Air India

ಪ್ರೌಡ್ ಆಫ್ ಯೂ: ಕೊರೋನಾ ವಿರುದ್ಧದ ಭಾರತದ ಹೋರಾಟವನ್ನು ಶ್ಲಾಘಿಸಿದ ಪಾಕಿಸ್ತಾನ
ವಿಶ್ವದ 190 ರಾಷ್ಟ್ರಗಳನ್ನು ಕಾಡುತ್ತಿರುವ ಮಾರಕ ಕೊರೋನಾ ವೈರಸ್ ವಿರುದ್ಧ ಭಾರತದ ಹೋರಾಟಕ್ಕೆ ಶತ್ರು ದೇಶ ಪಾಕಿಸ್ತಾನ ಕೂಡ ತಲೆಬಾಗಿದ್ದು, ಭಾರತದ ಈ ನಿರ್ಣಾಯಕ ಹೋರಾಟಕ್ಕೆ 'ಪ್ರೌಡ್ ಆಫ್ ಯೂ' ಎಂದು ಶ್ಲಾಘಿಸಿದೆ.

ಕೊರೋನಾ ಲಾಕ್'ಡೌನ್ ಎಫೆಕ್ಟ್: ಏಪ್ರಿಲ್ 30ರವರೆಗೂ ಬುಕಿಂಗ್ ಸ್ಥಗಿತಗೊಳಿಸಿದ ಏರ್ ಇಂಡಿಯಾ
ಕೊರೋನಾ ನಿಗ್ರಹಕ್ಕೆ ಘೋಷಿಸಲಾಗಿದ್ದ ಏ.14ರವರೆಗಿನ ಎಲ್ಲಾ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಇತ್ತೀಚೆಗೆ ನಿರ್ಬಂಧಿಸಲಾಗಿತ್ತು. ಆದರೆ, ಮಹತ್ವದ ಬೆಳವಣಿಗೆಯೊಂದರಲ್ಲಿ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ತನ್ನ ದೇಶೀಯ ಮತ್ತು ಅಂತರಾಷ್ಟ್ರೀಯ ಹಾರಾಟಗಳಿಗೆ ಟಿಕೆಟ್ ಬುಕ್ಕಿಂಗ್ ನಿಷೇಧವನ್ನು ಏ.30ರವರೆಗೂ ವಿಸ್ತರಿಸಿದೆ.

ಲಾಕ್ ಡೌನ್: ದೇಶಾದ್ಯಂತ ವೈದ್ಯಕೀಯ ಸಲಕರಣೆ ಸಾಗಾಟಕ್ಕೆ ಏರ್ ಇಂಡಿಯಾ ನೆರವು
ಕೊರೋನಾವೈರಸ್ ವಿರುದ್ಧ ಹೋರಾಟದ ಭಾಗವಾಗಿ ಕೋವಿಡ್ ಪರೀಕ್ಷೆಗೆ ಅಗತ್ಯವಾದ ವೈದ್ಯಕೀಯ ಉಪಕರಣಗಳು ಮತ್ತು ಅಗತ್ಯ ವಸ್ತುಗಳನ್ನು ಪೂರೈಸಲು ರಾಜ್ಯ ಸರ್ಕಾರಗಳೊಂದಿಗೆ ನಾಗರಿಕ ವಿಮಾನಯಾನ ಸಚಿವಾಲಯ ಸಮನ್ವಯ ಸಾಧಿಸುತ್ತಿದೆ ಎಂದು ಸಚಿವಾಲಯ ಸೋಮವಾರ ಹೇಳಿದೆ.

ವಾಯುಯಾನ ಬಂದ್: ಏರ್ ಇಂಡಿಯಾಗೆ ದಿನಕ್ಕೆ 35 ಕೋಟಿ ನಷ್ಟ
ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ನಂತರ ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ವಾಯುಯಾನ ಸಂಸ್ಥೆಯಾದ ಏರ್ ಇಂಡಿಯಾ ದಿನಕ್ಕೆ 30-35 ಕೋಟಿ ರೂ. ನಷ್ಟವನ್ನು ಅನುಭವಿಸುವ ನಿರೀಕ್ಷೆಯಿದೆ ಎಂದು ಮೂಲವೊಂದು ತಿಳಿಸಿದೆ.

ಭಾರತೀಯರ ಸ್ಥಳಾಂತರದಲ್ಲಿ ಅವಿರತ ಸೇವೆ: ಏರ್ ಇಂಡಿಯಾದ ಧೈರ್ಯ ಕೊಂಡಾಡಿದ ಪ್ರಧಾನಿ ಮೋದಿ
ಕೊರೋನಾ ವೈರಸ್ ಪೀಡಿತ ರಾಷ್ಟ್ರಗಳಿಂದ ಜನರನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ಏರ್ ಇಂಡಿಯಾ ವಿಮಾನ ಸಂಸ್ಥೆಯ ಸಿಬ್ಬಂದಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊಂಡಾಡಿದ್ದಾರೆ.

