ವಿದೇಶ

ಅಫ್ಗಾನ್‌ ಜೈಲಿನಿಂದ ಹೊರಬಂದ ಖೈದಿಗಳು ಐಸಿಸ್‌, ಅಲ್‌ಖೈದಾ ಉಗ್ರ ಸಂಘಟನೆಗೆ ಸೇರ್ಪಡೆ

ತಾಲಿಬಾನ್‌ ಆಡಳಿತದಲ್ಲಿ ಅಫ್ಗಾನ್‌ ಜೈಲಿನಿಂದ ಬಿಡುಗಡೆಗೊಂಡ ಕೈದಿಗಳು ಇಸ್ಲಾಮಿಕ್ ಸ್ಟೇಟ್(ಐಎಸ್‌, ಐಸಿಸ್‌) ಮತ್ತು ಅಲ್-ಖೈದಾ ಭಯೋತ್ಪಾದಕ ಗುಂಪುಗಳನ್ನು ಸೇರಿಕೊಂಡಿದ್ದಾರೆ ಎಂದು ಸಾಮೂಹಿಕ ಭದ್ರತಾ ಒಪ್ಪಂದ ಸಂಸ್ಥೆಯ ಜಂಟಿ ಸಿಬ್ಬಂದಿ ಮುಖ್ಯಸ್ಥ ಅನಾಟೊಲಿ ಸಿಡೊರೊವ್ ಹೇಳಿದ್ದಾರೆ.

ಅಫ್ಗಾನ್‌ ಜೈಲಿನಿಂದ ಹೊರಬಂದ ಖೈದಿಗಳು ಐಸಿಸ್‌, ಅಲ್‌ಖೈದಾ ಉಗ್ರ ಸಂಘಟನೆಗೆ ಸೇರ್ಪಡೆ
ಸಂಗ್ರಹ ಚಿತ್ರ
Published On :

ಮಾಸ್ಕೋ: ತಾಲಿಬಾನ್‌ ಆಡಳಿತದಲ್ಲಿ ಅಫ್ಗಾನ್‌ ಜೈಲಿನಿಂದ ಬಿಡುಗಡೆಗೊಂಡ ಕೈದಿಗಳು ಇಸ್ಲಾಮಿಕ್ ಸ್ಟೇಟ್(ಐಎಸ್‌, ಐಸಿಸ್‌) ಮತ್ತು ಅಲ್-ಖೈದಾ ಭಯೋತ್ಪಾದಕ ಗುಂಪುಗಳನ್ನು ಸೇರಿಕೊಂಡಿದ್ದಾರೆ ಎಂದು ಸಾಮೂಹಿಕ ಭದ್ರತಾ ಒಪ್ಪಂದ ಸಂಸ್ಥೆಯ ಜಂಟಿ ಸಿಬ್ಬಂದಿ ಮುಖ್ಯಸ್ಥ ಅನಾಟೊಲಿ ಸಿಡೊರೊವ್ ಹೇಳಿದ್ದಾರೆ.

ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಅಫ್ಘಾನ್ ಕಾರಾಗೃಹಗಳಿಂದ ಬಿಡುಗಡೆಗೊಂಡವರು ಐಸಿಸ್ ಸೇರ್ಪಡೆಗೊಳ್ಳುತ್ತಿರುವುದರ ಜೊತೆಗೆ, ತಾಲಿಬಾನ್‌ ವಿರೋಧಿ ಉಗ್ರರನ್ನು ನೇಮಕ ಮಾಡಿಕೊಳ್ಳುತ್ತಿರುವುದರಿಂದ ಸಂಘಟನೆಗಳು ಬಲಗೊಳ್ಳುತ್ತಿವೆ ಎಂದರು.

ತಾಲಿಬಾನ್ ದೇಶವನ್ನು ಸ್ವಾಧೀನಪಡಿಸಿಕೊಂಡ ನಂತರ 3 ದಶಲಕ್ಷಕ್ಕೂ ಹೆಚ್ಚು ಅಫ್ಘಾನ್ ಜನರು ತಮ್ಮ ದೇಶವನ್ನು ತೊರೆದಿದ್ದು, ಇರಾನ್‌ ಮತ್ತು ಪಾಕಿಸ್ತಾನಕ್ಕೆ ವಲಸೆ ಹೋಗಿದ್ದಾರೆ ಎಂದು ಸಿಡೊರೊವ್ ಮಾಹಿತಿ ನೀಡಿದ್ದಾರೆ.

ತಾಲಿಬಾನಿಗಳು ಅಫ್ಘಾನ್ ಜೈಲಿನಲ್ಲಿದ್ದ ಸಾವಿರಾರು ಖೈದಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿದ್ದರು. ಇದೀಗ ಅವರೆಲ್ಲಾ ಉಗ್ರ ಸಂಘಟನೆಗಳಿಗೆ ಸೇರ್ಪಡೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.