Al Qaeda

ಅಲ್ ಖೈದಾ ಜೊತೆ ನಂಟು ಆರೋಪ: ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆಯಲ್ಲಿ ಟೆಕ್ಕಿ ಬಂಧನ
ಬಂಧಿತ ಆರೋಪಿಯನ್ನು ಜುಬೈರ್ ಹಂಗರ್ಗೇಕರ್ ಎಂದು ಗುರುತಿಸಲಾಗಿದೆ. ಈತನ ಮೇಲೆ ಕಳೆದ ತಿಂಗಳಿನಿಂದ ಎಟಿಎಸ್ ಸಿಬ್ಬಂದಿ ತೀವ್ರ ನಿಗಾ ಇಟ್ಟಿದ್ದರು. ಬಂಧನದ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Al Qaeda Arrest: ಮಾಹಿತಿ ನೀಡದೆ SOP ಉಲ್ಲಂಘಿಸಿದೆ ಗುಜರಾತ್ ATS- ಗೃಹ ಸಚಿವ ಪರಮೇಶ್ವರ್
ಬೆಂಗಳೂರಿನಲ್ಲಿ ಸ್ಲೀಪರ್ ಸೆಲ್ಗಳು ಸಕ್ರಿಯವಾಗಿವೆ ಎಂದು ಈ ಹಿಂದೆ ವರದಿಗಳಿದ್ದವು. ತನಿಖಾ ಸಂಸ್ಥೆಗಳು ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದವು. ಈ ರೀತಿ ಸ್ಲೀಪರ್ ಸೆಲ್ ಎಲ್ಲ ರಾಜ್ಯಗಳಲ್ಲಿದ್ದಾರೆ, ಯಾವ್ಯಾವುದೋ ಕಾರಣಕ್ಕೆ ಅವರ ಗುರುತು ಸಿಗಲ್ಲ.

Al Qaeda ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು: ಗುಜರಾತ್ ATS ಕಾರ್ಯಾಚರಣೆ; ಬೆಂಗಳೂರಿನಲ್ಲಿ ಮಹಿಳೆ ಬಂಧನ
ಜಾರ್ಖಂಡ್ ಮೂಲದ ಶಮಾ ಪರ್ವೀನ್ ಬಂಧಿತ ಮಹಿಳೆ. ಹೆಬ್ಬಾಳದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಹೋದರನ ಮನೆಯಲ್ಲಿ ಶಮಾ ಪರ್ವೀನ್ ನೆಲಸಿದ್ದಳು.

ಅಲ್ ಖೈದಾ ಜೊತೆ ಪಿಎಫ್ಐ ಸಂಪರ್ಕ ಹೊಂದಿದೆ: ರಾಷ್ಟ್ರೀಯ ತನಿಖಾ ಸಂಸ್ಥೆ ವರದಿ
ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯು ಅಲ್ ಖೈದಾದೊಂದಿಗೆ ಸಂಪರ್ಕ ಹೊಂದಿದೆ ಎಂದು ಕೇರಳದ ನ್ಯಾಯಾಲಯದ ಮುಂದೆ ಸಲ್ಲಿಸಿದ ವರದಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಹೇಳಿದೆ.

ಕಾಬುಲ್ನಲ್ಲಿ ಅಲ್ ಖೈದಾ ಮುಖ್ಯಸ್ಥನನ್ನು ಕೊಂದ ಅಮೆರಿಕದ ವೈಮಾನಿಕ ದಾಳಿಗೆ ತಾಲಿಬಾನ್ ಖಂಡನೆ
ಅಮೆರಿಕ ಭದ್ರತಾ ಪಡೆಗಳು ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ನಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ, ಅಲ್ಖೈದಾ ಮುಖ್ಯಸ್ಥ ಅಯ್ಮಾನ್ ಅಲ್ ಜವಾಹಿರಿಯನ್ನು ಹತ್ಯೆ ಮಾಡಿವೆ. ಈ ವಿಚಾರವನ್ನು ತಾಲಿಬಾನ್ ವಕ್ತಾರರು ಖಚಿತಪಡಿಸಿದ್ದು, ವಾರಾಂತ್ಯದಲ್ಲಿ ಕಾಬೂಲ್ನ ನಿವಾಸದ ಮೇಲೆ ಅಮೆರಿಕ ಡ್ರೋನ್ ದಾಳಿ ನಡೆಸಿದೆ ಎಂದಿದ್ದಾರೆ.

ಅಫ್ಗಾನ್ ಜೈಲಿನಿಂದ ಹೊರಬಂದ ಖೈದಿಗಳು ಐಸಿಸ್, ಅಲ್ಖೈದಾ ಉಗ್ರ ಸಂಘಟನೆಗೆ ಸೇರ್ಪಡೆ
ತಾಲಿಬಾನ್ ಆಡಳಿತದಲ್ಲಿ ಅಫ್ಗಾನ್ ಜೈಲಿನಿಂದ ಬಿಡುಗಡೆಗೊಂಡ ಕೈದಿಗಳು ಇಸ್ಲಾಮಿಕ್ ಸ್ಟೇಟ್(ಐಎಸ್, ಐಸಿಸ್) ಮತ್ತು ಅಲ್-ಖೈದಾ ಭಯೋತ್ಪಾದಕ ಗುಂಪುಗಳನ್ನು ಸೇರಿಕೊಂಡಿದ್ದಾರೆ ಎಂದು ಸಾಮೂಹಿಕ ಭದ್ರತಾ ಒಪ್ಪಂದ ಸಂಸ್ಥೆಯ ಜಂಟಿ ಸಿಬ್ಬಂದಿ ಮುಖ್ಯಸ್ಥ ಅನಾಟೊಲಿ ಸಿಡೊರೊವ್ ಹೇಳಿದ್ದಾರೆ.

ಅಫ್ಘಾನಿಸ್ತಾನದೊಳಗೆ ಅಲ್ ಖೈದಾ ಮರುಹುಟ್ಟು ಪಡೆದುಕೊಳ್ಳಲಿದೆ: ಸಿಐಎ ಗುಪ್ತಚರ ಅಧಿಕಾರಿ ಭವಿಷ್ಯ
ಉಗ್ರಗಾಮಿಗಳಿಗೆ ಅಫ್ಘಾನಿಸ್ತಾನ ಸ್ವರ್ಗವಾಗಲಿದೆ, ತಾಲಿಬಾನ್ ಉಗ್ರಗಾಮಿಗಳನ್ನು ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಲಿದೆ ಎಂದು ಅವರು ಮುನ್ಸೂಚನೆ ನೀಡಿದ್ದಾರೆ.

ಇಸ್ಲಾಂ ಮೂಲಭೂತವಾದ ಜಗತ್ತಿನ ಅತಿ ದೊಡ್ಡ ವಿಪತ್ತು: ಬ್ರಿಟನ್ ಮಾಜಿ ಪ್ರಧಾನಿ ಎಚ್ಚರಿಕೆ
ಇಸ್ಲಾಂ ಮೂಲಭೂತವಾದಿಗಳಾದ ತಾಲಿಬಾನಿಗಳನ್ನು ಶಸ್ತ್ರಾಸ್ತ್ರ, ಸೇನೆ ಬಳಸಿ ಮಟ್ಟ ಹಾಕಬಹುದು. ಆದರೆ ಇಸ್ಲಾಂ ಮೂಲಭೂತವಾದದ ವಿಚಾರಧಾರೆಯನ್ನು ಮಟ್ಟ ಹಾಕುವುದು ಹೇಗೆ ಎನ್ನುವುದು ನಮ್ಮ ಮುಂದಿರುವ ಸವಾಲು.

ತಾಲಿಬಾನ್ ಮತ್ತು ಅಲ್ ಖೈದಾ ನಡುವೆ ಬೇರ್ಪಡಿಸಲಾಗದ ನಂಟು: ತಜ್ಞರ ವರದಿ
ತಾಲಿಬಾನ್ ಮತ್ತು ಅಲ್ ಖೈದಾ ವಿಚಾರಧಾರೆಗಳಲ್ಲಿ ಸಾಮ್ಯತೆ ಇದ್ದು, ಅವೆರಡೂ ಸಂಘಟನೆಗಳು ಒಂದೇ ರೀತಿ ಹೋರಾಟ ನಡೆಸಿವೆ ಹಾಗೂ ಜಗತ್ತಿನ ವಿರೋಧ ಕಟ್ಟಿಕೊಂಡಿವೆ. ಎಲ್ಲಕ್ಕಿಂತ ಹೆಚ್ಚಾಗಿ ಅವೆರಡೂ ಸಂಘಟನೆಗಳ ನಡುವೆ ವಿವಾಹ ಸಂಬಂಧಗಳೂ ಏರ್ಪಟ್ಟಿವೆ.

