ಭಾರತದ ವಿರುದ್ಧ ಇಸಿಸ್ ರೂಪಿಸುತ್ತಿದೆ ಮಹಾನ್ ಸಂಚು: ಉಗ್ರರ ವಶದಲ್ಲಿದ್ದ ವೈದ್ಯರ ಸ್ಫೋಟಕ ಮಾಹಿತಿ
ಇರಾಕ್ ಮತ್ತು ಸಿರಿಯಾದಲ್ಲಿ ತನ್ನ ಕುಕೃತ್ಯ ಮುಂದವರೆಸಿರುವ ವಿಶ್ವದ ಅತ್ಯಂತ ಶ್ರೀಮಂತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಮತ್ತು ಸಿರಿಯಾ (ಇಸಿಸ್) ಭಾರತ ದೇಶದ ವಿರುದ್ಧ ಮಹಾನ್ ಸಂಚು ರೂಪಿಸುತ್ತಿದೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.

ನವದೆಹಲಿ: ಇರಾಕ್ ಮತ್ತು ಸಿರಿಯಾದಲ್ಲಿ ತನ್ನ ಕುಕೃತ್ಯ ಮುಂದವರೆಸಿರುವ ವಿಶ್ವದ ಅತ್ಯಂತ ಶ್ರೀಮಂತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಮತ್ತು ಸಿರಿಯಾ (ಇಸಿಸ್) ಭಾರತ ದೇಶದ ವಿರುದ್ಧ ಮಹಾನ್ ಸಂಚು ರೂಪಿಸುತ್ತಿದೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.
ಈಗ್ಗೆ 2 ವರ್ಷಗಳ ಹಿಂದೆ ಇಸಿಸ್ ಉಗ್ರರಿಂದ ಅಪಹರಣಕ್ಕೊಳಗಾಗಿ ಉಗ್ರರ ಕಪಿಮುಷ್ಠಿಯಲ್ಲಿ ಬಂಧಿಯಾಗಿದ್ದ ಡಾ.ರಾಮಮೂರ್ತಿ ಅವರು, ಉಗ್ರ ಸಂಘಟನೆಯ ಸಂಚನ್ನು ಮತ್ತು ಅಲ್ಲಿ ತಾವು ಅನುಭವಿಸಿದ ನೋವನ್ನು ಎಳೆ ಎಳೆಯಾಗಿ ಬಿಟ್ಟಿಟ್ಟಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ಭಾರತದ ಕುರಿತಂತೆ ಸಾಕಷ್ಟು ಮಾಹಿತಿ ತಿಳಿದಿದೆ. ಇಲ್ಲಿನ ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಸ್ಛತಿಗತಿಗಳನ್ನು ಅವರು ಟೆನ್ನಾಗಿ ತಿಳಿದಿದ್ದಾರೆ. ಅಲ್ಲಿರುವವರೆಲ್ಲರೂ ಬಹುತೇಕ ವಿದ್ಯಾವಂತರು. ಹೀಗಾಗಿ ಅವರಿಗೆ ಇಲ್ಲಿನ ಅಭಿವೃದ್ದಿ, ಶಿಕ್ಷಣ ಮತ್ತ ಆರ್ಥಿಕತೆಯನ್ನು ಚೆನ್ನಾಗಿ ತಿಳಿದಿದ್ದಾರೆ. ಅಂತೆಯೇ ಭಾರತದ ಮೇಲೆ ತಮ್ಮ ಸಿದ್ಧಾಂತಗಳನ್ನು ಹೇರಲು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಅಲ್ಲದೆ ಇಲ್ಲಿಯೂ ಸಾಕಷ್ಟು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ರಾಮಮೂರ್ತಿ ಅವರು, ನಾನು ಸಿರ್ತೆ ನಗರದಲ್ಲಿದ್ದಾಗ ಒಂದು ದಿನ ಕೊಠಡಿಗೆ ದಿಢೀರನೆ ಆಗಮಿಸಿದ ಉಗ್ರರು ಕೂಡಲೇ ತಮ್ಮೊಂದಿಗೆ ಬರುವಂತೆ ಒತ್ತಾಯ ಮಾಡಿದರು. ಆಗ ನನ್ನೊಂದಿಗೆ ಮತ್ತೋರ್ವ ಭಾರತೀಯ ಕೂಡ ಇದ್ದ. ಇಬ್ಬರನ್ನೂ ಉಗ್ರರು ಸಿರ್ತೆಯಲ್ಲಿರುವ ಕೇಂದ್ರ ಕಾರಾಗೃಕ್ಕೆ ಕರೆದೊಯ್ದರು. ಜೈಲಿನಲ್ಲಿ ನಮಗೆ ಮತ್ತಿಬ್ಬರು ಭಾರತೀಯರನ್ನು ಭೇಟಿ ಮಾಡಿದೆವು. ಅವರನ್ನು 2 ತಿಂಗಳ ಹಿಂದೆಯೇ ಸಿರ್ತೆ ನಗರದ ಹೊರವಲಯದಿಂದ ಬಂಧಿಸಿ ತರಲಾಗಿತ್ತು. ಉಗ್ರರು ನನ್ನ ಮೇಲೆ ಎಂದಿಗೂ ದೈಹಿಕ ಹಲ್ಲೆ ಮಾಡಲಿಲ್ಲ. ಆದರೆ ಬಾಯಿಗೆ ಬಂದಂತೆ ಬೈಯುತ್ತಿದ್ದರು. ಅಲ್ಲಿ ಬಹುತೇಕ ಉಗ್ರರು ವಿದ್ಯಾವಂತರಾಗಿದ್ದರು. ಭಾರತ ಮತ್ತು ಭಾರತ ದೇಶದ ಸಂಸ್ಕೃತಿ ಬಗ್ಗೆ ಅವರಿಗೆ ಅರಿವಿತ್ತು. ನಾನು ವೈದ್ಯ ಎಂದು ತಿಳಿದಿದ್ದರಿಂದ ನನ್ನನ್ನು ಅವರು ಅಪಹರಿಸಿದ್ದರು. ಸಾಕಷ್ಟು ಬಾಕಿ ನನನ್ನು ಆಪರೇಷನ್ ಕೊಠಡಿಗೆ ತೆರಳಿ ಶಸ್ತ್ರಚಿಕಿತ್ಸೆ ನಡೆಸುವಂತೆ ಒತ್ತಾಯಿಸಿದ್ದರು. ಆದರೆ ನಾನು ಎಂದಿಗೂ ಶಸ್ತ್ರ ಚಿಕಿತ್ಸೆಯಲ್ಲಿ ತೊಡಗಿಕೊಂಡಿರಲಿಲ್ಲ.
ಜೈಲಿನಲ್ಲಿ ನಮಗೆ ಇಸ್ಲಾಂ ಧರ್ಮದ ಪಾಠ ಮಾಡುತ್ತಿದ್ದರು. ಐದು ಬಾರಿ ನಮಾಜ್ ಮಾಡುವ ಬಗೆ ಹಾಗೂ ಅದರ ಉದ್ದೇಶಗಳನ್ನು ತಿಳಿಸಿಕೊಡುತ್ತಿದ್ದರು. ಅಂತೆಯೇ ಅವರು ಇರಾಕ್, ಸಿರಿಯಾ, ನೈಜಿರಿಯೂ ಮತ್ತು ಇತರೆ ಪ್ರದೇಶಗಳಲ್ಲಿ ಮಾಡುತ್ತಿದ್ದ ದುಷ್ಕತ್ಯಗಳನ್ನು ತೋರಿಸುತ್ತಿದ್ದರು. ಆದರೆ ಅವುಗಳನ್ನು ನೋಡುವಷ್ಟು ಧೈರ್ಯ ಇರಲಿಲ್ಲ, ಹೀಗಿದ್ದೂ ಕೆಲ ವಿಡಿಯೋಗಳನ್ನು ನಾನು ನೋಡಿದ್ದೆ. ಇದು ತುಂಬಾ ಕಠಿಣಕರವಾಗಿತ್ತು. ಟರ್ಕಿ ಮತ್ತು ಕೊರಿಯನ್ನರಿಗೆ ಅವರು ಇಸ್ಲಾಂ ಬೋಧಿಸುತ್ತಿದ್ದರು. ರಂಜಾನ್ ವೇಳೆ ತಮ್ಮ ಬಳಿಗೆ ಆಗಮಿಸಿದ್ದ 16 ಮಂದಿ ಉಗ್ರರು ತಮಗೆ ವೈದ್ಯರ ಆಗತ್ಯವಿದೆ. ಶಸ್ತ್ರ ಚಿಕಿತ್ಸೆ ನಡೆಸಬೇಕು ಎಂದು ಕೇಳಿದ್ದರು. ಆದರೆ ನಾನು ಅದನ್ನು ತಿರಸ್ಕರಿಸಿದ್ದೆ, ನಾನು ಸರ್ಜನ್ ಅಲ್ಲ. ಕೇವಲ ವೈದ್ಯ ಎಂದು ಹೇಳಿದ್ದೆ. ಆದರೂ ನನ್ನನ್ನು ಸಿರ್ತೆ ಆಸ್ಪತ್ರೆಗೆ ರವಾನೆ ಮಾಡಿದ್ದರು.
ಆ ವೇಳೆಗಾಗಲೇ ಲಿಬಿಯಾ ಮಿಲಿಟರಿ ಪಡೆಗಳು ಇಸಿಸ್ ವಿರುದ್ಧ ಕಾರ್ಯಾಚರಣೆ ಆರಂಭವಾಗಿತ್ತು. ಬಾಬು ಮತ್ತು ಶೆಲ್ ಗಳ ಮಳೆಗರೆಯುತ್ತಿದ್ದರು. ಹೀಗಾಗಿ ನಮ್ಮ ಜೈಲುಗಳನ್ನು ನಿರಂತರವಾಗಿ ಸ್ಥಳಾಂತರ ಮಾಡಲಾಗುತ್ತಿತ್ತು. ಇದೇ ಸಂದರ್ಭದಲ್ಲೇ ನನ್ನ ಎಡಗೇ ಮತ್ತು ಎಡಗಾಲುಗಳಿಗೆ ಬುಲೆಟ್ ಗಾಯವಾಗಿತ್ತು. ನಾನು 10 ದಿನಗಳ ಕಾಲ ಕ್ಯಾಂಪ್ ನಲ್ಲಿದ್ದಾಗ ಅವರು ನನ್ನ ಮೇಲೆ ಮೂರು ಬಾರಿ ಅವರು ಗುಂಡು ಹಾರಿಸಿದ್ದರು. ನನ್ನ ಎಡಗೈ ಮತ್ತು ಎರಡೂ ಕಾಲುಗಳಿಗೆ ಬುಲೆಟ್ ಏಟು ತಗುಲಿತ್ತು. ಇಸಿಸ್ ವೈದ್ಯರು ಹಾಗೂ ಇತರೆ ನರ್ಸ್ ಗಳು ನನಗೆ ಚಿಕಿತ್ಸೆ ನೀಡಿದ್ದರು. ಇದಾದ ಬಳಿಕ ನಾವು ಸಾಕಷ್ಟು ಬಾರಿ ರಾಯಭಾರ ಕಚೇರಿಗಳನ್ನು ಸಂರ್ಕಿಸಿದ್ದೆವು. ಇದೀಗ ನಾವು ಭದ್ರತಾ ಪಡೆಗಳ ನೆರವಿನಿಂದಾಗಿ ಬಿಡುಗಡೆಯಾಗಿದ್ದೇವೆ. ಪ್ರಧಾನಮಂತ್ರಿಗಳಿಗೆ ಹಾಗೂ ನಾಸಾ ಅಧಿಕಾರಿಗಳಿಗೆ ನಾನು ಋಣಿಯಾಗಿರುತ್ತೇನೆ ಎಂದು ವೈದ್ಯ ರಾಮಮೂರ್ತಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


