾಗಿದ್ದ ತಾಯಿಯನ್ನು ನಿರಂತರವಾಗಿ ಆರೈಕೆ ಮಾಡುತ್ತಿದ್ದರಿಂದ ಮಗ ಬೇಸರಗೊಂಡಿದ್ದ ಎಂದು ಚೀನಾ ಡೈಲಿ ವರದಿ ಮಾಡಿದೆ.ವಿಚಾರಣೆ ಮುಂದುವರೆದಿದೆ ಆದರೆ, ಹೆಚ್ಚಿನ ಮಾಹಿತಿ ನೀಡಲು ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಚೀನಾದ ಹೆಚ್ಚಿನ ಭಾಗಗಳಲ್ಲಿ ಸಾರ್ವಜನಿಕ ನೆರವಿನ ಕೊರತೆಯಿದೆ. ವಿಶೇಷವಾಗಿ ಬಡ ಗ್ರಾಮೀಣ ಪ್ರದೇಶಗಳು ಮತ್ತು ಕುಟುಂಬಗಳು ವಯಸ್ಸಾದವರ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸಾಮಾನ್ಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


