ದೇಶ

ಲಾಕ್ ಡೌನ್: ದೇಶಾದ್ಯಂತ ವೈದ್ಯಕೀಯ ಸಲಕರಣೆ ಸಾಗಾಟಕ್ಕೆ ಏರ್ ಇಂಡಿಯಾ ನೆರವು

ಕೊರೋನಾವೈರಸ್ ವಿರುದ್ಧ ಹೋರಾಟದ ಭಾಗವಾಗಿ ಕೋವಿಡ್ ಪರೀಕ್ಷೆಗೆ ಅಗತ್ಯವಾದ ವೈದ್ಯಕೀಯ ಉಪಕರಣಗಳು ಮತ್ತು ಅಗತ್ಯ ವಸ್ತುಗಳನ್ನು ಪೂರೈಸಲು ರಾಜ್ಯ ಸರ್ಕಾರಗಳೊಂದಿಗೆ ನಾಗರಿಕ ವಿಮಾನಯಾನ ಸಚಿವಾಲಯ ಸಮನ್ವಯ ಸಾಧಿಸುತ್ತಿದೆ ಎಂದು ಸಚಿವಾಲಯ ಸೋಮವಾರ ಹೇಳಿದೆ.

ಲಾಕ್ ಡೌನ್: ದೇಶಾದ್ಯಂತ ವೈದ್ಯಕೀಯ ಸಲಕರಣೆ ಸಾಗಾಟಕ್ಕೆ ಏರ್ ಇಂಡಿಯಾ ನೆರವು
ಸಂಗ್ರಹ ಚಿತ್ರ
Published On :

ನವದೆಹಲಿ: ಕೊರೋನಾವೈರಸ್  ವಿರುದ್ಧ ಹೋರಾಟದ ಭಾಗವಾಗಿ ಕೋವಿಡ್ ಪರೀಕ್ಷೆಗೆ ಅಗತ್ಯವಾದ ವೈದ್ಯಕೀಯ ಉಪಕರಣಗಳು ಮತ್ತು ಅಗತ್ಯ ವಸ್ತುಗಳನ್ನು ಪೂರೈಸಲು ರಾಜ್ಯ ಸರ್ಕಾರಗಳೊಂದಿಗೆ  ನಾಗರಿಕ ವಿಮಾನಯಾನ ಸಚಿವಾಲಯ ಸಮನ್ವಯ ಸಾಧಿಸುತ್ತಿದೆ ಎಂದು ಸಚಿವಾಲಯ ಸೋಮವಾರ ಹೇಳಿದೆ.

"ತುರ್ತು ಆಧಾರದ ಮೇಲೆ ವಿವಿಧ ರಾಜ್ಯಗಳ ಅವಶ್ಯಕತೆಗಳ ಆಧಾರದ ಮೇಲೆ, ಸಚಿವಾಲಯದ ಹಿರಿಯ ಅಧಿಕಾರಿಗಳು ಅಗತ್ಯವಿರುವ ವಸ್ತುಗಳನ್ನು ಒದಗಿಸಲು ಸರಬರಾಜು ಏಜೆನ್ಸಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಅಪೇಕ್ಷಿತ ಸ್ಥಳಗಳಿಗೆ  ವಸ್ತುಗಳ ಪೂರೈಕೆಗೆ  ಏರ್ ಇಂಡಿಯಾ ಮತ್ತು ಸಮೂಹದ ಇತರೆ ವಿಮಾನಗಳು ಸಂಚಾರ ನಡೆಸಲಿದೆ.ಈ ಮೂಲಕ ದೇಶಾದ್ಯಂತ ಸರಬರಾಜು ಕಾರ್ಯಾಚರಣೆ ನಡೆಯಲಿದೆ" ನಾಗರಿಕ ವಿಮಾನಯಾನ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ

 ಈ ವಿಮಾನಗಳಲ್ಲಿ ಅಗತ್ಯ ವಸ್ತುಗಳ ಸಾಗಾಟಕ್ಕೆ  ಸಚಿವಾಲಯವು ಅಧಿಕಾರ ಹೊಂದಿರುವ ಏಜೆನ್ಸಿಗಳು ತಮ್ಮ ಪ್ರದೇಶದ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸುತ್ತವೆ. "ದೇಶದ ಪೂರ್ವ ಮತ್ತು ಈಶಾನ್ಯ ಭಾಗಕ್ಕೆ ಅಗತ್ಯ ವಸ್ತುಗಳ ಪೂರೈಕೆಗಾಗಿ  ದೆಹಲಿಯಿಂದ ಕೋಲ್ಕತ್ತಾಗೆ ಅಲೈಯನ್ಸ್ ಏರ್ ವಿಮಾನವು ಮಾರ್ಚ್ 29, 2020 ರಂದು ಕೋಲ್ಕತಾ, ಗುವಾಹಟಿ, ದಿಬ್ರುಘರ್, ಅಗರ್ತಲಾಕ್ಕೆ ಸಂಚರಿಸಿದೆ. ಅಲ್ಲದೆ ದೆಹಲಿಯಿಂದ ಚಂಡೀಘರ್, ಉತ್ತರ ಪ್ರದೇಶಕ್ಕೆ, ಮುಂಬೈನಿಂದ ಇತರೆ ಪ್ರದೇಶಗಳಿಗೆ ವಿಮಾನಗಳು ಅಗತ್ಯ ಸರಕು ಸರಬರಾಜು ಮಾಡಿವೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.