ಕೋವಿಡ್-19: ಏಪ್ರಿಲ್ 15 ರವರೆಗೆ ಎಲ್ಲಾ ಪ್ರವಾಸಿ ವೀಸಾ ರದ್ದು, ಇಟಲಿ, ದ.ಕೊರಿಯಾಗೆ ಏರ್ ಇಂಡಿಯಾ ಹಾರಾಟ ಸ್ಥಗಿತ
ದೇಶದಲ್ಲಿ ಕೊರೋನಾವೈರಸ್ ಭಯದ ನಡುವೆ ಏರ್ ಇಂಡಿಯಾ ವಿಮಾನ ಸಂಸ್ಥೆ ಇಟಲಿ ಹಾಗೂ ದಕ್ಷಿಣ ಕೊರಿಯಾಗೆ ತೆರಳುವ ತನ್ನೆಲ್ಲಾ ವಿಮಾನಗಳನ್ನು ಮಾರ್ಚ್ 25 ಹಾಗೂ ಮಾರ್ಚ್ 28 ರವರೆಗೆ ರದ್ದುಗೊಳಿಸಿದೆ ಕೊರೋನಾವೈರಸ್ ಮುನ್ನೆಚ್ಚರಿಕಾ ಕ್ರಮವಾಗಿ ಕೇಂದ್ರ ಸರ್ಕಾರ ಏಪ್ರಿಲ್ 15 ರವರೆಗೆ ಎಲ್ಲಾ ಪ್ರವಾಸಿ ವೀಸಾ ರದ್ದುಪಡಿಸಿದ ನಂತರ ವಿಮಾನಯಾನ ಸಂಸ್ಥೆ ಈ ಕ್ರಮಕ್ಕೆ ಮುಂದಾಗಿದೆ.

ಏರ್ ಇಂಡಿಯಾದಲ್ಲಿ ಶೇ 100 ಪಾಲು ಹೊಂದಲು ಅನಿವಾಸಿ ಭಾರತೀಯರಿಗೆ ಸರ್ಕಾರ ಅನುಮತಿ
ಏರ್ ಇಂಡಿಯಾದಲ್ಲಿ ಶೇ 100 ರಷ್ಟು ಪಾಲನ್ನು ಹೊಂದಲು ಅನಿವಾಸಿ ಭಾರತೀಯರಿಗೆ ಸರ್ಕಾರ ಬುಧವಾರ ಅನುಮತಿ ನೀಡಿದೆ. ವಾಯುಯಾನ ಸಂಸ್ಥೆಯ ಶೇ 100 ರಷ್ಟು ಪಾಲನ್ನು ಸರ್ಕಾರ ಮಾರಾಟ ಮಾಡಲು ಯೋಜಿಸುತ್ತಿರುವ ಸಮಯದಲ್ಲೇ ಈ ನಿರ್ಧಾರ ಹೊರಬಿದ್ದಿದೆ.

ಏರ್ ಇಂಡಿಯಾ ಖರೀದಿ ಪೈಪೋಟಿಗೆ ಅದಾನಿ ಸಮೂಹ?
ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಖರೀದಿಯ ರೇಸ್ ಗೆ ಅದಾನಿ ಸಮೂಹದ ಉದ್ಯಮ ಕೂಡಾ ಹೊಸದಾಗಿ ಸೇರಿಕೊಂಡಿದೆ.

ವುಹಾನ್ ಕಾರ್ಯಾಚರಣೆ: ಏರ್ ಇಂಡಿಯಾ, ಆರೋಗ್ಯ ಸಚಿವಾಲಯಕ್ಕೆ ಪ್ರಧಾನಿ ಮೋದಿ ಶ್ಲಾಘನೆ
ಕೊರೊನಾ ವೈರಾಣು ಸೋಂಕು ವ್ಯಾಪಕವಾಗಿ ಕಾಣಿಸಿಕೊಂಡಿದ್ದ ಚೀನಾ ದೇಶ ವುಹಾನ್ ನಲ್ಲಿನ ಭಾರತೀಯರನ್ನು ಅಲ್ಲಿನ ವಾಪಸ್ ಕರೆತರುವಲ್ಲಿ ಶ್ರಮಿಸಿದ ಏರ್ ಇಂಡಿಯಾ ಮತ್ತು ಆರೋಗ್ಯ ಸಚಿವಾಲಯದ ಅಧಿಕಾರಿಗಳ ಪ್ರಯತ್ನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

